KMF ನಲ್ಲಿ ಉದ್ಯೋಗವಕಾಶ : SSLC ಪಾಸಾದವರೂ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನಾಂಕ
KMF RBKMUL Recruitment 2023: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(KMF) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಈ ಹುದ್ದೆಗಳು ಕೆಎಂಎಫ್‌ನ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಅನೇಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಲು ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 15, 2023
ಹುದ್ದೆಯ ಮಾಹಿತಿ:
ಜೂನಿಯರ್ ಟೆಕ್ನಿಷಿಯನ್ (ಬಾಯ್ಲರ್)-5
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ & ಮೆಕ್ಯಾನಿಕಲ್)- 2
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್)- 2
ಜೂನಿಯರ್ ಟೆಕ್ನಿಷಿಯನ್ (ರೆಫ್ರಿಜರೇಷನ್ & ಎ.ಸಿ)-1
ಡೈರಿ ಸೂಪರ್ವೈಸರ್ಸ್ (ಗ್ರೇಡ್-1)- 6
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್-3)- 6
ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್-3)- 2
ವಿದ್ಯಾರ್ಹತೆ: ಜೂನಿಯರ್ ಟೆಕ್ನಿಷಿಯನ್ (ಬಾಯ್ಲರ್)- 10 ನೇ ತರಗತಿ
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ & ಮೆಕ್ಯಾನಿಕಲ್)- SSLC, ITI
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್)- SSLC, ITI
ಜೂನಿಯರ್ ಟೆಕ್ನಿಷಿಯನ್ (ರೆಫ್ರಿಜರೇಷನ್ & ಎ.ಸಿ)-SSLC, ITI
ಡೈರಿ ಸೂಪರ್ವೈಸರ್ಸ್ (ಗ್ರೇಡ್-1)- ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್‌ನಲ್ಲಿ ಬಿ.ಇ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್-3)- ಪದವಿ, ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಡಿಪ್ಲೊಮಾ
ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್-3)- ಬಿ.ಕಾಂ, ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ಸ್
ವೇತನ: ಜೂನಿಯರ್ ಟೆಕ್ನಿಷಿಯನ್ (ಬಾಯ್ಲರ್)- ಮಾಸಿಕ ₹ 21,400-42,000
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ & ಮೆಕ್ಯಾನಿಕಲ್)- ಮಾಸಿಕ ₹ 21,400-42,000
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್)- ಮಾಸಿಕ ₹ 21,400-42,000
ಜೂನಿಯರ್ ಟೆಕ್ನಿಷಿಯನ್ (ರೆಫ್ರಿಜರೇಷನ್ & ಎ.ಸಿ)- ಮಾಸಿಕ ₹ 21,400-42,000
ಡೈರಿ ಸೂಪರ್ವೈಸರ್ಸ್ (ಗ್ರೇಡ್-1)- ಮಾಸಿಕ ₹ 40,900-78,200
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್-3)- ಮಾಸಿಕ ₹ 21,400-42,000
ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್-3)- ಮಾಸಿಕ ₹ 21,400-42,000
ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 15, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷಗಳ ನಿಯಮ ಅನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ: SC/ST/ ಪ್ರವರ್ಗ-1 & PWD ಅಭ್ಯರ್ಥಿಗಳು-500 ರೂ, ಉಳಿದ ಎಲ್ಲಾ ಅಭ್ಯರ್ಥಿಗಳು-1000 ರೂ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 9108538218 ಗೆ ಕರೆ ಮಾಡಿ
ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