ಕುಡಿತದ ನಶೆ | ಬೆಂಗಳೂರಿನಿಂದ ಮುಂಬೈಗೆ ಬಿರಿಯಾನಿ ಆರ್ಡರ್ ಮಾಡಿದ ಹುಡುಗಿ !

Share the Article

ಮುಂಬೈ ಮೂಲದ ಹುಡುಗಿಯೊಬ್ಬಳು ಕುಡಿದ ಅಮಲಿನಲ್ಲಿ ಆನ್‌ಲೈನ್ ನಲ್ಲಿ ಅಂತರಾಜ್ಯದಿಂದ ಬಿರಿಯಾನಿ ಆರ್ಡರ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾಳೆ. ಸಾಮಾನ್ಯವಾಗಿ ಹತ್ತಿರದಲ್ಲಿರುವ ಹೋಟೆಲ್‌ಗಳಿಂದ ಆಹಾರವನ್ನು ಆರ್ಡರ್ ಮಾಡಲಾಗುತ್ತದೆ. ಆದರೆ ಈ ಹುಡುಗಿ ಕುಡಿದ ಮತ್ತಿನಲ್ಲಿ ಆನ್ಲೈನ್ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಮೇಘನಾ ಫುಡ್ಸ್ ಹೋಟೆಲ್‌ನಿಂದ ಮುಂಬೈನಲ್ಲಿರುವ ತನ್ನ ನಿವಾಸಕ್ಕೆ ಬಿರಿಯಾನಿ ಅರ್ಡರ್ ಮಾಡಿರುವ ವಿಚಿತ್ರ ಘಟನೆಯೊಂದು ಸಂಭವಿಸಿದೆ.

ಅಮಲೇರಿದ ಸ್ಥಿತಿಯಲ್ಲಿದ್ದ ಹುಡುಗಿ ಅನ್ ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡುವಾಗ, ಕಣ್ಣುಗಳು ಮಂಜುಮಂಜಾಗಿ ಕಾಣಿಸಿದ್ದು, ಕಪ್ಪಾಗಿ ಬೆಂಗಳೂರಿನ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ 2,500 ಸಹ ಪಾವತಿಸಿದ್ದಾಳೆ.

ನಶೆ ಪ್ರಮಾಣ ಕ್ರಮೇಣ ಇಳಿಯುತ್ತಿದ್ದಂತೆ ಅರ್ಡರ್ ಮಾಡಿದ ವಿಳಾಸವನ್ನು ಪುನಃ ಪರಿಶೀಲಿಸಿದಾಗ ತಾನು ಮಾಡಿದ ತಪ್ಪಿನ ಅರಿವಾಗಿದೆ. ಈ ಪೋಸ್ಟಿಗೆ ಜೊಮ್ಯಾಟೋ ಸೇರಿದಂತೆ ಅನೇಕ ಟ್ವಿಟ್ಟರ್ ಬಳಕೆದಾರರಿಂದ ಆಸಕ್ತಿದಾಯಕ ಕಾಮೆಂಟ್‌ಗಳು ಬಂದಿವೆ.

Leave A Reply