16ರ ಬಾಲಕಿ ಹೃದಯಾಘಾತಕ್ಕೆ ಬಲಿ!
ಈಗಂತೂ ಕಾಯಿಲೆಗಳು ವಯಸ್ಸನ್ನು ನೋಡಿ ಬರುವುದೇ ಇಲ್ಲ. ಅದೂ ಅಲ್ಲದೆ ಯಾವ ಕಾಯಿಲೆ ಯಾರಿಗೆ ಬರುತ್ತದೆ ಎಂದು ಹೇಳಲು ಹೇಗೆ ಸಾದ್ಯ ಅಲ್ಲವೆ? ಎಂತೆಂತ ದೊಡ್ಡ ಕಾಯಿಲೆಗಳೂ ಕೂಡ ಇಂದು ಪುಟ್ಟ ಪುಟ್ಟ ಪುಣಾಣಿಗಳಿಗೆ ಬಂದೊಕ್ಕರಿಸುತ್ತಿವೆ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳಂತೂ ಹೆಚ್ಚೇ ಎಂದು ಹೇಳಬಹುದು. ಇದೀಗ ಇಂತದೇ ಒಂದು ಸಮಸ್ಯೆ 16ರ ಬಾಲಕಿಯನ್ನು ಮರಣದ ಶಯ್ಯೆಗೆ ದೂಡಿದೆ.
ಹೌದು, 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಶಾಲೆಯೊಂದರಲ್ಲಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ವೃಂದಾ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಈಕೆ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಳು. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ಪೂರ್ವ ತಯಾರಿ ಮಾಡುತ್ತಿರುವಾಗ ವೃಂದಾ ಕುಸಿದುಬಿದ್ದಿದ್ದಾಳೆ.
ವೃಂದಾಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃಂದಾ ಮೃತಪಟ್ಟಿದ್ದಾಳೆ. ವೃಂದಾಳಿಗೆ ಹೃದಯಾಘಾತವಾಗುವ ಮೊದಲು ಸಂಪೂಣವಾಗಿ ಆರೋಗ್ಯವಾಗಿದ್ದಳು. ಆದರೆ ಆಕೆ ಶೀತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಕೊಡಗಿನ ಕುಶಾಲ ನಗರದಲ್ಲಿ 6ನೇ ತರಗತಿ ವಿದ್ಯಾರ್ಥಿಯೊಬ್ಬ ಇದೇ ರೀತಿ ಹೃದಯಾಘಾತದಿಂದ ಸಾವನಪ್ಪಿ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಇದರ ಬೆನ್ನಲ್ಲೇ ಈ ವಿದ್ಯಾರ್ಥಿನಿಯ ಸಾವು ಎಲ್ಲರಲ್ಲೂ ಆತಂಕ ಮೂಡಿಸಿದೆ. ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಂತಹ ಸಮಸ್ಯೆಗಳು ಎದುರಾದರೆ ಮುಂದೇನು ಎನ್ನುವ ಪ್ರಶ್ನೆ ಭಯಪಡಿಸುತ್ತದೆ.