2 ವರ್ಷಗಳ ಬಳಿಕ ಮತ್ತೆ ಆಕ್ಟಿವ್ ಆಗಲಿವೆ, ಡೊನಾಲ್ಡ್ ಟ್ರಂಪ್ ಅವರ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ!!
ಪ್ರಪಂಚದ ದೊಡ್ಡಣ್ಣ ಎಂದು ಕರೆಸಿಕೊಂಡ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ ಖಾತೆಯನ್ನು 2 ವರ್ಷಗಳ ಹಿಂದೆ ಮೇಟಾ ಸಂಸ್ಥೆ ಬ್ಯಾನ್ ಮಾಡಿತ್ತು. ಇದೀಗ 2 ವರ್ಷಗಳ ನಿಷೇಧದ ಬಳಿಕ ಟ್ರಂಪ್ ಖಾತೆಗಳ ಮರುಸ್ಥಾಪನೆಗೆ ಅವಕಾಶ ನೀಡುವುದಾಗಿ ಮೆಟಾ ತಿಳಿಸಿದೆ.
2021ರ ಜನವರಿ 6ರಂದು ಯುಎಸ್ ಕ್ಯಾಪಿಟಲ್‌ನಲ್ಲಿ ನಡೆದ ಗಲಭೆ ಕುರಿತು ಪ್ರಚೋದನಾಕಾರಿ ಪೋಸ್ಟ್ ಪ್ರಕಟಿಸಿದಕ್ಕಾಗಿ ಟ್ರಂಪ್ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಡೊನಾಲ್ಡ್ ಟ್ರಂಪ್ ಅವರ ಫೇಸ್‌ಬುಕ್ ಖಾತೆಯ ಎರಡು ವರ್ಷಗಳ ಅಮಾನತು ನಿರ್ಣಯ ಜನವರಿ 7 ರಿಂದ ಜಾರಿಯಾಗಿತ್ತು. ಹಿಂಸಾಚಾರಕ್ಕೆ ಪ್ರಚೋದನಕಾರಿಯಾಗಿ ಮಾಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಸಂಸ್ಧೆಯು ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು 2023ರ ಜನವರಿವರೆಗೆ ಬ್ಯಾನ್ ಮಾಡಲಾಗಿದೆ ಎಂದು 2 ವರ್ಷಗಳ ಹಿಂದೆ ನಿಕ್ ಕ್ಲೆಗ್ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ಈ ನಿಷೇಧದ ಅವಧಿ ಇದೀಗ ಮುಕ್ತಾಯವಾಗಿದ್ದು, ಕೆಲವು ದಿನಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಮರಳುವ ಸಲುವಾಗಿ ತಮ್ಮ ಪ್ರಬಲ ಸಾಮಾಜಿಕ ಮಾಧ್ಯಮ ಖಾತೆಗಳ ನಿಯಂತ್ರಣವನ್ನು ಮರಳಿ ಪಡೆಯಲು ಬಯಸುತ್ತಿದ್ದು, ಎರಡು ವರ್ಷಗಳ ಹಿಂದೆ ನಿರ್ಬಂಧಕ್ಕೊಳಗಾಗಿರುವ ತಮ್ಮ ಖಾತೆಯನ್ನು ಅನ್‌ಬ್ಲಾಕ್ ಮಾಡುವಂತೆ ಟ್ರಂಪ್ ಅವರು ವಕೀಲರ ಮೂಲಕ ಫೇಸ್‌ಬುಕ್‌ನ ಪೋಷಕ ಕಂಪನಿ ಮೆಟಾಗೆ ಔಪಚಾರಿಕವಾಗಿ ಮನವಿ ಮಾಡಿದ್ದರು. ಸದ್ಯ ಅದಕ್ಕೆ ಮೆಟಾ ಒಪ್ಪಿಗೆ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.
88 ಮಿಲಿಯನ್ ಫಾಲೋವರ್ಸ್ ಹೊಂದಿದ ಟ್ವಿಟ್ಟರ್ ಖಾತೆ ಈಗಾಗಲೇ ಬ್ಯಾನ್ ಆಗಿದೆ. ಟ್ರಂಪ್ ಅವರ ಫೇಸ್‍ಬುಕ್ ಖಾತೆಯನ್ನು 2 ವರ್ಷ ಬ್ಯಾನ್ ಮಾಡಿದ್ದು, ಅದನ್ನು ಮರುಸ್ಥಾಪಿಸಲು ಮೆಟಾ ಮುಂದಾಗಿದೆ. ಆದರೆ ಟ್ವಿಟ್ಟರ್ ಮಾತ್ರ ಶಾಶ್ವತವಾಗಿ ಖಾತೆಯನ್ನು ರದ್ದುಮಾಡಿದೆ.