ಧರ್ಮಸ್ಥಳ : ವಿವಾಹಿತ ಮಹಿಳೆಯ ಜತೆ ಮುಸ್ಲಿಂ ಯುವಕ ಲಾಡ್ಜ್ ಬುಕ್ ಮಾಡಲು ತಯಾರಿ !

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಲವ್ ಜಿಹಾದ್ ಪ್ರಕರಣಗಳು ತೆರೆಮರೆಯಲ್ಲಿ ನಡೆಯುತ್ತಿದ್ದು, ಅದರಲ್ಲೂ ಪ್ರೀತಿ ಪ್ರೇಮ ಎಂದು ಈ ಬಲೆಗೆ ಬಿದ್ದ ಅದೆಷ್ಟೋ ಯುವತಿಯರು ಸಾವಿನ ಸುಳಿಗೆ ಸಿಲುಕಿದ್ದು ಕೂಡ ಇದೆ. ಇದೀಗ, ಕರಾವಳಿಯಲ್ಲಿ ಅನುಮಾಸ್ಪದವಾಗಿ ಅನ್ಯ ಕೋಮಿನ ಯುವಕ ಹಾಗೂ ಯುವತಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

 

ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಖಾಸಗಿ ಲಾಡ್ಜ್ ಗಳಲ್ಲಿ ಐಡಿ ಕಾರ್ಡ್ ನೀಡಿ ಅನ್ಯಕೋಮಿನ ಜೋಡಿಗಳು ರೂಂ ಪಡೆಯುವ ಸಲುವಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ ಯುವಕ ಹಾಗೂ ಯುವತಿ ಅನ್ಯ ಕೋಮಿನವರಾಗಿದ್ದರಿಂದ ಲಾಡ್ಜ್ ಮಾಲೀಕರು ರೂಂ ನೀಡದೆ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳದಲ್ಲಿ ಇಂದು ಬೆಳಗ್ಗೆ ರೂಂ ಮಾಡಲು ಹೋಗುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಅನುಮಾನ ಬಂದು ಹಿಂದೂ ಕಾರ್ಯಕರ್ತರು ಹಿಡಿದು ಧರ್ಮಸ್ಥಳ ಪೊಲೀಸರ ವಶಕ್ಕೆ ನೀಡಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಯುವಕ ಚಿತ್ರದುರ್ಗ ಜಿಲ್ಲೆಯ ದಾದಫೀರ್ ಹಾಗೂ ವಿವಾಹಿತ ಮಹಿಳೆ ಉಮಾ ಎಂಬ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದು ಅದರಂತೆ ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳಕ್ಕೆ ಇವರಿಬ್ಬರ ಆಗಮನಕ್ಕೆ ಕಾರಣವೇನು ಎಂಬ ಪ್ರಶ್ನೆ ಭುಗಿಲೆದ್ದಿದ್ದು, ಸದ್ಯ ಪೋಲೀಸರು ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದೂ ಸಂಘಟನೆ ಕಾರ್ಯಕರ್ತರು ಜ.25 ರಂದು ಬೆಳಗ್ಗೆ ಇಬ್ಬರನ್ನು ಹಿಡಿದು ವಿಚಾರಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸುತ್ತಿದ್ದಂತೆ ಅನ್ಯಕೋಮಿನ ಮಾಹಿತಿ ತಿಳಿದು ಧರ್ಮಸ್ಥಳ ಪೊಲೀಸ್ ಠಾಣೆಗೆ ಹಿಂದೂ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.