ಲೇಡಿ ಬಾಸ್ ತಬ್ಬಿಕೊಂಡದನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ ಗೂಗಲ್ ಉದ್ಯೋಗಿ!
ಕಂಪೆನಿ ಎಂದ ಮೇಲೆ ಅಲ್ಲಿ ಕೆಲಸ ಕಾರ್ಯಗಳೊಂದಿಗೆ ಪಾರ್ಟಿ, ಮೋಜು ಮಸ್ತಿಗಳು ಇದ್ದೇ ಇರುತ್ತವೆ. ಅಥವಾ ಸಭೆಗಳೇನಾದ್ರೂ ಇದ್ರೆ ಲೈಟ್ ಆಗಿ ಒಂದು ಪಾರ್ಟಿ ಅರೆಂಜ್ ಆಗಿರುತ್ತೆ. ಹೈ ಫೈ ಕಂಪೆನಿಗಳ ಪಾರ್ಟಿ ಅಂದ್ರೆ ಕೇಳಬೇಕೆ? ಎಲ್ಲರೂ ಜಾಲಿ ಮಾಡೋಕೆ ಬಂದಿರುತ್ತಾರೆ. ಹುಡುಗ ಹುಡುಗಿ ಒಬ್ಬರನ್ನೊಬ್ಬರು ಹಿಡಿದು ಕೊಂಡು ಡ್ಯಾನ್ಸ್ ಮಾಡೋದು, ಫ್ಲರ್ಟ್ ಮಾಡೋದು ಇಂತಹ ಪಾರ್ಟಿಗಳಲ್ಲಿ ಸರ್ವೇ ಸಾಮಾನ್ಯ ಎನ್ನಬಹುದು. ಆದರೂ ಈ ರೀತಿ ವರ್ತನೆಗಳು ಕೆಲವರಿಗೆ ಹಿಡಿಸದೇ ಇರಬೋದು. ಅಂತೆಯೇ ಈ ಒಂದು ಪ್ರತಿಷ್ಟಿತ ಕಂಪೆನಿಯಲ್ಲಿ ಇದೇ ರೀತಿ ಪಾರ್ಟಿ ನಡೆದಿದೆ. ಎಲ್ಲರೂ ಎಂಜಾಯ್ ಮಾಡುವ ಮೂಡಿನಲ್ಲಿ ತಮ್ಮ ತಮ್ಮ ಜೊತೆಗಾರರನ್ನೂ ಹುಡುಕಿ ಮುದ್ದಿಸುತ್ತ, ಹೆಜ್ಜೆ ಹಾಕಲೂ ಶುರುಮಾಡಿದ್ದಾರೆ. ಆದರೆ ಅಲ್ಲೊಬ್ಬನಿಗೆ ಇದಾವುದೂ ಇಷ್ಟವಿಲ್ಲದಿದ್ದರೂ ಆ ಕಂಪೆನಿಯ ಲೇಡಿ ಬಾಸ್ ಒಬ್ರು ಆತನನ್ನು ಹಿಡಿದು ತಬ್ಬಿ ಮುದ್ದಿಸಿದ್ದಾರೆ. ಕೂಡಲೇ ಇದನ್ನು ಆತ ವಿರೋಧಿಸಿದ್ದಾನೆ. ವಿರೋಧ ವ್ತಕಮಾಡಿದ ಅನ್ನೊ ಒಂದೇ ಕಾರಣಕ್ಕೆ ಅವನನ್ನು ಕೆಲಸದಿಂದಲೇ ತೆಗೆದು ಹಾಕಿರೋ ಘಟನೆಯು ಕೂಡ ನಡೆದಿದೆ!!.
