WhatsApp Update: ಬಂತು ನೋಡಿ ವಾಟ್ಸಾಪ್​ನಲ್ಲಿ ಬಹುಬೇಡಿಕೆಯ ಫೀಚರ್ | ಗ್ರಾಹಕರೇ ಇನ್ನು ಮುಂದೆ ನೀವು ಟೆನ್ಶನ್‌ ಫ್ರೀ!

ಮೆಟಾ ಒಡೆತನದ ವಾಟ್ಸಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್​ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ವಾಟ್ಸಪ್ ಬಳಸದವರು ಯಾರೂ ಇಲ್ಲ ಬಿಡಿ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ವಾಟ್ಸಾಪ್ ವೀಡಿಯೋ ಕಾಲ್ ಮಾಡುವುದು, ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ ನಡೆಸೋದು, ಒಟ್ಟಿನಲ್ಲಿ ವಾಟ್ಸಾಪ್ ಒಂದು ಉತ್ತಮ ಸಂಪರ್ಕ ಮಾಧ್ಯಮ ಎಂದರೆ ತಪ್ಪಾಗಲಾರದು. ಪ್ರಸ್ತುತ ವಾಟ್ಸಾಪ್ ನಿಂದ ನಿಮಗೊಂದು ಸಿಹಿ ಸುದ್ದಿ ಇದೆ ಹೌದು ವಾಟ್ಸ್​ಆ್ಯಪ್​​ ನಲ್ಲಿ
ಇದೀಗ ತನ್ನ ಗ್ರಾಹಕರಿಗಾಗಿ ಮೂಲ ಗುಣಮಟ್ಟದಲ್ಲೇ ಫೋಟೋಗಳನ್ನು ಶೇರ್​ ಮಾಡುವ ಫೀಚರ್​ ಅನ್ನು ಪರಿಚಯಿಸಿದೆ.

ಈಗಾಗಲೇ ವಾಟ್ಸಾಪ್ ಕಳೆದ ವರ್ಷದಲ್ಲಿ ತನ್ನ ಬಳಕೆದಾರರಿಗೆ ಅನುಕೂಲವಾಗುವಂತಹ ಸಾಕಷ್ಟು ಫೀಚರ್ಸ್​​ಗಳನ್ನು ಬಿಡುಗಡೆ ಮಾಡಿದೆ. ಅದರ ಜೊತೆಗೆ ಮುಂದಿನ ವರ್ಷದಲ್ಲಿ ಇನ್ನೂ ಹಲವಾರು ಫೀಚರ್ಸ್​ಗಳು ಬಿಡುಗಡೆಯಾಗಲಿವೆ ಎಂದು ಹೇಳಿತ್ತು. ಅದೇ ರೀತಿ ಇದೀಗ ವಾಟ್ಸಾಪ್ ಮೂಲಕ ಎಷ್ಟೇ ಗುಣಮಟ್ಟದಲ್ಲಿದ್ದರೂ ಫೋಟೋಗಳನ್ನು ಅದೇ ಫಾರ್ಮ್ಯಾಟ್​​ನಲ್ಲಿ ಶೇರ್​ ಮಾಡಬಹುದಾಗಿದೆ.

ವಾಟ್ಸಾಪ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ ನಿಮಗೆ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಲು ಅನುಮತಿಸಲಿದೆ. ಅಂದರೆ ನೀವು ಸೆಂಡ್‌ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಅನ್ನೊದನ್ನ ನೀವೇ ನಿರ್ಧಾರ ಮಾಡಬಹುದಾಗಿದೆ. ಇದರಿಂದ ನಿಮ್ಮ ಫೋಟೋ ಮೂಲ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಸೆಂಡ್‌ ಮಾಡುವ ಅವಕಾಶ ನಿಮಗೆ ಲಭ್ಯವಾಗಲಿದೆ. ಸದ್ಯ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಈ ಫೀಚರ್ಸ್‌ ಲಭ್ಯವಾಗಲಿದ್ದು, ಇದು ಇತ್ತೀಚಿನ ಬೀಟಾ ಅಪ್‌ಡೇಟ್ 2.23.2.11ನಲ್ಲಿ ಲಭ್ಯವಾಗಲಿದೆ ಎಂದು ವರಿದಯಾಗಿದೆ.

ಇನ್ನು ವಾಟ್ಸಾಪ್​ ಪರಿಚಯಿಸಿರುವ ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಫೋಟೋ ವನ್ನು ಶೇರ್​ ಮಾಡಲು ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಇತ್ತೀಚಿನ ಬೀಟಾ ಆವೃತ್ತಿ 2.21.15.7 ನಲ್ಲಿ ಕೂಡ ವಾಟ್ಸಾಪ್‌ ಮೂರು ರೀತಿಯ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡುವ ಅವಕಾಶಗಳನ್ನು ಕಲ್ಪಿಸಿದೆ.

ಇನ್ನು ಈ ಆಯ್ಕೆಯು ವಾಟ್ಸಪ್‌ ಸೆಟ್ಟಿಂಗ್ಸ್‌ನಲ್ಲಿ ಬಳಕೆದಾರರಿಗೆ ಬೇಕಾಗುವ ಹಾಗೆ ಸೆಟ್​ ಮಾಡಿಟ್ಟುಕೊಳ್ಳಬಹುದಾಗಿದೆ. ಇದನ್ನು ಟ್ಯಾಪ್‌ ಮಾಡುವ ಮೂಲಕ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಬಹುದು ಮತ್ತು ಶೇರ್​ ಮಾಡಬಹುದು ಎಂದು ತಿಳಿಸಿದೆ.

ಹೌದು ವಾಟ್ಸಾಪ್​ನಲ್ಲಿ ಈ ಹಿಂದೆಲ್ಲಾ ಫೋಟೋಗಳನ್ನು ಇನ್ನೊಬ್ಬರಿಗೆ ಶೇರ್​ ಮಾಡುವಾಗ ಫೋಟೋ ಕ್ಲಾರಿಟಿ ಕಳೆದುಕೊಳ್ಳುತ್ತಿತ್ತು. ಆದರೆ ಇನ್ಮುಂದೆ ಆ ತೊಂದರೆ ಇರುವುದಿಲ್ಲ ಎಂದು ವಾಟ್ಸಾಪ್ ತಿಳಿಸಿದೆ. ಏಕೆಂದರೆ ಇನ್ಮುಂದೆ ಒಂದು ಫೋಟೋ ಯಾವ ಗುಣಮಟ್ಟದಲ್ಲಿದೆಯೋ ಅದೇ ಗುಣಮಟ್ಟದಲ್ಲಿ ಶೇರ್​ ಮಾಡುವಂತಹ ಆಯ್ಕೆಯೂ ಬರಲಿದೆ. ಈ ಮೂಲಕ ಯಾವುದೇ ಕ್ಲಾರಿಟಿಯ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ವಾಟ್ಸಾಪ್ ಒಡೆತನ ಗ್ರಾಹಕರಿಗೆ ಭರವಸೆ ನೀಡಿದೆ.

Leave A Reply

Your email address will not be published.