ಹಳೆಯ ಬಿಲ್ಲೊಂದು ಹೇಳುತ್ತೆ 50 ವರ್ಷಗಳ ಹಿಂದಿನ ಚಿನ್ನದ ಬೆಲೆಯನ್ನ | ಆಗಿನ ಬಂಗಾರದ ಬೆಲೆ ಕೇಳಿದ್ರೆ ನೀವ್ ಪಕ್ಕಾ ಶೇಕ್ !

ಅರೇ ಇದೇನು, ಒಮ್ಮೊಮ್ಮೆ ಒಂದೊಂದು ವಿಷಯಗಳು ಟ್ರೆಂಡ್ ಆಗುವಂತೆ, ಸದ್ಯ ತಮ್ಮ ಸರದಿನೂ ಬಂತೇನೋ ಎನ್ನುವ ಹಾಗೆ ಹಳೆಯ ಬಿಲ್ಲುಗಳೆಲ್ಲಾ ಆಗಾಗ ಇಣುಕಿ ನೋಡಿ ನಾವೆಲ್ಲರೂ ಹುಬ್ಬೇರುವಂತೆ ಮಾಡುತ್ತಿವೆಯಲ್ಲ! ಇಷ್ಟು ದಿನ ಧೂಳು ಹಿಡಿದು ಮಲಗಿದ್ದ ಈ ಬಿಲ್ಲುಗಳು ನಮ್ಮನ್ನೂ ಪರಿಚಯಿಸಿ ಎನ್ನುವಂತೆ ಒಂದೊಂದೇ ಪ್ರತ್ಯಕ್ಷವಾಗುತ್ತಿವೆ. ಇವುಗಳ ಮಧ್ಯೆ 1959 ರಲ್ಲಿ ಕೊಂಡ ಚಿನ್ನದ ಬಿಲ್ ವೈರಲ್ ಆಗಿದೆ.

ಕೆಲವು ದಿನಗಳ ಹಿಂದಷ್ಟೇ 90 ವರ್ಷಗಳ ಹಳೆಯ ಸೈಕಲ್ ಬಿಲ್ ಹಾಗೂ 35 ವರ್ಷಗಳ ಹಿಂದಿನ ಗೋದಿ ಬಿಲ್ಲೊಂದು ಹೀಗೇ ವೈರಲ್ ಆಗಿ ಎಲ್ಲರೂ ಆಶ್ಚರ್ಯ ಪಡುವಂತಾಗಿತ್ತು. ಇದರ ಬೆನ್ನಲ್ಲೇ ಸುಮಾರು 75 ವರುಷಗಳ ಹಳೆಯ ಟ್ರೈನ್ ಟಿಕೆಟ್ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆದರೀಗ, ಇಂತಹದೇ ಮತ್ತೊಂದು ಹಳೆಯ ಬಿಲ್ ಎಲ್ಲರಿಗೂ ಶಾಕ್ ನೀಡುವಂತೆ ಗೋಚರವಾಗಿದೆ. ಆದ್ರೆ ಈಗಿನ ಬಿಲ್ ಮಾತ್ರ ಹಳೆಯ ಎರಡೂ ಬಿಲ್ ಗಳಿಗಿಂತ ಸ್ವಲ್ಪ ಹೆಚ್ಚಾಗೇ ಜನರು ಅಚ್ಚರಿ ಪಡುವಂತೆ ಮಾಡ್ಬೋದು. ಅದರಲ್ಲೂ ಕೂಡ ನಮ್ಮ ಬಂಗಾರ ಪ್ರಿಯ ಹೆಣ್ಣುಮಕ್ಕಳಿಗೆ ತುಸು ಹೆಚ್ಚೆನ್ನಬಹುದು.

ಇತ್ತೀಚೆಗಂತೂ ನಾವು ಯಾವ ವಸ್ತುವನ್ನು ಕೊಂಡುಕೊಳ್ಳಲು ಹೋದರೂ ಅಬ್ಬಾ! ಏನು ಚಿನ್ನದ ರೇಟ್ ಹೇಳ್ತಿದ್ದಿರಲ್ಲಾ! ಎಂದು ಕೇಳ್ತೇವೆ. ಯಾಕೆಂದ್ರೆ ಗಗನಕ್ಕೇರಿರುವ ಬಂಗಾರದ ಬೆಲೆಯನ್ನು ಎಲ್ಲಾ ವಸ್ತುಗಳ ಬೆಲೆಗೂ ನಾವು ಹೋಲಿಕೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಬಿಟ್ಟಾಗಿದೆ. ಹಾಗಾದ್ರೆ ತುಂಬಾ ಹಿಂದಿನ ಜನರು ಈ ರೀತಿ ಎಲ್ಲಾ ವಸ್ತುಗಳಿಗೂ ಹೋಲಿಕೆ ಮಾಡಿ ಬೆಲೆಯನ್ನು ಹೇಳಲು ಏನನ್ನು ಬಳಸ್ತಿರ್ಬೋದು ಅನ್ನೋ ಪ್ರಶ್ನೆ ಇನ್ನು ಮೇಲೆ ನಿಮಗೆ ಬರ್ಬೋದು. ಯಾಕಂದ್ರೆ ಸುಮಾರು 50 ದಶಕಗಳ ಹಿಂದಿನ ಚಿನ್ನದ ಬಿಲ್ ಒಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿ ಎಲ್ಲರನ್ನೂ ದಂಗುಬಡಿಸಿದೆ. ಕೆಲವರು, ಆ ಟೈಮಲ್ಲಾದ್ರೂ ನಾನು ಹುಟ್ಟಬಾರದಿತ್ತೇ ಎನ್ನುವಂತೆ ಮಾಡಿದೆ.

