ಇನ್ನು ಮುಂದೆ ಕಾರು ಓಡಿಸಲು ಸಗಣಿಯ ಗ್ಯಾಸ್ ಬಳಕೆ! ಮಿತ್ರ ಸಂಸ್ಥೆಗಳಾದ ಮಾರುತಿ, ಸುಜುಕಿಯಿಂದ ನಡೆಯುತ್ತಿದೆ ಹೊಸ ಆವಿಷ್ಕಾರ!!

ಹೊಸ ವರ್ಷದ ಆರಂಭದಲ್ಲೇ ಹಲವು ಕಂಪನಿಗಳು ಹೊಸ ಹೊಸ ಮಾಡೆಲ್ ನ ಕಾರುಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಆಕರ್ಷಿಸಿದ್ದವು. ಜೊತೆಗೆ ಹೊಸದಾಗಿ ಎಲೆಕ್ಟ್ರಿಕ್ ಕಾರುಗಳ ಪರ್ವವನ್ನೇ ಶುರುಮಾಡಿ ಒಂದರ ಹಿಂದೆ ಒಂದು ಕಂಪೆಯೆಂಬಂತೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದವು. ಇದೇ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಜಪಾನ್‌ ಮೂಲದ ಖ್ಯಾತ ಕಾರು ತಯಾ​ರಕ ಕಂಪನಿ ಸುಜುಕಿ ಹಾಗೂ ಭಾರ​ತ​ದಲ್ಲಿ ಅದರ ಪೂರಕ ಸಂಸ್ಥೆ​ಯಾ​ಗಿ​ರುವ ಮಾರುತಿ ಎರಡೂ ಸೇರಿ ಮಾಲಿನ್ಯ ನಿಯಂತ್ರಣ ವಿಷಯದಲ್ಲಿ ಹೊಸ ಆವಿಷ್ಕಾರದತ್ತ ತಮ್ಮ ಚಿತ್ತ ಹರಿಸಿವೆ.

ಹೌದು, ಮಾಲಿನ್ಯ ನಿಯಂತ್ರ​ಣಕ್ಕೆ ಸಂಬಂಧಿ​ಸಿ​ದಂತೆ ಸಗ​ಣಿ​ಯಿಂದ ಬಿಡು​ಗ​ಡೆ​ಯಾ​ಗುವ ಜೈವಿಕ ಅನಿ​ಲ​ವನ್ನು ವಾಹನಗಳಿಗೆ ಇಂಧ​ನ​ವಾಗಿ ಬಳಕೆ ಮಾಡಲು ಈ ಎರಡು ಮಿತ್ರ ಸಂಸ್ಥೆಗಳು ಒಲವು ತೋರಿವೆ. 2030ರ ವೇಳೆಗೆ 6 ಹೊಸ ಎಲೆ​ಕ್ಟ್ರಿಕ್‌ ವಾಹ​ನ​ಗ​ಳನ್ನು ಬಿಡು​ಗಡೆ ಮಾಡಲು ನಿರ್ಧ​ರಿ​ಸಿ​ರುವ ಮಾರುತಿ ಸುಜುಕಿ ಮುಂದಿನ ದಶ​ಕ​ಗ​ಳಲ್ಲಿ ಮಾಲಿನ್ಯ ನಿಯಂತ್ರ​ಣಕ್ಕೆ ಸಂಬಂಧಿ​ಸಿ​ದಂತೆ ಸುಸ್ಥಿ​ರ​ವಾದ ಪರಿ​ಹಾ​ರ​ ತರಲು ನೋಡು​ತ್ತಿದೆ. ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಷನ್ ಸರ್ಕಾರವು ನಿಗದಿಪಡಿಸಿದ ದಿನಾಂಕಕ್ಕೆ ಅನುಗುಣವಾಗಿ 2070 ರ ವೇಳೆಗೆ ಭಾರತದಲ್ಲಿ ಇಂಗಾಲದ ತಟಸ್ಥತೆಯನ್ನು ಸಾಧಿಸುವ ಗುರಿಯನ್ನು ಇವು ಹೊಂದಿವೆ ಎಂದು ವರದಿಯೊಂದು ತಿಳಿಸಿದೆ.

