ಡಯಾಬಿಟಿಸ್ ನಿಯಂತ್ರಣಕ್ಕೆ ಈ ಎಲೆಯ ರಸವನ್ನು ಕುಡಿಯಿರಿ

ಮಧುಮೇಹ ಅಥವಾ ಡಯಾಬಿಟಿಸ್ ಕಾಯಿಲೆ ಒಮ್ಮೆ ಬಂತೆಂದರೆ ಅದನ್ನು ಗುಣಪಡಿಸಲು ಹರಸಾಹಸ ಪಡಬೇಕಾಗುತ್ತದೆ. ಅದನ್ನು ಗುಣಪಡಿಸುತ್ತೇವೆ ಎಂಬುದು ಕಷ್ಟಕರವಾದರೂ ನಿಯಂತ್ರಣದಲ್ಲಿ ಇಡಬಹುದು. ಈ ಮಧುಮೇಹ ನಿಯಂತ್ರಣಕ್ಕೆ ಅಲೋವೆರಾ ಸಹಕಾರಿಯಾಗಿದೆ. ಮಧುಮೇಹ ರೋಗಿಗಳಿಗೆ ಅಲೋವೆರಾದ ರಸ ತುಂಬಾ ಪ್ರಯೋಜನಕಾರಿಯಾಗಿದ್ದು, ಇದರ ಬಳಕೆಯು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಅಲೋವೆರಾದಲ್ಲಿ ಅಸೆಮನ್ನನ್ ಎಂಬ ಅಂಶವಿದ್ದು, ಇದು ಹೈಪೋಗ್ಲೈಸೆಮಿಕ್ ಅಂದರೆ ಇದು ಗ್ಲುಕೋಸ್ ಕಡಿಮೆ ಮಾಡುತ್ತದೆ. ಅಲೋವೆರಾದಲ್ಲಿ ಹೈಡ್ರೋಫಿಲಿಕ್ ಫೈಬರ್, ಗ್ಲುಕೊಮಾನಾನ್ ಮತ್ತು ಫೈಟೋಸ್ಟೆರಾಲ್ ನಂತಹ ಅನೇಕ ಸಂಯುಕ್ತಗಳಿವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಅಲೋವೆರಾವನ್ನು ಹೇಗೆ ಸೇವಿಸಬೇಕು ಎಂಬುದನ್ನು ನೋಡೋಣ.

ಮೊದಲು ಅಲೋವೆರಾ ಎಲೆಯ ಮೇಲ್ಬಾಗದ ಸಿಪ್ಪೆ ತೆಗೆಯಿರಿ. ನಂತರ ಅದರಲ್ಲಿನ ಜೆಲ್ ಅನ್ನು ಹೊರತೆಗೆದು ಪಾತ್ರೆಗೆ ಹಾಕಿಕೊಳ್ಳಿ. ಇದಾದ ಬಳಿಕ ಆ ಜೆಲ್ ಅನ್ನು ಚೆನ್ನಾಗಿ ರುಬ್ಬಿ. ಇಷ್ಟೆ ಇನ್ನು ಅದರಲ್ಲಿ ಉಪ್ಪು, ನಿಂಬೆ ಮತ್ತು ಕರಿಮೆಣಸು ಬೆರೆಸಿ, ಕುಡಿಯಿರಿ. ಹೀಗೆ ಮಾಡುವುದರಿಂದ ಡಯಾಬಿಟಿಸ್ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ. ಈ ಅಲೋವೆರಾ ಜ್ಯೂಸ್ ಅನ್ನು ಮಧುಮೇಹ ಮತ್ತು ಮಧುಮೇಹ ಪೂರ್ವ ರೋಗಿಗಳು ಕುಡಿಯಬಹುದಾಗಿದೆ. ಈ ಪಾನೀಯವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ‌.

ಅಲೋವೆರಾ ಹೃದಯಾಘಾತದಂತಹ ಹಲವು ಕಾಯಿಲೆಗಳಿಂದ ರಕ್ಷಿಸುವ ಅನೇಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಹಾಗಾಗಿ ಈ ಅಲೋವೆರಾ ಸೇವನೆ ಆರೋಗ್ಯಕರ. ಅಲೊವೆರಾ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ಮಧುಮೇಹ ರೋಗಿಗಳಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಅಲೋವೆರಾ ಜ್ಯೂಸ್ ಅನ್ನು ನಿಯಮಿತವಾಗಿ ಸೇವನೆ ಮಾಡಿದರೆ, ಮಲಬದ್ಧತೆ, ಆಮ್ಲೀಯತೆ ಮತ್ತು ಅಜೀರ್ಣದಂತಹ ಸಮಸ್ಯೆಗಳು ದೂರಾಗುತ್ತದೆ. ಇದರ ಸೇವನೆಯಿಂದ ಈ ಸಮಸ್ಯೆಗಳು ಎದುರಾಗಲ್ಲ.

ಅಲೋವೆರಾದಲ್ಲಿನ ಉತ್ಕರ್ಷಣ ನಿರೋಧಕ ಗುಣಲಕ್ಷಣದಿಂದ ಹುಣ್ಣುಗಳು, ಗಾಯಗಳು, ಮಧುಮೇಹಕ್ಕೆ ಸಂಬಂಧಿಸಿದ ಮೂತ್ರಪಿಂಡದ ಹಾನಿಯಂತಹ ಜೀವಕೋಶದ ಹಾನಿಯನ್ನು ತಡೆಯುತ್ತದೆ. ಅಲ್ಲದೆ, ಇದು ದೇಹದ ಆಂತರಿಕ ಶುದ್ಧೀಕರಣಕ್ಕೆ ಕಾರಣವಾಗುತ್ತದೆ. ದಿನಕ್ಕೆ ಒಂದು ಲೋಟ ಅಲೋವೆರಾ ಜ್ಯೂಸ್ ಅನ್ನು ಕುಡಿದರೆ ಈ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ. ಮಧುಮೇಹವನ್ನೂ ನಿಯಂತ್ರಿಸಬಹುದು. ಆದರೆ ಈ ಬಗ್ಗೆ ವೈದ್ಯರನ್ನು ಭೇಟಿಯಾಗಿ, ಅವರ ಸಲಹೆ ಪಡೆಯುವುದು ಉತ್ತಮ.

Leave A Reply

Your email address will not be published.