Google Job Cut । 12000 ಜನರನ್ನು ಕೆಲಸದಿಂದ ವಜಾ ಹಿನ್ನೆಲೆ । ಸಿಇಒ ಸುಂದರ್ ಪಿಚೈರನ್ನು ವಜಾಗೊಳಿಸಿ ಎಂದು ಟೆಕ್ಕಿಗಳ ಭಾರೀ ಒತ್ತಾಯ

ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ 12,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ಘೋಷಿಸಿತ್ತು. ಇದು ಅದರ ಈಗಿನ ಉದ್ಯೋಗಿಗಳ ಶೇಕಡಾ 6 ರಷ್ಟಿದೆ. ಟೆಕ್ ದೈತ್ಯನ ಈ ನಡೆ ಕಂಪನಿಯ ಸಿಬ್ಬಂದಿ ಮತ್ತು ಹೊರಗಿನ ಟೆಕ್ಕಿಗಳನ್ನು ಬೆಚ್ಚಿಬೀಳಿಸಿದೆ. ಅವರು ಈಗ ಕಂಪನಿಯ ನಿರ್ಧಾರವನ್ನು ಪ್ರಶ್ನಿಸುವ ಪೋಸ್ಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯಗಳ ವಿರೋಧಗಳ ಪ್ರತಿಭಟನೆಗಳ ಪ್ರವಾಹವನ್ನೇ ಹರಿಸಲು ಪ್ರಾರಂಭಿಸಿದ್ದಾರೆ.

ಜನವರಿ 20 ರಂದು, ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸರಿಸುಮಾರು 12,000 ಉದ್ಯೋಗಿಗಳನ್ನು ಕಡಿತ ಮಾಡಿದ್ದರು. ಹಾಗೆ ಕೆಲಸದಿಂದ ತೆಗೆಯುವಾಗ “ಇದಕ್ಕಾಗಿ ಆಳವಾಗಿ ವಿಷಾದಿಸುತ್ತೇನೆ” ಎಂದು ಅವರು ಹೇಳಿದ್ದರು. ಮತ್ತು “ನಮ್ಮನ್ನು ಮನೆಗೆ ಕಳುಹಿಸುವ ನಿರ್ಧಾರಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ” ಎಂದು ಅವರು ಹೇಳಿಕೆಯಲ್ಲಿ ಹೇಳಿದ್ದರು.

ಆದರೆ ಪಿಚೈ ಅವರ ಹೇಳಿಕೆ ಹೊರಗಿರುವ ಟೆಕ್ಕಿಗಳಿಗೆ ಹಾಗೂ ಉದ್ಯೋಗ ಪೀಡಿತರಿಗೆ ಸರಿ ಹೋಗಿಲ್ಲ. ವಜಾಗೊಳಿಸುವ ನಿರ್ಧಾರಗಳಿಗೆ ಪಿಚೈ ಜವಾಬ್ದಾರರಾಗಿದ್ದರೆ, ಅವರು ಕೂಡಾ ಯಾಕೆ ಗೂಗಲ್‌ನಲ್ಲಿ ಮುಂದುವರಿಯಬೇಕು ಎಂದು ಟೆಕ್ಕಿ ಬಳಗ ಒಕ್ಕೊರಲಿನಿಂದ ಕೇಳುತ್ತಿದೆ. YourDOST ನ ಇಂಜಿನಿಯರಿಂಗ್ ನಿರ್ದೇಶಕ ವಿಶಾಲ್ ಸಿಂಗ್ ಅವರು ಲಿಂಕ್ಡ್‌ಇನ್ ಪೋಸ್ಟ್‌ ಮಾಡಿ,“ಸುಂದರ್ ಪಿಚೈ ಗೂಗಲ್‌ನಲ್ಲಿ ಏಕೆ ಮುಂದುವರಿಯಬೇಕು? ಅವನು ತಪ್ಪಾದ ನಡೆಗಳನ್ನು ಹಾಕಿದ್ದರೆ ಅದಕ್ಕೆ ಸುಂದರ್ ಅವರನ್ನೇ ಜವಾಬುದಾರರನ್ನಾಗಿ ಮಾಡಬೇಕು.

ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾರಿಗೂ ಇದೆ ಶಿಕ್ಷೆ ಕೊಡಬೇಕು. ಕಳೆದ ವಾರ ಮೈಕ್ರೋಸಾಫ್ಟ್ ಕಂಪನಿಯು, ಮೂರನೇ ತ್ರೈಮಾಸಿಕ ಅಂತ್ಯದ ವೇಳೆಗೆ ನಮ್ಮ ಒಟ್ಟಾರೆ ಉದ್ಯೋಗಿಗಳಲ್ಲಿ 10,000 ಉದ್ಯೋಗಗಳನ್ನು ಕಡಿಮೆ ಮಾಡುವ ಬದಲಾವಣೆಗಳನ್ನು ಮಾಡಲಿದೆ ಎಂದು ಹೇಳಿದರು. “ನಾಯಕರಿಗೆ ಕೂಡಾ ಸ್ವಲ್ಪ ಶಿಕ್ಷೆ ಇರಬೇಕು, ಅವರು ಕಠಿಣ ನಿರ್ಧಾರಗಳನ್ನು ವಿವರಿಸುವ ಪತ್ರಗಳನ್ನು ಮಾತ್ರ ಕಳುಹಿಸಲು ಸಾಧ್ಯವಿಲ್ಲ. ಅದು ತುಂಬಾ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರ ತಪ್ಪು ನಿರ್ಧಾರಗಳಿಗೆ ಅವರು ಪಾವತಿಸಬೇಕು. ಉನ್ನತ ನಾಯಕತ್ವದಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳೋದು ನಿಲ್ಲುತ್ತದೆ ” ಎಂದು ಅವರು ಹೇಳಿದ್ದಾರೆ.

ಜನವರಿ 20 ರಂದು, ಗೂಗಲ್‌ನ ವಜಾಗೊಳಿಸಿದ ಸಿಬ್ಬಂದಿಗೆ ಇಮೇಲ್‌ನಲ್ಲಿ ಪಿಚೈ ಅವರು ಹಂಚಿಕೊಳ್ಳಲು ಕೆಲವು ಕಷ್ಟಕರವಾದ ಸುದ್ದಿಗಳಿವೆ ಎಂದು ಹೇಳಿದರು. “ಅದಕ್ಕಾಗಿ ನಾನು ತೀವ್ರವಾಗಿ ವಿಷಾಧಿಸುತ್ತೇನೆ. ಈ ಬದಲಾವಣೆಗಳು ಗೂಗ್ಲರ್‌ಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂಬ ಅಂಶವು ನನ್ನ ಮೇಲೆ ಭಾರವಾಗಿರುತ್ತದೆ ಮತ್ತು ನಮ್ಮನ್ನು ಇಲ್ಲಿಗೆ ಕರೆದೊಯ್ಯುವ ನಿರ್ಧಾರಗಳಿಗೆ ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ, ”ಎಂದು ಅವರು ಇಮೇಲ್‌ನಲ್ಲಿ ಬರೆದಿದ್ದಾರೆ.

ಟೆಕ್ ದೈತ್ಯನ ನಿರ್ಧಾರದಿಂದ ಆಘಾತಕ್ಕೊಳಗಾದ ಬಳಕೆದಾರರು, ಗೂಗಲ್ ನಂತಹ ಕಂಪನಿ ಇಂತಹ ನಿರ್ಧಾರ ತೆಗೆದುಕೊಂಡರೆ, ಇತರರಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂದು ಅವರು ಬರೆದಿದ್ದಾರೆ.

ಗೂಗಲ್‌ನಲ್ಲಿ ಬ್ಯುಸಿನೆಸ್ ಆಪರೇಷನ್ಸ್ ವಿಭಾಗದಲ್ಲಿ ಪ್ರೋಗ್ರಾಮ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪುಲ್ಕಿತ್ ಪಹ್ವಾ, ಇತ್ತೀಚೆಗೆ ಕೆಲಸದಿಂದ ವಜಾಗೊಂಡಿದ್ದು, ತಾನು ಮತ್ತು ಗೂಗಲ್‌ನ ಇತರ ಉದ್ಯೋಗಿಗಳು ಇದು ಯಾವುದೇ ಕಂಪನಿಯ ಸಿಬ್ಬಂದಿಯಂತೆ ಆಗುತ್ತಿದೆ. “ಗೂಗಲ್ ಹೀಗೆ ಮಾಡುವುದಿಲ್ಲ ಅಂದುಕೊಂಡಿದ್ದೆವು, ಆದರೆ ಇವರು ಮಾಡಿದರು” ಎಂದಿದ್ದಾರೆ ಕೆಲಸ ಕಳ್ಕೊಂಡ ಓರ್ವ ಮಹಿಳೆ.

