ನೆಟ್ಟಾರ್ ಹತ್ಯೆಗೆ ಪ್ರತೀಕಾರ ಫಾಝಿಲ್ ಹತ್ಯೆ ?! ಸುರತ್ಕಲ್ ನಲ್ಲಿ ತಲವಾರು ಬೀಸಿದ ಪುಂಡರ ಹಿಂದಿತ್ತೇ ವಿಹಿಂಪ ??! ಶರಣ್ ಪಂಪ್ ವೆಲ್ ಪ್ರಚೋದನೆ – ಕಮಿಷನರ್ ಅಂಗಳಕ್ಕೆ!!
ಮಂಗಳೂರು: ಕಳೆದ ಕೆಲ ತಿಂಗಳುಗಳ ಹಿಂದೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಹಾಗೂ ಅದರ ಬೆನ್ನಲ್ಲೇ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಯ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ಕರಾವಳಿಯಲ್ಲಿ ಸಂಚಲನ ಮೂಡಿಸುವುದರೊಂದಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.
ಮಂಗಳೂರಿನ ಉಳ್ಳಾಲದಲ್ಲಿ ನಡೆದಿದ್ದ ವಿಶ್ವ ಹಿಂದೂ ಪರಿಷತ್ ಶೌರ್ಯ ಯಾತ್ರೆ ಕಾರ್ಯಕ್ರಮದಲ್ಲಿ ಪ್ರಮುಖರಾಗಿ ಮಾತನಾಡಿದ ಪಂಪ್ವೆಲ್, ಪ್ರವೀಣ್ ನೆಟ್ಟಾರು ಹತ್ಯೆ ವಿಚಾರವನ್ನು ಮಾತನಾಡಿದ್ದು, ನೆಟ್ಟಾರು ಹತ್ಯೆಯನ್ನು ಕಂಡ ಹಿಂದೂ ಸಮಾಜ ಸುಮ್ಮನೆ ಕೂರದೆ ಸುರತ್ಕಲ್ ನಲ್ಲಿ ಪ್ರತೀಕಾರ ತೀರಿಸಿದೆ. ಫಾಝಿಲ್ ಹತ್ಯೆಯೇ ನಮ್ಮ ಶೌರ್ಯ ಎನ್ನುತ್ತಾ, ಸದ್ಯ ಬ್ಯಾನ್ ಆಗಿರುವ ಪಿಎಫ್ಐ ಇನ್ನೂ ಜೀವಂತವಿದ್ದು, ಹಿಂದೂ ಯುವಕರ ಹತ್ಯೆಗೆ ಹೊಂಚು ಹಾಕುತ್ತಿದೆ. ಮುಂದೆ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಹಿಂದೂ ಮುಖಂಡ, ಕಾರ್ಯಕರ್ತರ ಹತ್ಯೆ ಅಥವಾ ಹತ್ಯೆಗೆ ಪ್ರಯತ್ನ ನಡೆದರೂ ನಮ್ಮ ಕಾರ್ಯಕರ್ತರು ಪ್ರತೀಕಾರ ತೀರಿಸಲಿದ್ದು, ಒಬ್ಬನ ಹತ್ಯೆಗೆ ನಿಮ್ಮ ಹತ್ತು ತಲೆಗಳು ಆಸ್ಪತ್ರೆ ಸೇರುತ್ತವೆ ಎನ್ನುವ ಪ್ರಚೋದನಕಾರಿ, ವಿವಾದತ್ಮಕ ಹೇಳಿಕೆ ಸದ್ಯ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಮೃತ ಫಾಝಿಲ್ ತಂದೆ ಕಿಡಿಕಾರಿದ್ದು, ಫಾಝಿಲ್ ಹತ್ಯೆಯ ಹಿಂದೆ ಸಂಘಟನೆಗಳ ನೇರ ಕೈವಾಡವಿದ್ದು, ರಾಜಕೀಯ ನಾಯಕರೂ ಹತ್ಯೆ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎಂದಿದ್ದಾರೆ. ಹತ್ಯೆ ಸಂಬಂಧ 8 ಜನರನ್ನು ಬಂಧಿಸಿದ್ದು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಹತ್ಯೆ ನಡೆದ ದಿನವೇ ಎಲ್ಲಾ ಅನುಮಾನಗಳನ್ನು ಪೊಲೀಸರಿಗೆ ಹೇಳಿದ್ದು, ಆದರೂ ಕೇವಲ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ ಪ್ರಕರಣ ಮುಚ್ಚಿ ಹಾಕಲಾಗಿದೆ ಎಂದರು.