ಇದ​ರಲ್ಲಿ ಒಂದು ಯೋಜನೆ ಹಸು​ವಿನ ಸಗ​ಣಿಯಿಂದ ಉತ್ಪಾದಿಸುವ ಅನಿಲವನ್ನು ಆಧರಿಸಿದ್ದಾಗಿದ್ದು, ಈ ಕುರಿತು ಕಂಪನಿ ಸಂಶೋ​ಧನೆ ಆರಂಭಿ​ಸಿದೆ. ಜೈವಿಕ ಅನಿ​ಲ ಮಾರು​ಕ​ಟ್ಟೆ​ಯ​ಲ್ಲಿ​ರುವ ಈ ಸವಾ​ಲನ್ನು ಮೊದ​ಲಿಗೆ ಸ್ವೀಕ​ರಿ​ಸಲು ಮುಂದಾ​ಗಿ​ರುವ ಸುಜುಕಿ, ತನ್ನ ಸಿಎ​ನ್‌ಜಿ ಮಾಡೆ​ಲ್‌ನ ವಾಹ​ನ​ಗ​ಳಲ್ಲಿ ಇದನ್ನು ಬಳಕೆ ಮಾಡಲು ನಿರ್ಧ​ರಿ​ಸಿದೆ. ಪ್ರಸ್ತುತ ಭಾರ​ತ​ದಲ್ಲಿ ಶೇ.70ರಷ್ಟು ಸಿಎ​ನ್‌ಜಿ ವಾಹ​ನ​ಗಳು ಮಾರುತಿ ಸುಜುಕಿ ಕಂಪ​ನಿಗೆ ಸೇರಿ​ದ​ವು​ಗ​ಳಾ​ಗಿವೆ. ಆಮ್ಲಜನಕರಹಿತ ಜೀರ್ಣಕ್ರಿಯೆ ಎಂಬ ಪ್ರಕ್ರಿಯೆಯ ಮೂಲಕ ಹಸುವಿನ ಗೊಬ್ಬರವನ್ನು ಕಾರಿನ ಇಂಧನವಾಗಿ ಪರಿವರ್ತಿಸಬಹುದು. ಸಗಣಿ ಬಳ​ಕೆಯ ಕುರಿ​ತಾಗಿ ಜಾಗ​ತಿಕ ಮಟ್ಟ​ದಲ್ಲಿ ಕಂಪನಿ ಈಗಾ​ಗಲೇ ತನ್ನ ಪ್ರತಿ​ಪಾ​ದ​ನೆ​ಯನ್ನು ಮಂಡಿ​ಸಿದೆ.

ಈ ಪ್ರಕ್ರಿಯೆಯು ಆಮ್ಲಜನಕದ ಅನುಪಸ್ಥಿತಿಯಲ್ಲಿ ಗೊಬ್ಬರವನ್ನು ಬ್ರೇಕ್‌ ಡೌನ್‌ ಮಾಡುವುದನ್ನು ಒಳಗೊಂಡಿರುತ್ತದೆ. ಇದು ಜೈವಿಕ ಅನಿಲ, ಮೀಥೇನ್, ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಅನಿಲಗಳ ಪ್ರಮಾಣವನ್ನು ಉತ್ಪಾದಿಸುತ್ತದೆ. ನಂತರ ಜೈವಿಕ ಅನಿಲವನ್ನು ಸ್ವಚ್ಛಗೊಳಿಸಬಹುದು ಮತ್ತು ಸಂಸ್ಕರಿಸಬಹುದು ಹಾಗೂ ಕಲ್ಮಶಗಳನ್ನು ತೆಗೆದುಹಾಕಬಹುದು. ಜೊತೆಗೆ ಮೀಥೇನ್ ಅಂಶವನ್ನು ಹೆಚ್ಚಿಸಬಹುದಾಗಿದೆ. ಇದನ್ನು ಮಾಡಿದ ನಂತರ, ಜೈವಿಕ ಅನಿಲವನ್ನು ಇಂಧನ ಮೂಲವಾಗಿ ಬಳಸಬಹುದು.

ಈ ಮಧ್ಯೆ, Fujisan Asagiri Biomas LLC ನಲ್ಲಿಯೂ ಹೂಡಿಕೆ ಮಾಡಿರುವುದಾಗಿ ಸುಜುಕಿ ಹೇಳಿಕೊಂಡಿದೆ. ಈ ಸಂಸ್ಥೆಯು ಸ್ಥಳೀಯ ರೈತರಿಂದ ಸಂಗ್ರಹಿಸಿದ ಹಸುವಿನ ಸಗಣಿಯನ್ನು ಶಕ್ತಿ ಉತ್ಪಾದನೆಗೆ ಜೈವಿಕ ಅನಿಲವಾಗಿ ಪರಿವರ್ತಿಸುತ್ತದೆ. ಭಾರತದಲ್ಲಿನ ಜೈವಿಕ ಅನಿಲ ವ್ಯವಹಾರವು ಇಂಗಾಲದ ತಟಸ್ಥತೆಗೆ ಕೊಡುಗೆ ನೀಡುವುದಲ್ಲದೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ . ಮೊದ​ಲಿಗೆ ಭಾರ​ತ​ದಲ್ಲಿ ಇದನ್ನು ಜಾರಿ ಮಾಡಿ ಬಳಿಕ, ಕೃಷಿ ಮತ್ತು ಹೈನು​ಗಾ​ರಿಕೆ ನಡೆ​ಸುವ ಏಷ್ಯಾ ಹಾಗೂ ಆಫ್ರಿ​ಕಾದ ಇತರ ದೇಶ​ಗ​ಳಿಗೆ ಇದನ್ನು ವರ್ಗಾ​ಯಿ​ಸಲು ನಿರ್ಧ​ರಿ​ಸಿದೆ. ಇದ​ಕ್ಕಾಗಿ ರಾಷ್ಟ್ರೀಯ ಡೈರಿ ಅಭಿ​ವೃದ್ಧಿ ನಿಗಮ ಮತ್ತು ಬನಾಸ್‌ ಡೈರಿ​ಯೊಂದಿಗೆ ಒಪ್ಪಂದ ಮಾಡಿ​ಕೊಂಡಿದೆ ಎಂದು ವರ​ದಿ​ಗಳು ತಿಳಿ​ಸಿವೆ.

Leave A Reply

Your email address will not be published.