Mood of the Nation 2023 । ಇಂಡಿಯಾ ಟುಡೇ (India Today) ಮತ್ತು ಸಿ ವೋಟರ್ಸ್ (C Voters) ಸಮೀಕ್ಷೆ ಬಹಿರಂಗ, ಇವರೇ ನೋಡಿ ದೇಶದ ಬೆಸ್ಟ್ ಪ್ರಧಾನಿ, ಶಾರ್ಪ್ ಚೀಫ್ ಮಿನಿಸ್ಟರ್ !

ದೇಶದ ಜನರ ಮೂಡನ್ನು ಅರ್ಥಮಾಡಿಕೊಳ್ಳಲು ‘ Mood of the nation 2023 ‘ ಸರ್ವೆ ನಡೆಸಲಾಗಿದ್ದು ಅದರಲ್ಲಿ ಭಾರತದ ಉತ್ತಮ ಪ್ರಧಾನಿ ಮತ್ತು ಮುಖ್ಯಮಂತ್ರಿ ಯಾರೆಂಬುದು ಗೊತ್ತಾಗಿದೆ. 16% ಜನರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮತ ಹಾಕಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿರುವ 12 ಶೇ.ರಷ್ಟು ಜನರು ಇಂದಿರಾ ಗಾಂಧಿ ಅತ್ಯುತ್ತಮ ಪ್ರಧಾನಿ ಎಂದು ಹೇಳಿದ್ದಾರೆ. ಮನಮೋಹನ್ ಸಿಂಗ್ 8% ಮತಗಳನ್ನೂ, ಜವಾಹರಲಾಲ್ ನೆಹರು ಕೇವಲ 4% ಜನ ಬೆಂಬಲ ಗಳಿಸಿದ್ದಾರೆ. ಇಂಡಿಯಾ ಟುಡೇ (India Today) ಮತ್ತು ಸಿ ವೋಟರ್ಸ್ (C Voters) ನಡೆಸಿದ ಮೂಡ್ ಆಫ್ ದಿ ನೇಷನ್ ಪೋಲ್‌ (Mood of the Nation Poll) ನಲ್ಲಿ ಸಹಜವಾಗಿ 47% ಜನರು ಪಿಎಂ ಮೋದಿಯವರನ್ನು ಅತ್ಯುತ್ತಮ ಪ್ರಧಾನಿ ಎಂದು ಕರೆದಿದ್ದಾರೆ.

ದೇಶದ ಅತ್ಯುತ್ತಮ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಜನರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ದೇಶದ 30 ಮುಖ್ಯಮಂತ್ರಿಗಳ ಪೈಕಿ ಸಿಎಂ ಯೋಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಎಂದು ಸಾರ್ವಜನಿಕರಿಂದ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅತ್ಯುತ್ತಮ ಮುಖ್ಯಮಂತ್ರಿ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಯಾರು ಈ ಪ್ರಶ್ನೆಗೆ 39.1 ಪ್ರತಿಶತ ಜನರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ . ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ನಂತರದ ಸ್ಥಾನದಲ್ಲಿದ್ದಾರೆ. ಸಮೀಕ್ಷೆ ಪ್ರಕಾರ ಅರವಿಂದ್ ಕೇಜ್ರಿವಾಲ್ ಎರಡನೇ ಸ್ಥಾನ ಪಡೆದಿದ್ದಾರೆ. 16 ರಷ್ಟು ಜನರು ಅವರಿಗೆ ಮತ ಹಾಕಿದ್ದಾರೆ ಎಂದು ಇಂಡಿಯಾ ಟುಡೇ – ಸಿವೋಟರ್ ಮೂಡ್ ಆಫ್ ದಿ ನೇಷನ್ 2023 ಸಮೀಕ್ಷೆಯು ಕಂಡುಹಿಡಿದಿದೆ. ಯೋಗಿ ಆದಿತ್ಯನಾಥ್ ಅವರನ್ನು ದೇಶದ “ಅತ್ಯುತ್ತಮ ಕಾರ್ಯನಿರ್ವಹಣೆಯ ಮುಖ್ಯಮಂತ್ರಿ” ಎಂದು ಪರಿಗಣಿಸಿದ್ದಾರೆ.

