‘ ಗಾಡಿ ತೊಳಿಯೋ ಬೇವರ್ಸಿ… ‘ ವೈರಲ್ ಆಗ್ತಿದೆ ಈ ಪೋಸ್ಟ್ !!

Viral post : ಸೋಷಿಯಲ್‌ ಮೀಡಿಯಾದಲ್ಲಿ ಎಂತೆಂಥಾ ಫೋಟೋ ಮತ್ತು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಆದ್ರೆ ಇವತ್ತಿನ ವೈರಲ್ ಸುದ್ದಿ ಇನ್ನೊಂದು ತೆರನಾದದ್ದು. ಈ ವೈರಲ್ ಕಂಟೆಂಟ್ ನೋಡಿ ಜನರು ಮುಗುಳು ನಗುತ್ತಿದ್ದಾರೆ. ಬರೇ ಸುದ್ದಿ ಸಮಾಚಾರ ಓದಿ ಕೊಂಡ ಮನಸ್ಸುಗಳಿಗೆ ಇದು ಸ್ವಲ್ಪ ನಿರಾಳ ಅನ್ನಿಸುವ ಫೀಲಿಂಗ್.

ಇದೀಗ ನಾವು ಹೇಳುತ್ತಿರುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲೊಂದು ಕ್ಯೂರಿಯಾಸಿಟಿ ಸೃಷ್ಟಿಸುಸುತ್ತಿದೆ. ಅದೇನಪ್ಪಾ ಅಂದ್ರೆ ರಸ್ತೆ ಬದಿಯಲ್ಲಿ ಒಂದು ಕಾರು ಧೂಳು ಹಿಡಿದು ನಿಂತಿದೆ. ಹಾಗೆ ನಿಂತಿದ್ದ ಧೂಳು ಹಿಡಿದ ಕಾರೊಂದರ ಹಿಂಬಾಗದ ಗಾಜಿನ ಮೇಲೆ ಯಾರೋ ಒಬ್ಬ ʼಗಾಡಿ ತೊಳಿಯೋ ಬೇವರ್ಸಿʼ ಅಂತ ಬರೆದುಹೊಗಿದ್ದಾನೆ. ಈ ಫೋಟೋ ಈಗ ವೈರಲ್ ಆಗಿದೆ. ಈಗ ಆ ಧೂಳಿನ ಗಾಜಿನ ಮೇಲಿನ ಸಾಹಿತ್ಯಕ್ಕೆ ಇನ್ನೊಂದಷ್ಟು ಪೋಲಿ ಹುಡುಗರು ತಮ್ಮ ಕ್ರಿಯೇಟಿವಿಟಿಯನ್ನು ಚಿಮುಕಿಸುತ್ತಿದ್ದಾರೆ.

ಈ ಧೂಳು ಹಿಡಿದು ನಿಂತ ಕಾರಿನ ಮೇಲಿನ ʼಗಾಡಿ ತೊಳಿಯೋ ಬೇವರ್ಸಿʼ  ಫೋಟೋಗೆ ನೆಟ್ಟಿಗರು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ. ಗಾಡಿ ತೊಳಿಯೋ ಬೇವರ್ಸಿ ಎಂಬ ಲೈನ್‌ಗೆ ಇನ್ನೊಬ್ಬ ಮಹಾನುಭಾವ ‘ದುಡ್ಯಾರು ನಿಮ್ಮಪ್ಪ ಕೊಡ್ತಾನಾ ‘ ಅಂತ ಲೈನ್‌ ಬರೆದಿದ್ದಾನೆ. ‘ ಪ್ರಶ್ನೆಗೆ ತಕ್ಕ ಪ್ರತ್ಯುತ್ತರ ಅಂತ ‘ ಇನ್ನೊಬ್ಬ ಕಾಮೆಂಟ್ ಮಾಡಿದ್ದಾನೆ. ಇನ್ನು ಕೆಲವರು ಸೂಪರ್‌ ಅಂತ ನಗುವ ಇಮೋಜಿ ಹಾಕಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಆದ ಬಳಿಕ ಈ ಪೋಸ್ಟ ಸಖತ್‌ ಶೇರ್ ಆಗುತ್ತಿದೆ. ಅಲ್ಲದೆ ಕೆಲವು ವಾಟ್ಸಾಪ್‌ ಸ್ಟೇಟಸ್‌ ಇಡುತ್ತಿದ್ದಾರೆ. ಟ್ರೋಲ್‌ ಕೂಡಾ ಮಾಡುತ್ತಿದ್ದಾರೆ.

Leave A Reply

Your email address will not be published.