KL Rahul Athiya Shetty: ರಾಹುಲ್-ಅಥಿಯಾ ಮದುವೆಗೆ ಧೋನಿ-ಕೊಹ್ಲಿ ಕೊಟ್ಟ ಅದ್ಧೂರಿ ಉಡುಗೊರೆ ಏನೆಂದು ಗೊತ್ತೇ ? ಭರ್ಜರಿ ಉಡುಗೊರೆಯ ಬೆಲೆ ಕೇಳಿದರೆ ನೀವು ಆಶ್ಚರ್ಯ ಪಡ್ತೀರಿ ಖಂಡಿತ!

ಕನ್ನಡಿಗ ಕೆಎಲ್ ರಾಹುಲ್ ಮೊನ್ನೆಯಷ್ಟೇ ಹಸೆಮಣೆ ಏರಿದ್ದು, ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಜೊತೆ ರಾಹುಲ್ ಅವರ ಅದ್ದೂರಿ ವಿವಾಹ ಕಾರ್ಯಕ್ರಮ ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ನಡೆದಿದೆ.

 

ಭಾರತದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್(ಜನವರಿ 23) ಸೋಮವಾರವಷ್ಟೇ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಕೆ ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅನೇಕ ವರ್ಷಗಳಿಂದ ಡೇಟಿಂಗ್ ನಡೆಸಿ, ಜನವರಿ 23 ರಂದು ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಮುದ್ದಾದ ಜೋಡಿಗೆ ಎಲ್ಲ ಕಡೆಯಿಂದಲೂ ಶುಭಾಶಯಗಳು ಬರುತ್ತಿದೆ. ಈ ನಡುವೆ ಇಂಡಿಯಾ ಮಂಗಳವಾರ (ಜನವರಿ 24) ನಡೆದ ನ್ಯೂಜಿಲೆಂಡ್ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೊದಲೇ ಪಂದ್ಯ ನಿಗದಿಯಾಗಿದ್ದ ಕಾರಣ ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಇನ್ನಿತರ ಆಟಗಾರರು ತಮ್ಮ ಪಂದ್ಯದ ಬದ್ಧತೆಯಲ್ಲಿ ತಲ್ಲೀನರಾಗಿದ್ದ ಹಿನ್ನೆಲೆ ವಿವಾಹ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಮದುವೆಯ ಸಂಭ್ರಮ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ದುಬಾರಿ ಉಡುಗೊರೆಗಳು ಕೆ. ಎಲ್. ರಾಹುಲ್ ಅವರ ಪಾಲಾಗಿವೆ.ಒಂದೆಡೆ ಕೊಹ್ಲಿ ಮರೆಯಲಾಗದ ಉಡುಗೊರೆ ನೀಡಿದ್ದರೆ, ಮತ್ತೊಂದೆಡೆ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಕೂಡ ವಿಶೇಷ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೊಹ್ಲಿ ಮದುವೆಗೆ ಆಗಮಿಸಲು ಆಗದಿದ್ದರೂ ಕೂಡ ರಾಹುಲ್ ಮತ್ತು ಅಥಿಯಾ ಅವರಿಗೆ ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ. ವರದಿಗಳ ಪ್ರಕಾರ ಕೊಹ್ಲಿ ಕೆಎಲ್ ರಾಹುಲ್ ಮತ್ತು ಅಥಿಯಾ ಅವರಿಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದು, ಈ ಕಾರಿನ ಬೆಲೆ 2.17 ಕೋಟಿ ಎನ್ನಲಾಗಿದೆ.

ಟೀಂ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯವರು ಕೂಡ ರಾಹುಲ್‌ಗೆ ದುಬಾರಿ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಲಕ್ನೋ ಸೂಪರ್‌ಜೈಂಟ್ಸ್ ನಾಯಕನಿಗೆ ಧೋನಿ ಕವಾಸಕಿ ನಿಂಜಾ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ಈ ಬೈಕ್‌ನ ಮಾರುಕಟ್ಟೆ ಬೆಲೆ ಸುಮಾರು 80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.