ಹೌದು, ಗೂಗಲ್‌ನ ಪ್ರೋಗ್ರಮ್ಯಾಟಿಕ್ ಮಾಧ್ಯಮದ ನಿರ್ದೇಶಕರಾಗಿದ್ದ ಟಿಫಾನಿ ಮಿಲ್ಲರ್ ನನ್ನನ್ನು ತಬ್ಬಿಕೊಂಡಿದ್ದಕ್ಕೆ ನಾನು ವಿರೋಧವನ್ನು ತೋರಿದೆ, ಈ ಕಾರಣಕ್ಕೆ ಕಂಪನಿಯ ಅಧಿಕಾರಿಗಳು ತನ್ನನ್ನು ವಜಾಗೊಳಿಸಿದ್ದಾರೆ ಎಂದು ಗೂಗಲ್ ಸಂಸ್ಥೆಯ ಮಾಜಿ ಉದ್ಯೋಗಿ ರಯಾನ್ ಓಲೋಹಾನ್ ಹೇಳಿದ್ದಾರೆ. ಈ ಕುರಿತು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಸಂಸ್ಥೆಯು ಡಿನ್ನರ್ ಒಂದನ್ನು ಏರ್ಪಡಿಸಿದ್ದು ಈ ಸಮಯದಲ್ಲಿ ಟಿಫಾನಿ ಮಿಲ್ಲರ್ ತನ್ನನ್ನು ತಬ್ಬಿಕೊಂಡರು, ಇದಕ್ಕೆ ನಾನು ವಿರೋದಿಸಿದಾಗ ಮ್ಯಾನ್‌ಹ್ಯಾಟನ್‌ನ ಚೆಲ್ಸಿಯಾದಲ್ಲಿ ಏಷ್ಯನ್ ಮಹಿಳೆಯರೊಂದಿಗೆ ನಿನಗೆ ಸಂಬಂಧ ಇರುವುದು ನನಗೆ ಗೊತ್ತು ಎಂದು ಇಲ್ಲ ಸಲ್ಲದ ಆರೋಪದೊಂದಿಗೆ ಸಂಸ್ಥೆಯಿಂದ ಹೊರಹಾಕಿದ್ದಾರೆ ಎಂದು ಆತನು ಆರೋಪಿಸಿದ್ದಾನೆ.
ಈ ಕುರಿತು ರಯಾನ್ ಓಲೋಹಾನ್ ನವೆಂಬರ್‌ನಲ್ಲಿ ಮೊಕದ್ದಮೆಯನ್ನೂ ಹೂಡಿದ್ದಾರೆ. ಆಹಾರ, ಪಾನೀಯಗಳು ಮತ್ತು ರೆಸ್ಟೋರೆಂಟ್‌ಗಳ ವ್ಯವಸ್ಥಾಪಕ ನಿರ್ದೇಶಕರಾಗಿ ರಯಾನ್ ಓಲೋಹಾನ್ ಬಡ್ತಿ ಪಡೆದ ನಂತರ, ಆಲ್ಕೋಹಾಲ್ ಒಳಗೊಂಡ ಕಂಪನಿಯ ಸಭೆಯು ಫಿಗ್ ಮತ್ತು ಆಲಿವ್‌ನಲ್ಲಿ ನಡೆಯಿತು. ಟಿಫಾನಿ ಮಿಲ್ಲರ್ ಆ ಹೊಸ ತಂಡದ ಭಾಗವಾಗಿದ್ದರು ಎಂದು ವರದಿಯಾಗಿದೆ. ಅವರು ರಯಾನ್ ಓಲೋಹಾನ್ ಅವರನ್ನು ತಬ್ಬಿಕೊಂಡು ಆಬ್ಸ್ ಅನ್ನು ಉಜ್ಜಿದರು, ದೇಹದ ಮೈಮಾಟವನ್ನು ಹೊಗಳಿದರು ಮತ್ತು ಮದುವೆಯಲ್ಲಿ ಯಾವುದೇ ಎಂಜಾಯ್ಮೆಂಟ್ ಇಲ್ಲ ಎಂದು ಹೇಳಿದರು ಎಂದು ಅವರು ನೀಡಿದ ಕೋರ್ಟ್ ಪೇಪರ್ಸ್ ಹೇಳುತ್ತದೆ.
ಈ ಎಲ್ಲಾ ಕ್ಷುಲ್ಲಕ ಕಾರಣಕ್ಕಾಗಿ ಜುಲೈನಲ್ಲಿ, ಗೂಗಲ್ ಓಲೋಹಾನ್ ಅವರನ್ನು ವಜಾಗೊಳಿಸಿತು, ಇದು ಕಂಪನಿಯೊಂದಿಗಿನ ಅವರ 16 ವರ್ಷಗಳ ಒಡನಾಟವನ್ನು ಕೊನೆಗೊಳಿಸಿತು ಎಂದೂ ನ್ಯೂಯಾರ್ಕ್ ಪೋಸ್ಟ್ ವರದಿ ಹೇಳಿದೆ.