ಮನೆಯೊಳಗೆ ಕೂದಲು ಬಾಚುವ ಅಭ್ಯಾಸ ನಿಮಗಿದೆಯೇ? | ಹಾಗಿದ್ರೆ ನಿಮಗೆ ಈ ಪರಿಸ್ಥಿತಿ ಎದುರಾಗೋದು ಗ್ಯಾರಂಟಿ
ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳು ಮಾಡುವುದೇ ಅಶುಭದ ಸಂಕೇತವಾಗಿದೆ.
ಹೌದು. ಹಿರಿಯರ ಪ್ರಕಾರ ಅಶುಭ ಎಂದೆನಿಸುವ ಕೆಲಸಗಳನ್ನು ಮಾಡಲೇಬಾರದು. ಆದ್ರೆ, ಇಂದಿನ ಕಾಲದಲ್ಲಿ ಕೆಲವೊಂದಷ್ಟು ಜನ ಮಾತ್ರ ಈ ನಂಬಿಕೆಗಳನ್ನು ನಂಬುತ್ತಾರೆ. ಇನ್ನೂ ಉಳಿದ ಜನ ಇದೆಲ್ಲ ಮೂಢನಂಬಿಕೆ ಎಂದು ತಮಗಿಷ್ಟ ಬಂದಂತೆ ಸಮಯವನ್ನು ನೋಡದೆ ಕೆಲಸಗಳನ್ನು ಮುಂದುವರಿಸುತ್ತಾರೆ.
ವಾಸ್ತು ಪ್ರಕಾರ ನೋಡುವುದಾದರೆ ಹಲವು ಕೆಲಸಗಳನ್ನು ಕೆಲವು ಸಮಯಗಳಲ್ಲಿ ಮಾಡಲೇಬಾರದು. ಅಂತಹ ಕಾರ್ಯಗಳಲ್ಲಿ ಮನೆಯೊಳಗೇ ಕೂದಲು ಬಾಚುವುದು ಕೂಡ ಒಂದು. ಹೌದು. ಮಹಿಳೆಯರು ಮನೆಯಲ್ಲಿ ಎಂದಿಗೂ ತಮ್ಮ ತಲೆಯನ್ನ ಬಾಚಿಕೊಳ್ಳಬಾರದು. ಈ ರೀತಿ ಮನೆಯಲ್ಲಿ ಕುಳಿತು ತಲೆ ಬಾಚಿಕೊಂಡ್ರೆ ಏನಾಗುತ್ತೆ ಅನ್ನೋ ಪ್ರಶ್ನೆ ನಿಮಗೆ ಬರಬಹುದು. ಅದಕ್ಕೆ ಕಾರಣ ಏನು ಎಂಬುದನ್ನು ಮುಂದೆ ತಿಳಿಸುತ್ತೇವೆ.
ಮನೆಯೊಳಗೇ ಕೂದಲು ಬಾಚಿದರೆ ಬಡತನವು ಎದುರಾಗುತ್ತೆ. ಅಲ್ಲದೆ, ತಲೆಯ ಕೂದಲು ಮನೆಯಲ್ಲಿ ಉದುರುವುದರಿಂದ ಶನಿ ದೇವರಿಗೆ ಆಹ್ವಾನವೆಂದು ಪರಿಗಣಿಸಲಾಗುತ್ತದೆ. ಹಾಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಇನ್ನು ಮಹಿಳೆಯರು ಯಾವುದೇ ಪ್ರಮುಖ ಕೆಲಸಕ್ಕೆ ಹೋಗುವಾಗ ತಮ್ಮ ಕೂದಲು ಕತ್ತರಿಸಿಕೊಂಡರು ಹೋಗಬಾರದು. ಒಂದು ವೇಳೆ ಆ ರೀತಿ ಮಾಡಿದ್ರೆ ಆ ಕಾರ್ಯಗಳಲ್ಲಿ ಅಡೆತಡೆಗಳು ಖಂಡಿತ ಎದುರಾಗುತ್ತದೆ.
ಅಷ್ಟೇ ಅಲ್ಲದೆ, ಮಹಿಳೆಯರು ಮಂಗಳವಾರದಂದು ಕೂದಲನ್ನು ಕತ್ತರಿಸಬಾರದು. ಮಂಗಳವಾರ ಕೂದಲು ಕತ್ತರಿಸುವುದು ಅಶುಭ ಎಂದು ಹೇಳಲಾಗುತ್ತದೆ. ಅಲ್ಲದೆ, ಸಂಜೆ ಮುಸ್ಸಂಜೆಯ ನಂತರವೂ ಮಹಿಳೆಯರು ತಮ್ಮ ತಲೆಗಳನ್ನ ಬಾಚಿಕೊಂಡ್ರೆ ಮನೆಯಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ, ಯಾವುದೇ ಒಂದು ಕೆಲಸಗಳನ್ನು ಮಾಡುವ ಮುನ್ನ ವಾಸ್ತು ಪ್ರಕಾರ ತಿಳಿದುಕೊಂಡು ಮಾಡುವುದು ಸೂಕ್ತ. ಇಲ್ಲವಾದಲ್ಲಿ ಬಡತನ ಕಟ್ಟಿಟ್ಟ ಬುತ್ತಿ.