ವಿಮಾನದಲ್ಲಿಯೇ ಮಗುವಿಗೆ ಜನ್ಮನೀಡಿದ ಮಹಿಳೆ

Share the Article

ಜ. 19 ರಂದು ಟೋಕಿಯೊ-ನರಿಟಾದಿಂದ ದುಬೈಗೆ ತೆರಳುತ್ತಿದ್ದ ಎಮಿರೇಟ್ಸ್ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೋರ್ವರು ವಿಮಾನದಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ ಬೆಳಕಿಗೆ ಬಂದಿದೆ

ಮಹಿಳೆ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ. ದುಬೈಗೆ ಆಗಮಿಸಿದ ನಂತರ ಸ್ಥಳೀಯ ವೈದ್ಯಕೀಯ ಸಿಬ್ಬಂದಿಯನ್ನು ಭೇಟಿ ಮಾಡಲಾಗಿತ್ತು. ನಮ್ಮ ಸಿಬ್ಬಂದಿ ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷತೆಯು ಬಗ್ಗೆ ಕಾಳಜಿ ವಹಿಸಿದ್ದರು ಎಮಿರೇಟ್ಸ್ ಸಿಎನ್‌ಎನ್‌ಗೆ ತಿಳಿಸಿದೆ.

ಎಮಿರೇಟ್ಸ್‌ನ ನೀತಿಯ ಪ್ರಕಾರ, ಪ್ರಯಾಣಿಕರು ಯಾವುದೇ ವೈದ್ಯಕೀಯ ತೊಡಕುಗಳು ಅಥವಾ ಕಾಳಜಿಗಳನ್ನು ಹೊಂದಿರದ ಹೊರತು ಏಳನೇ ತಿಂಗಳ ಗರ್ಭಾವಸ್ಥೆಯವರೆಗೂ ಹಾರಾಟ ನಡೆಸಬಹುದು.

ಕಳೆದ ಮೇನಲ್ಲಿ, ಡೆನ್ವರ್‌ನಿಂದ ಕೊಲೊರಾಡೊಗೆ ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನದಲ್ಲಿ ಫ್ಲೈಟ್ ಅಟೆಂಡೆಂಟ್‌ನ ಸಹಾಯದಿಂದ ಮಹಿಳೆಯೊಬ್ಬರು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದ ಘಟನೆ ನಡೆದಿತ್ತು.

Leave A Reply