SpiceJet republic day special ticket sale: ರೈಲು ಟಿಕೆಟ್ ದರದಲ್ಲಿ ವಿಮಾನಯಾನ ಮಾಡುವ ಸುವರ್ಣ ಅವಕಾಶ!!!! ಅಗ್ಗದ ದರದಲ್ಲಿ 8 ತಿಂಗಳವರೆಗೆ ವಿಮಾನ ಪ್ರಯಾಣ ಮಾಡುವ ಬಂಪರ್ ಕೊಡುಗೆ!!

ನೀವೇನಾದರೂ ವಿಮಾನ ಯಾನ ಮಾಡಬೇಕೆನ್ನುವ ಹಂಬಲ ಹೊತ್ತು ವಿಮಾನಯಾನದ ದರ ಹೆಚ್ಚಳವೆಂದು ಚಿಂತಿತರಾಗಿದ್ದರೆ, ನಿಮಗೊಂದು ಸಿಹಿ ಸುದ್ದಿಯನ್ನು ನಾವು ಹೇಳ್ತೀವಿ ಕೇಳಿ.

ರೈಲು ಟಿಕೆಟ್ ದರದಲ್ಲಿಯೇ ವಿಮಾನಯಾನ ಈಗ ಸಾಧ್ಯ. ನೀವು ಎಲ್ಲಿಗಾದರೂ ಪ್ರಯಾಣ ಮಾಡುವ ಯೋಜನೆ ಹಾಕಿಕೊಂಡಿದ್ದರೆ, ರೈಲಿನ ಬದಲು ವಿಮಾನದಲ್ಲಿಯೇ ಪ್ರಯಾಣ ಬೆಳೆಸಬಹುದು. ಅದು ಹೇಗಪ್ಪಾ ಅಂತಾ ಯೋಚಿಸುತ್ತಿದ್ದೀರಾ??? ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಗಣರಾಜ್ಯೋತ್ಸವದ ಅಂಗವಾಗಿ ಸ್ಪೈಸ್ ಜೆಟ್ ವಿಶೇಷ ಆಫರ್ ಜಾರಿಗೆ ತಂದಿದ್ದು, ಈ ಆಫರ್ ಅಡಿಯಲ್ಲಿ ವಿಮಾನ ಟಿಕೆಟ್ ಅನ್ನು ಕೇವಲ 1,126 ರೂಪಾಯಿಗೆ ಬುಕ್ ಮಾಡಬಹುದಾಗಿದೆ.

ಸ್ಪೈಸ್ ಜೆಟ್ ರಿಪಬ್ಲಿಕ್ ಡೇ ಸೇಲ್ ಅಂಗವಾಗಿ ವರ್ಷದ ಅಗ್ಗದ ಟಿಕೆಟ್‌ಗಳನ್ನು ಘೋಷಿಸಿದ್ದು, ಈ ಆಫರ್ ಜನವರಿ 24 ರಿಂದಲೇ ಆರಂಭವಾಗಿದೆ. ಈ ಆಫರ್ ಅಡಿಯಲ್ಲಿ ಬುಕ್ ಮಾಡಿದ ಟಿಕೆಟ್‌ ಬಳಸಿಕೊಂಡು ಸೆಪ್ಟೆಂಬರ್ 30 2023 ರವರೆಗೆ ಪ್ರಯಾಣಿಸಬಹುದಾಗಿದೆ. ಏರ್‌ಲೈನ್ಸ್ ಪ್ರಕಾರ, ಈ ಸೇಲ್ ಎಲ್ಲಾ ಸ್ಪೈಸ್ ಜೆಟ್ ಸಿಟಿ ಕಚೇರಿಗಳು, ವಿಮಾನ ನಿಲ್ದಾಣ ಕಚೇರಿಗಳು, ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು ಟ್ರಾವೆಲ್ ಏಜೆಂಟ್‌ಗಳ ಮೂಲಕ ಲಭ್ಯವಿರಲಿದೆ. ಇದಲ್ಲದೇ, ಫಸ್ಟ್ ಕಂ ಫಸ್ಟ್ ಸರ್ವ್ ಆಧಾರದ ಮೇಲೆ ದರಗಳು ಲಭ್ಯವಿರುತ್ತವೆ ಎನ್ನಲಾಗಿದೆ. ಈ ಕುರಿತಾಗಿ, ಸ್ಪೈಸ್ ಜೆಟ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.ಸ್ಪೈಸ್ ಜೆಟ್ ವಿಶೇಷ ಆಫರ್ ಜಾರಿಗೆ ತಂದಿರುವ ಹಿನ್ನೆಲೆ ನೀವು ಕಡಿಮೆ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಬಹುದು.

ಈಗ ಕೇವಲ 1,126 ರೂ.ಗಳಲ್ಲಿ ದೇಶೀಯ ವಿಮಾನ ಪ್ರಯಾಣ ಮಾಡಬಹುದು ಎಂದು ಸ್ಪೈಸ್ ಜೆಟ್ ಅಧಿಕೃತ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ಕೊಡುಗೆಯ ಅಡಿಯಲ್ಲಿ ಜನವರಿ 24 ರಿಂದ ಜನವರಿ 29 2023 ರವರೆಗೆ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 30 ರವರೆಗಿನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿಡಬಹುದಾಗಿದೆ.

Leave A Reply

Your email address will not be published.