ಭಜರಂಗದಳದ ಶೌರ್ಯ ಯಾತ್ರೆಯಲ್ಲಿ ಹೇಳಿದ್ದಾರೆ ಎನ್ನಲಾದ ವಿಡಿಯೋ ತುಣುಕೊಂದು ಸ್ಥಳೀಯ ಯು ಟ್ಯೂಬ್ ನಲ್ಲಿ ಆಧಾರದ ಮೇಲೆ ಮೃತ ಫಾಜಿಲ್ ನ ಅಪ್ಪ ಉಮರ್ ಅವರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಭಾರೀ ಚರ್ಚೆಯಾಗಿದ್ದು, ಪ್ರಕರಣವು ನಗರ ಪೊಲೀಸ್ ಆಯುಕ್ತರ ಕಚೇರಿಯ ಮೆಟ್ಟಿಲೇರಿದೆ. ಶರಣ್ ಪಂಪ್ ವೆಲ್ ಅವರ ಹೇಳಿಕೆಯ ಆಧಾರದ ಮೇಲೆ ಮೃತ ಫಾಝಿಲ್ ತಂದೆ ಉಮರ್ ಫಾರೂಕ್ ಅವರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ದೂರು ನೀಡಿರುತ್ತಾರೆ. ಇಂತಹ ಪ್ರಚೋದನಕಾರಿ ಹೇಳಿಕೆಗಳು ಮುಂದೆ ಜಿಲ್ಲೆಯನ್ನು ಯಾವ ಸ್ಥಿತಿಯತ್ತ ನೂಕುತ್ತದೆ ಎನ್ನುವ ಅನುಮಾನ ಪ್ರಜ್ಞಾವಂತ ನಾಗರಿಕರಲ್ಲಿ ಮೂಡಿದೆ.
ಬೆಳ್ಳಾರೆಯಲ್ಲಿ ಮಸೂದ್ ಹತ್ಯೆಯ ಬೆನ್ನಲ್ಲೇ, ಪ್ರವೀಣ್ ನೆಟ್ಟಾರ್ ರ ಮರ್ಡರ್ ಆಯಿತು. ನಂತರ ಕೆಲ ದಿನಗಳಲ್ಲೇ ಮಂಗಳೂರಿನ ಸುರತ್ಕಲ್ ನಲ್ಲಿ ಫಾಝಿಲ್ ನ ಕೊಲೆ ನಡೆಯಿತು. ಇಲ್ಲಿಯ ತನಕ ಪರಿಸ್ಥಿತಿ ಪ್ರಕ್ಷುಬ್ಧವಾಗಿಯೇ ಇದೆ.
ನಿನ್ನೆ ತಾನೇ ವಿಶ್ವಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ ಪಂಪವೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶರಣ್ ಪಂಪವೆಲ್ ಮಾತನಾಡುತ್ತಾ, ಗುಜರಾತ್ ದುರಂತವನ್ನು ಹಿಂದುಗಳ ಪರಾಕ್ರಮಕ್ಕೆ ಹೋಲಿಸಿದ್ದರು. ಅಲ್ಲಿ ರೈಲಿಗೆ ಬೆಂಕಿ ಹಾಕಿ 59 ಜನ ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ 2 ಸಾವಿರ ಜನರ ಹತ್ಯೆ ಮಾಡಿದ್ದೇವೆ…ಇನ್ನೂ ಸಾವಿನ ಖಚಿತ ಲೆಕ್ಕ ಸಿಕ್ಕಿಲ್ಲ. ಗುಜರಾತ್ ಹತ್ಯಾಕಾಂಡ ಹಿಂದುಗಳ ಪರಾಕ್ರಮ. ಹಿಂದುಗಳು ಷಂಡರಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ. ಹಿಂದು ಸಮಾಜ ಯಾವತ್ತೂ ನಪುಂಸಕ ಸಮಾಜ ಅಲ್ಲ, ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ ಎಂದು ತುಮಕೂರಿನಲ್ಲಿ ನಡೆದ ಬಜರಂಗದ ದಳದ ಶೌರ್ಯ ಯಾತ್ರೆಯಲ್ಲಿ ಅವರು ಹೇಳಿಕೆ ನೀಡಿದ್ದರು.
