Paper cup tea | ಕಾಗದದ ಕಪ್ ನಲ್ಲಿ ನೀವೂ ಕೂಡ ಟೀ, ಕಾಫೀ ಕುಡಿಯುವವರಾಗಿದ್ದರೆ ನಿಮಗಿದೋ ಮುಖ್ಯವಾದ ಮಾಹಿತಿ!

ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ, ಕಾಫೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ತಲೆನೋವು ಕಡಿಮೆ ಮಾಡುತ್ತದೆ. ಅದೆಷ್ಟೋ ಜನರಿಗೆ ಒಂದು ಸಿಪ್ ಟೀ ಅಥವಾ ಕಾಫೀ ಕುಡಿಯೋದ್ರಿಂದ ಅವರ ಮೂಡ್ ಸ್ವಿಗ್ ಆಗುತ್ತೆ. ಬೆಳಗ್ಗೆ ಎದ್ದಾಗಿಂದ ಆರಂಭವಾಗಿ ದಿನ ಅಂತ್ಯವನ್ನು ಟೀ ಕುಡಿಯುವುದರ ಮುಕೇನ ಕೊನೆಗೊಳಿಸುತ್ತಾರೆ.

ಸಮಯ ಬದಲಾದಂತೆ ಟೀ, ಕಾಫೀ ಯ ರುಚಿಯಿಂದ ಹಿಡಿದು ಕುಡಿಯುವ ಕಪ್ ವರೆಗೂ ಬದಲಾಗಿದೆ. ಹೌದು. ಹಿಂದೆಲ್ಲ ಗಾಜಿನ ಗ್ಲಾಸ್, ಸ್ಟೀಲ್ ಗ್ಲಾಸ್ ನಲ್ಲಿ ಚಹಾ ಕೊಡುತ್ತಿದ್ದರು. ಆದ್ರೆ ಇದೀಗ ಅದು ಕಾಗದದ ಕಪ್ ವರೆಗೆ ತಲುಪಿದೆ. ಯಾಕಂದ್ರೆ ಚಹಾ ವಿತರಕರಿಗೆ ಲೋಟ ತೊಳೆಯುವ ಕೆಲಸವೂ ಉಳಿಯುತ್ತದೆ. ಇತ್ತಕಡೆಯಿಂದ ಒಮ್ಮೆ ಬಳಸಿ ಬಿಸಾಡಲು ಬಹುದು. ಹಾಗಾಗಿ ಹೆಚ್ಚಿನವರು ಈ ಕಾಗದದ ಕಪ್ ಗೆ ಅವಲಂಬಿಸಿದ್ದಾರೆ.

ಆದ್ರೆ, ಈ ಕಾಗದದ ಕಪ್ ನಲ್ಲಿ ಚಹಾ ಕುಡಿಯುವುದು ಎಷ್ಟು ಆರೋಗ್ಯಕ್ಕೆ ಉತ್ತಮ ಎಂಬುದು ನೀವೂ ಯೋಚಿಸಿದ್ದೀರೆ?. ಈ ಕುರಿತು ಅಧ್ಯಯನವೊಂದು ನಡೆದಿದ್ದು ಪೇಪರ್ ಕಪ್ ಆರೋಗ್ಯಕ್ಕೆ ಎಷ್ಟು ಕೆಡುಕು ಎಂಬುದನ್ನು ಬಹಿರಂಗ ಪಡಿಸಿದೆ.

ಸಾಮಾನ್ಯವಾಗಿ ಕಾಗದದ ಕಪ್ ಅನ್ನು ಹೈಡ್ರೋಫೋಬಿಕ್ ಫಿಲ್ಮ್ ನ ಪದರದಿಂದ ತಯಾರಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕಾಗದದ ಕಪ್ ಗಳನ್ನು ಇತರ ವಸ್ತುಗಳಿಂದ ತಯಾರಿಸಲಾಗುತ್ತದೆ. ಚಹಾದಂತಹ ಬಿಸಿ ದ್ರವಗಳನ್ನು ಕಾಗದದ ಕಪ್ ಗಳಲ್ಲಿ ಸುರಿದಾಗ, ಅದರಲ್ಲಿನ ಪ್ಲಾಸ್ಟಿಕ್ ಪದರವು ಸುಲಭವಾಗಿ ಕರಗುತ್ತದೆ ಮತ್ತು ಚಹಾದ ಮೂಲಕ ದೇಹವನ್ನು ತಲುಪುತ್ತದೆ.

ಐಐಟಿ ಖರಗ್ಪುರದ ಇತ್ತೀಚಿನ ಅಧ್ಯಯನವು ಪೇಪರ್ ಕಪ್ಗಳಲ್ಲಿ ಚಹಾ ಅಥವಾ ಇತರ ಬಿಸಿ ದ್ರಾವಣಗಳನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಬಹಿರಂಗಪಡಿಸಿದೆ. ಯಾಕಂದ್ರೆ, ಪೇಪರ್ ಕಪ್ ಗಳಲ್ಲಿ ದಿನಕ್ಕೆ ಮೂರು ಬಾರಿ 100 ಮಿಲಿ ಬಿಸಿ ಚಹಾ ಕುಡಿದಾಗ, ಸುಮಾರು 75,000 ಹಾನಿಕಾರಕ ಮೈಕ್ರೋಪ್ಲಾಸ್ಟಿಕ್ ಕೋಶಗಳು ದೇಹವನ್ನು ಪ್ರವೇಶಿಸುತ್ತವೆ. ಈ ರೀತಿಯಾಗಿ ದೇಹವನ್ನು ಪ್ರವೇಶಿಸುವ ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವು ತೋರಿಸಿದೆ. ಹೀಗಾಗಿ ಕಾಗದದ ಕಪ್ ಗಳಲ್ಲಿ ಚಹಾ ಮತ್ತು ಕಾಫಿ ಕುಡಿಯುವುದನ್ನು ನಿಲ್ಲಿಸುವುದು ಸೂಕ್ತ ಎಂಬುದು ತಜ್ಞರ ಸಲಹೆಯಾಗಿದೆ.

Leave A Reply

Your email address will not be published.