ಸಮೀಕ್ಷಾ ವರದಿಗಳ ಪ್ರಕಾರ, ಕಳೆದ ವರ್ಷ ಆಗಸ್ಟ್‌ಗೆ ಹೋಲಿಸಿದರೆ ಅರವಿಂದ್ ಕೇಜ್ರಿವಾಲ್ ಅವರ ಜನಪ್ರಿಯತೆಯಲ್ಲಿ ಬರೋಬ್ಬರಿ 6 ಶೇಕಡಾ ರಷ್ಟು ಕುಸಿತವಾಗಿದೆ. ಆಗ ಅವರು 22 ಪ್ರತಿಶತದಷ್ಟು ಜನರ ಆಯ್ಕೆಯಾಗಿದ್ದರು. ಮಮತಾ ಬ್ಯಾನರ್ಜಿ ಅವರ ಜನಪ್ರಿಯತೆಯೂ ಕಳೆದ ವರ್ಷಕ್ಕಿಂತ ಶೇ.1 ರಷ್ಟು ಕುಸಿದಿದೆ.

ಒಟ್ಟು 1,40,917 ಜನರನ್ನು ಸಂದರ್ಶಿಸಿ ”ಮೂಡು ” ಪರೀಕ್ಷೆ ಮಾಡಿದ ಸಮೀಕ್ಷೆಯು 30 ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಡೆದಿತ್ತು. ಇಂದು ಲೋಕಸಭೆ ಚುನಾವಣೆ ನಡೆದರೆ ಭಾರತೀಯ ಜನತಾ ಪಕ್ಷ 284 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಹಾಗೆಯೇ ಕಾಂಗ್ರೆಸ್ 68 ಮತ್ತು ಇತರರು 191 ಸ್ಥಾನಗಳನ್ನು ಗಳಿಸಬಹುದು ಎಂದು ಅದು ತೀರ್ಮಾನಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈಗಲೂ ಅತ್ಯಂತ ಜನಪ್ರಿಯ ನಾಯಕರಾಗಿ ಉಳಿದಿದ್ದಾರೆ ಎಂದು ಪ್ರತಿಕ್ರಿಯಿಸಿದವರಲ್ಲಿ 72 ಪ್ರತಿಶತದಷ್ಟು ಜನರು ಅವರ ಕಾರ್ಯಕ್ಷಮತೆಯಿಂದ ತೃಪ್ತರಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ, ಪ್ರತಿಕ್ರಿಯಿಸಿದವರಲ್ಲಿ 37 ಪ್ರತಿಶತಕ್ಕೂ ಹೆಚ್ಚು ಜನರು ಇದು ಸಂಚಲನವನ್ನು ಸೃಷ್ಟಿಸಿದೆ, ಆದರೆ ಈ ಯಾತ್ರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

20 ಶೇಕಡಾ ಜನರು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವುದು ಎನ್‌ಡಿಎಯ ಅತಿದೊಡ್ಡ ಸಾಧನೆ ಎಂದು ನಂಬಿದ್ದಾರೆ ಎಂದು ಸಮೀಕ್ಷೆಯು ತೋರಿಸಿದೆ. ಶೇಕಡಾ 14 ರಷ್ಟು ಜನರು ಆರ್ಟಿಕಲ್ 370 ರ ಹಿಂಪಡೆಯುವಿಕೆ ಎನ್‌ಡಿಎಯ ಸಾಧನೆ ಎಂದು ಭಾವಿಸಿದ್ದಾರೆ. ಸರ್ಕಾರದ ವೈಫಲ್ಯದ ಬಗ್ಗೆ ಕೂಡಾ ಸಮೀಕ್ಷೆ ಬೆಳಕು ಚೆಲ್ಲಿದ್ದು, 25 % ಜನರು ಬೆಲೆ ಏರಿಕೆ ಸರ್ಕಾರದ ದೊಡ್ಡ ವೈಫಲ್ಯ ಎಂದಿದ್ದಾರೆ. 17 % ಜನರು ನಿರುದ್ಯೋಗವೇ ಸರ್ಕಾರದ ದೊಡ್ಡ ವೈಫಲ್ಯ ಅಂದಿದ್ದಾರೆ.

Leave A Reply

Your email address will not be published.