ಅಯೋದ್ಯೆಯ ಮಂದಿರಕ್ಕಾಗಿ 59ಜನರು ಕರ ಸೇವೆಗೋಸ್ಕರ ರೈಲಿನಲ್ಲಿ ಬರಬೇಕಾದರೆ, ಆ ರೈಲನ್ನು ಸುಟ್ಟು 59 ಕರ ಸೇವಕರ ಹತ್ಯೆ ಮಾಡಿದರು. ಅದರ ಬಳಿಕ ಗುಜರಾತ್ ದುಷ್ಕರ್ಮಿಗಳಿಗೆ ಯಾವ ರೀತಿಯ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟಿತು ಎಂಬುದನ್ನು ನೆನಪಿಸಿಕೊಳ್ಳಿ.
ಯಾವ ಹಿಂದು ಕೂಡ ಅಲ್ಲಿ ಮನೆಯಲ್ಲಿ ಕುಳಿತಿಲ್ಲ. ರಸ್ತೆಗೆ ಇಳಿದ್ರು,ಮನೆ ಮನೆಗೆ ನುಗ್ಗಿದ್ರು, ಕರಸೇವಕರ ಹತ್ಯೆ ನಡೆದಿದ್ದು 59, ಆದರೆ ನಂತರ ಗುಜರಾತಿನಲ್ಲಿ ನಡೆದ ಹತ್ಯೆಯ ಸಂಖ್ಯೆ ಇನ್ನೂ ಲೆಕ್ಕ ಸಿಕ್ಕಿಲ್ಲ. ಅಂದಾಜು ಸುಮಾರು 2 ಸಾವಿರ ಹತ್ಯೆಯಾಗಿದೆ. ಇದು ಹಿಂದುಗಳ ಪರಾಕ್ರಮ ಎಂದು ಶರಣ್ ಹೇಳಿಕೊಂಡಿದ್ದರು.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ನಮ್ಮ ನೆಲವಾದ ಮಂಗಳೂರಿಗೆ ಬಂದು, ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ ಆಗಿದೆ ಎನ್ನುತ್ತಾರೆ. ಸಿದ್ದರಾಮಯ್ಯನವರೇ ನೆನಪಿರಲಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಅಲ್ಲ, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಕೂಡ ಹಿಂದುತ್ವದ ಫ್ಯಾಕ್ಟರಿ ಆಗಲಿದೆ. ನಾವು ಅನಿವಾರ್ಯ ಮತ್ತು ಅವಶ್ಯಕತೆ ಬಂದರೆ ಹೊಡೆದಾಟ ಮಾಡಲು ಸಿದ್ದ; ನಾವು ನುಗ್ಗಿ ಹೊಡೆಯಲು ಸಿದ್ಧ. ನಾವು ಬಜರಂಗದಳ ಶೌರ್ಯ ಯಾತ್ರೆಯ ಮೂಲಕ ತುಮಕೂರಿನಲ್ಲಿ ಸಂಚಲನ ಮೂಡಿಸಿದ್ದೇವೆ. ಕರ್ನಾಟಕದ ಎಲ್ಲಾ ಜಿಲ್ಲೆಗಳು ಮುಂದಿನ ದಿನಗಳಲ್ಲಿ ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದು ಶರಣ್ ಹೇಳಿದ್ದರು.