ವ್ಯಕ್ತಿ ಸಾಯುವ ಎರಡು ವರ್ಷ ಮೊದಲೇ ಸಾವನ್ನು ಊಹಿಸಬಹುದಂತೆ..

Share the Article

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ.
ಸಾವು ಜೀವಿಗಳಿಗೆ ನಿರಾಕರಿಸಲಾಗದ ಸತ್ಯ.ಜಗತ್ತಿನಲ್ಲಿ ಅನೇಕ ವಿಜ್ಞಾನಿಗಳು ಸಾವಿನ ಕುರಿತಾದ ಪ್ರಶ್ನೆಗೆ ಉತ್ತರವನ್ನು ಹುಡುಕುವಲ್ಲಿ ತೊಡಗಿದ್ದಾರೆ.

ಒಬ್ಬ ವ್ಯಕ್ತಿ ತನ್ನ ಸಾವಿನ ಬಗ್ಗೆ ಮುಂಚಿತವಾಗಿ ತಿಳಿದಿದ್ದರೆ ಅವನು ಜಗತ್ತನ್ನು ಬದಲಾಯಿಸಬಹುದಾದ ಏನನ್ನಾದರೂ ಮಾಡಲು ಪ್ರಾರಂಭಿಸುತ್ತಾನೆ ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ.

ಕೃತಕ ಬುದ್ಧಿಮತ್ತೆ ಸಹಾಯದಿಂದ ಮಾನವನ ಸಾವನ್ನು ಊಹಿಸಬಹುದು ಎಂದು ವಿಜ್ಞಾನಿಗಳು ಸಂಶೋಧನೆಯ ಮೂಲಕ ವಿವರಿಸಿದ್ದಾರೆ. ಈ ಪರೀಕ್ಷೆಯನ್ನು ಮರಣ ಪರೀಕ್ಷೆ ಎಂದು ಕರೆಯಲಾಗುತ್ತದೆ.

ಏನಿದು ಸಾವಿನ ಪರೀಕ್ಷೆ ?

ಸಾವಿನ ಪರೀಕ್ಷೆಯಲ್ಲಿ ಕಂಡುಬಂದ ವಿಚಾರಗಳ ಕುರಿತು ಇಲ್ಲಿದೆ ಮಾಹಿತಿ. ಸಾವಿನ ಪರೀಕ್ಷೆಯನ್ನು ಸಾಮಾನ್ಯವಾಗಿ ರಕ್ತ ಪರೀಕ್ಷೆ ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಯು ರಕ್ತವನ್ನು ಅದರ ಜೈವಿಕ ಗುರುತುಗಳಿಗಾಗಿ ಪರೀಕ್ಷಿಸುತ್ತದೆ. ಇದರಿಂದ ಮುಂದಿನ ಎರಡರಿಂದ ಐದು ವರ್ಷಗಳಲ್ಲಿ ರೋಗಿಯು ಸಾಯುತ್ತಾನೆ ಎಂದು ನಿರ್ಧರಿಸಲಾಗಿದೆ. ಇದು ಒಂದು ರೀತಿಯ ಮೌಲ್ಯಮಾಪನ ಪರೀಕ್ಷೆಯಾಗಿದೆ. ಆದಾಗ್ಯೂ, ಅದರ ನಿಖರತೆಯ ಬಗ್ಗೆ ಸಂಶೋಧನೆ ಇನ್ನೂ ನಡೆಯುತ್ತಿದೆ. ಈ ಪರೀಕ್ಷೆಯಲ್ಲಿ ಕೃತಕ ಬುದ್ಧಿಮತ್ತೆ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಯುಕೆಯ ವಿಶ್ವವಿದ್ಯಾಲಯವು ಈ ಸಾವಿನ ಪರೀಕ್ಷೆಯನ್ನು ನಡೆಸಿದ್ದು, PLoS One Science ನಿಯತಕಾಲಿಕದಲ್ಲಿ ಈ ಸಂಶೋಧನೆಯ ಕುರಿತು ಮಾಹಿತಿಯನ್ನು ಪ್ರಚುರಪಡಿಸಲಾಗಿದೆ. ವ್ಯಕ್ತಿಯ ಸಾವನ್ನು ಕಣ್ಣುಗಳ ಮೂಲಕವೂ ಕಂಡು ಹಿಡಿಯಬಹುದು ಎಂದು ಕೆಲವು ಸಂಶೋಧನೆಗಳು ಬಹಿರಂಗಪಡಿಸುತ್ತಿದೆ .ಒಬ್ಬ ವ್ಯಕ್ತಿಯು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರೆ ಅವರ ಅಧ್ಯಯನದಲ್ಲಿ AI ಅವನ ರೆಟಿನಾ ಸ್ಕ್ಯಾನ್ ಮಾಡುತ್ತದೆ. ಸಾವಿನ ಅಂದಾಜು ಸಮಯವನ್ನು ಹೇಳುತ್ತದೆ ಎನ್ನಲಾಗಿದೆ.

Leave A Reply