ಇಂದು ದಿನಬೆಳಗಾದರೆ ಗಗನಕ್ಕೇರಿರತ್ತಿರುವ ಚಿನ್ನದ ಬೆಲೆ ಎಲ್ಲರ ಕಿಸೆಗಳನ್ನು ಖಾಲಿಯಾಗಿಸುತ್ತಿವೆ. ಸದ್ಯ 10 ಗ್ರಾಂ ಚಿನ್ನದ ಬೆಲೆ GST ಎಲ್ಲಾ ಸೇರಿದರೆ ಕನಿಷ್ಠ ಅಂದರೂ 58 ಸಾವಿರದಷ್ಟು ಆಗುಬಹುದು. ಇಂತಹ ಸಮಯದಲ್ಲಿ 50 ದಶಕಗಳ ಹಿಂದಿನ ಚಿನ್ನದ ಬಿಲ್ ಒಂದು ಕಾಣಿಸಿಕೊಂಡರೆ, ಅದರಲ್ಲಿನ ಬೆಲೆಯನ್ನು ಜನ ಕಂಡರೆ ಈ ರೀತಿ ಅನಿಸದೇ ಇರಲು ಸಾಧ್ಯವೇ ಮತ್ತೆ? ಆ ರಶೀದಿಯಲ್ಲಿರುವ ಬೆಲೆ ಕೇಳಿದ್ರೆ ನಿಮಗೂ ಒಂದು ಸಲ ಹಾಗೇ ಅನ್ನಿಸಬಹುದು. ಹೌದು, 1959ರ ಸುಮಾರಿಗೆ 10 ಗ್ರಾಂ ಚಿನ್ನದ ಬೆಲೆ ಕೇವಲ 113 ರೂಪಾಯಿ ಮಾತ್ರ ಇತ್ತಂತೆ ! ಒಂದು ಸಲ ಈ ಬಿಲ್ ನೋಡಿದ್ರೆ ನಿಮಗೆ ತಲೆ ತಿರುಗಬಹುದಲ್ವಾ? ಅಥವಾ ಸುಳ್ಳೋ, ನಿಜವೋ ಎಂದು ಎರಡೆರಡು ಸಲ ನೋಡಬೇಕಾದೀತೇನೋ!

ಈಗಿನ ಕಾಲದಲ್ಲಿ 100 ರೂ ಗೆ ಒಂದು ಬ್ರಾಂಡೆಡ್ ಚಾಕೋಲೇಟ್ ಕೂಡ ಬರೋದಿಲ್ಲ. ಆದ್ರೆ ಆಗ 10 ಗ್ರಾಂ ಚಿನ್ನ ಸಿಗ್ತಿತ್ತು ಅಂದ್ರೆ ನಂಬೋಕೂ ಸಾಧ್ಯವಿಲ್ಲ ಬಿಡಿ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಮಹಾರಾಷ್ಟ್ರದ ವಾಮನ್ ನಿಂಬಾಜಿ ಅಷ್ಟೇಕರ್ ಎಂಬ ಚಿನ್ನದ ಅಂಗಡಿಗೆ ಸೇರಿದ್ದಾಗಿದೆ. 64 ವರುಷಗಳಷ್ಟು ಹಳೆಯದಾದ ಈ ಚಿನ್ನದ ರಶೀದಿಯು, ಆ ದಿನಗಳಲ್ಲಿ ಚಿನ್ನ ಎಷ್ಟು ಅಗ್ಗವಾಗಿತ್ತು ಅನ್ನೋದನ್ನ ತೋರಿಸ್ತದೆ.

ಜನರನ್ನು ಆಶ್ಚರ್ಯಗೊಳಿಸಿದ ಈ ರಶೀದಿ ಪಡೆದ ಗ್ರಾಹಕ ಶಿವಲಿಂಗ ಆತ್ಮರಾವ್ ಎಂಬೋರು. ಈ ಶಿವಲಿಂಗ ಅವರು ಮಹಾರಾಷ್ಟ್ರದ ಈ ಅಂಗಡಿಯಿಂದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಖರೀದಿಸಿದ್ರು ಅನ್ನೋದು ಗೊತ್ತಾಗುತ್ತದೆ. ಅವರು ಕೊಂಡ ಚಿನ್ನ ಹಾಗೂ ಬೆಳ್ಳಿಯ ಒಟ್ಟು ಬೆಲೆ 909 ರೂಪಾಯಿ ಆಗಿತ್ತು ಎಂದು ಬಿಲ್ ಹೇಳುತ್ತಿದೆ. ಸದ್ಯ ನೆಟ್ಟಿಗರೆಲ್ಲರೂ ಈಗ ಚಿನ್ನದ ದರಕ್ಕೂ ಆಗಿದ್ದ ಚಿನ್ನದ ದರಕ್ಕೂ ಹೋಲಿಕೆ ಮಾಡಿ ನೋಡುತ್ತಾ ಹೌಹಾರಿಹೋಗಿದ್ದಂತೂ ಸತ್ಯ.

Leave A Reply

Your email address will not be published.