ಏತನ್ಮಧ್ಯೆ, ಆಲ್ಫಾಬೆಟ್ ವರ್ಕರ್ಸ್ ಯೂನಿಯನ್ (AWU) ಕಳೆದ ತ್ರೈಮಾಸಿಕದಲ್ಲಿ ಮಾತ್ರ $17 ಶತಕೋಟಿ ಲಾಭ ಗಳಿಸಿದ ಕಂಪನಿಗೆ ಇದು ಸ್ವೀಕಾರಾರ್ಹವಲ್ಲದ ವರ್ತನೆ ಎಂದು ಕಂಪನಿಯ ವಜಾ ನಿರ್ಧಾರವನ್ನು ಟೀಕಿಸಿದೆ. ಆಲ್ಫಾಬೆಟ್ Google ನ ಮೂಲ ಕಂಪನಿಯಾಗಿದೆ. “ಆಲ್ಫಾಬೆಟ್ ನಾಯಕತ್ವವು ‘ಸಂಪೂರ್ಣ ಜವಾಬ್ದಾರಿ’ ಎಂದು ಹೇಳಿಕೊಂಡರೂ, ಈಗ ಉದ್ಯೋಗವಿಲ್ಲದೆ ಇರುವ 12,000 ಕಾರ್ಮಿಕರಿಗೆ ಇದುತೀವ್ರ ಅಸಮಾಧಾನದ ಮಾತೇ. ಕಳೆದ ತ್ರೈಮಾಸಿಕದಲ್ಲಿ ಮಾತ್ರ17 ಬಿಲಿಯನ್ ಡಾಲರ್, ಅಂದರೆ ಭಾರತದ 1,38,395 ಕೋಟಿ ಡಾಲರ್ ಲಾಭ ಗಳಿಸಿದ ಕಂಪನಿಗೆ ಇದು ಸ್ವೀಕಾರಾರ್ಹವಲ್ಲದ ನಡವಳಿಕೆಯಾಗಿದೆ” ಎಂದು ಯೂನಿಯನ್ ಹೇಳಿಕೆಯಲ್ಲಿ ತಿಳಿಸಿದೆ.

“ಕಾರ್ಮಿಕರು ಸುರಕ್ಷಿತ ಉದ್ಯೋಗಕ್ಕಾಗಿ ಆಲ್ಫಾಬೆಟ್ ಅನ್ನು ಎಂದಿಗೂ ಅವಲಂಬಿಸಲು ಸಾಧ್ಯವಾಗಲಿಲ್ಲ-ಅಗಾಧವಾದ ಉಪಗುತ್ತಿಗೆಯ ಉದ್ಯೋಗಿಗಳಿಂದ ಸಾಕ್ಷಿಯಾಗಿದೆ-ಆದರೆ ಟೆಕ್ ಕಾರ್ಮಿಕರು ಬಹುಮತವನ್ನು ನಿರ್ಮಿಸಬೇಕು ಮತ್ತು ಉದ್ಯೋಗದಾತರು ತಮ್ಮ ಜೀವನೋಪಾಯವನ್ನು ರಕ್ಷಿಸಲು ಒಟ್ಟಾಗಿ ಕಾರ್ಮಿಕರೊಂದಿಗೆ ಚೌಕಾಶಿ ಮಾಡಲು ಒತ್ತಾಯಿಸಬೇಕು” ಎಂದು ಯೂನಿಯನ್ ಹೇಳಿದೆ. ಅಲ್ಲದೆ, ದೊಡ್ಡಮಟ್ಟದಲ್ಲಿ ಪ್ರತಿಭಟಿಸುವ ಎಚ್ಚರಿಕೆ ಮತ್ತು ತಯಾರಿ ನಡೆಸಿದೆ. ಅದಕ್ಕೆ ಸಾರ್ವಜನಿಕರ ಮತ್ತು ಎಲ್ಲಾ ಟೆಕ್ ವಲಯ ಪ್ರಾಥಮಿಕ ಬೆಂಬಲವನ್ನು ಮಾಧ್ಯಮಗಳ ಮೂಲಕ ತೋರ್ಪಡಿಸುತ್ತಿದ್ದಾರೆ.

Leave A Reply

Your email address will not be published.