ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ | ಎಸ್.ಎಲ್.ಬೈರಪ್ಪ, ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಭಾಗ್ಯ, ಒಟ್ಟು 15 ಜನರಿಗೆ ಸಂದ ಗೌರವ

ಬೆಂಗಳೂರು: 2023 ನೇ ಸಾಲಿನ ಪದ್ಮ ವಿಭೂಷಣ ಹಾಗೂ ಪದ್ಮ ಭೂಷಣ ಪ್ರಕಟಗೊಂಡಿದ್ದು, ಕರ್ನಾಟಕದ ಮೂವರು ಸಾಧಕರಿಗೆ ಅತ್ಯುನ್ನತ ಗೌರವ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ದೇಶದಾತ್ಯಂತ ಗಮನ ಸೆಳೆದ ಸಾಧಕರಲ್ಲಿ ಒಟ್ಟು 15 ಜನರು ಆಯ್ಕೆಯಾಗಿದ್ದಾರೆ, ಅವರಲ್ಲಿ ನಾಲ್ಕು ಮಂದಿ ಕನ್ನಡದ ಸಾಧಕ ತಪಸ್ವಿಗಳಿದ್ದಾರೆ.

ಕರ್ನಾಟಕ ಮಾಜಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಪದ್ಮ ವಿಭೂಷಣ ಗೌರವವನ್ನು ಕೊಡಮಾಡಲಾಗಿದೆ. ಸಮಾಜ ಸೇವೆಯಲ್ಲಿ ಅವರು ಮಾಡಿದ ಸಾಧನೆಗೆ ಅವರಿಗೆ ಪದ್ಮ ವಿಭೂಷಣ ಸಂದಿದೆ. ಅಲ್ಲದೆ ಮಾಂತ್ರಿಕ ಲೇಖಕ, ಕಲಾ ತಪಸ್ವಿ ಎಸ್.ಎಲ್.ಬೈರಪ್ಪನವರು ಕೂಡಾ ಪದ್ಮ ವಿಭೂಷಣ ಪದಕ ಪಡೆಯಲಿದ್ದಾರೆ. ಇನ್ನೊಬ್ಬರು,ಸಮಾಜ ಸೇವಕಿ ಇನ್ಫೋಸಿಸ್ ಸುಧಾ ಮೂರ್ತಿ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಅಲ್ಲದೆ, ಕೊಡಗು ಮೂಲದ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯರವರು ಪದ್ಮಶ್ರೀ ಪ್ರಶಸ್ತಿಗೆ ಗೌರವ ತಂದುಕೊಟ್ಟಿದ್ದಾರೆ. ಹಾಗೂ ಚಿಕ್ಕಬಳ್ಳಾಪುರ ಮೂಲದ ತಮಟೆ ವಾದಕ ಮುನಿ ವೆಂಕಟಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಒಟ್ಟು 15 ಜನ ಪ್ರಶಸ್ತಿ ವಿಜೇತರಲ್ಲಿ ಮೂವರಿಗೆ ಮರಣೋತ್ತರ ಪ್ರಶಸ್ತಿ ಘೋಷಣೆ ಆಗಿದೆ.

ಮೌಖಿಕ ಪುನರ್ಜಲೀಕರಣ ವ್ಯವಸ್ಥೆ (ಒಆರ್‌ಎಸ್) ಬಳಕೆಯನ್ನು ವ್ಯಾಪಕವಾಗಿಸಿದ ದಿಲೀಪ್ ಮಹಲನಾಬಿಸ್ ರವರನ್ನು ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಮೆರಿಕಾದ ಶ್ರೀ ಶ್ರೀನಿವಾಸ್ ವರದಾನ ಎಂಬ ಒಬ್ಬರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾಡಿದ ಸಾಧನೆಗೆ ಪದ್ಮ ವಿಭೂಷಣ ದೊರೆತಿರುವುದು ವಿಶೇಷ. ಪ್ರಶಸ್ತಿ ವಿಜೇತರ ರಾಜ್ಯವಾರು ಪಟ್ಟಿಯಾ ಜತೆಗೆ ಸಾಧನೆಯನ್ನು ಕೆಳಗೆ ಕೊಡಲಾಗಿದೆ, ಗಮನಿಸಿ.

Leave A Reply

Your email address will not be published.