ಒಗ್ಗಟ್ಟಿನಲ್ಲಿ ಕೊನೆಗೂ ‘ಮೆಟಾ’ವನ್ನು ಮಣಿಸಿದ ನೆಟ್ಟಿಗರು! ಇನ್ಮುಂದೆ ಇನ್‌ಸ್ಟಾ, ಫೇಸ್‌ಬುಕ್ ಅಲ್ಲೂ ಸಿಗುತ್ತೆ ‘ಆ ತರದ’ ಫೋಟೋಗಳು

ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಇರುವಂತಹ, ಸದಾ ರಸಿಕತೆಯಿಂದ ಕೂಡಿರುವಂತಹ ನೆಟ್ಟಿಗರಿಗೆ ಅದೊಂದು ದಿನ ಬೇಸರ, ನಿರಾಶೆ ಎಲ್ಲವೂ ಒಟ್ಟಿಗೇ ಆಗಿತ್ತು. ಅದರಲ್ಲೂ ಕೂಡ ಹುಡುಗರಿಗೆ ಸ್ವಲ್ಪ ಹೆಚ್ಚಿಗೇ ಎನ್ನಬಹುದು. ಇದಕ್ಕೆ ಪರಿಹಾರ ಹುಡುಕಬೇಕೆಂದು ಸದಾ ಪ್ರಯತ್ನವೂ ನಡೆಯುತ್ತಿತ್ತು. ಇದೀಗ ಆ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಿ, ರಸಿಕರ ಆಸೆಗಳು ಮತ್ತೆ ಚಿಗುರೊಡೆಯುವಂತಾಗಿದೆ. ಹೌದು ಈ ಹಿಂದೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳು ನಗ್ನ ಸ್ತನಗಳನ್ನು ತೋರಿಸುವ ಫೋಟೊಗಳ ಮೇಲೆ ನಿಷೇಧ ಹೇರಿದ್ದು, ಇದೀಗ ಮತ್ತೆ ಈ ನಿಷೇಧ ತೆರವಿಗೆ ಎರಡೂ ಸಂಸ್ಥೆಗಳು ಮುಂದಾಗಿರುವುದು ಇದಕ್ಕೆ ಕಾರಣವಾಗಿದೆ!

ಸೋಷಿಯಲ್ ಮೀಡಿಯಾಗಳಲ್ಲಿ ನೋಡುವುದಾದರೆ ಹುಡುಗರ ಫೋಟೋ ಅಥವಾ ಪೋಸ್ಟ್ ಗಳಿಗಿಂತ ಹುಡುಗಿಯರು ಮಾಡುವ ಪೋಸ್ಟ್ ಗಳಿಗೇ ಹೆಚ್ಚು ಲೈಕ್ ಕಮೆಂಟ್ಗಳು ಬಂದಿರುತ್ತವೆ. ಯಾಕಂದ್ರೆ ಹುಡುಗಿಯರ ಮೈಮಾಟಕ್ಕೆ ಎಂತಾ ಹುಡುಗರು ಕೂಡ ಫಿದಾ ಆಗ್ತಾರೆ. ಅದರಲ್ಲೂ ಎಕ್ಸ್ ಪೋಸ್ ಮಾಡಿರುವ ಫೋಟೋಗಳಂದ್ರೆ ಇನ್ನು ಕೇಳಬೇಕೆ?! ಆದರೆ ಇದ್ದಕ್ಕಿದ್ದಂತೆ ಈತರದ ಹೊಸ ಹೊಸ ಫೋಟೋಗಳು ಕಾಣುವುದು ನಿಂತು ಹೋದ್ರೆ ಹೇಗಾಗಬೇಡ! ಇದಕ್ಕೆ ಕಾರಣ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್, ಬಳಕೆದಾರರಿಗೆ ಕೆಲ ನಗ್ನ ಫೋಟೋಗಳನ್ನು ಹಂಚಿಕೊಳ್ಳುವುದಕ್ಕೆ ಬ್ರೇಕ್‌ ಹಾಕಿತ್ತು. ಅದರಲ್ಲೂ ವಿಶೇಷವಾಗಿ ನಗ್ನ ಸ್ತನಗಳನ್ನು ತೋರಿಸುವ ಫೋಟೋಗಳನ್ನು ಈ ಎರಡೂ ಸಾಮಾಜಿಕ ಜಾಲತಾಣಗಳು ನಿಷೇಧಿಸಿದ್ದವು.

ಆದರೆ ಸಾಮಾಜಿಕ ಜಾಲತಾಣಗಳ ಈ ನಿರ್ಧಾರವನ್ನು ಖಂಡಿಸಿದ ಅನೇಕರು ಹೋರಾಟಕ್ಕೆ ಇಳಿದಿದ್ದರು. ‘Free the Nipple’ ಎಂಬ ಅಭಿಯಾನದೊಂದಿಗೆ ಸಾಮಾಜಿಕ ಜಾಲತಾಣಗಳ ನಿಷೇಧವನ್ನು ಪ್ರಶ್ನಿಸಿ ಒಂದು ದಶಕದವರೆಗೂ ಹೋರಾಟ ಮಾಡುತ್ತಿದ್ದವು. ಸ್ತನಗಳ ಫೋಟೋಗಳನ್ನು ನಿಷೇಧಿಸಿದ್ದರಿಂದ, ಇದು ಲಿಂಗ ತಾರತಮ್ಯ ಎಂಬ ದೊಡ್ಡ ಕೂಗು ಕೇಳಿ ಬಂದಿತ್ತು. ಅಭಿಯಾನ, ವಿರೋಧದ ಪರಿಣಾಮವಾಗಿ ಪ್ರಸ್ತುತ ನಗ್ನ ಸ್ತನಗಳನ್ನು ತೋರಿಸುವ ಫೋಟೊಗಳ ನಿಷೇಧ ತೆರವಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳು ನಿರ್ಧಾರ ಮಾಡಿವೆ ಎಂದು ವರದಿ ಹೇಳಿದೆ. ಇದರಿಂದ ಇಂತಹ ಫೋಟೋ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ.

ಸ್ತನ್ಯಪಾನ ಮಾಡುವ ತಾಯಂದಿರು ಸ್ತನಗಳ ಮೇಲಿನ ನಿಷೇಧದ ವಿರುದ್ಧ ಪ್ರತಿಭಟಿಸಲು ಫೇಸ್‌ಬುಕ್‌ನ ಪ್ರಧಾನ ಕಛೇರಿಯಲ್ಲಿ ಜಮಾಯಿಸಿದ್ದರು. ಈ ಅಭಿಯಾನವು ಕಾಲೇಜು ಕ್ಯಾಂಪಸ್‌ಗಳಲ್ಲಿ ವ್ಯಾಪಕ ಬೆಂಬಲವನ್ನು ಗಳಿಸಿತು ಮತ್ತು ರಿಹಾನ್ನಾ, ಮಿಲೀ ಸೈರಸ್ ಮತ್ತು ಲೀನಾ ಡನ್‌ಹ್ಯಾಮ್ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳಿಂದ ಬೆಂಬಲ ಸಹ ಪಡೆದಿತ್ತು. ಅಭಿಯಾನ, ವಿರೋಧಗಳಿಗೆ ಮಣಿದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಈ ಬಗ್ಗೆ ವಿಚಾರಣೆ ಮಾಡಲು ಮೇಲ್ವಿಚಾರಣಾ ಮಂಡಳಿಯನ್ನು ರಚಿಸಿತ್ತು. ಸದ್ಯ ಈ ಮಂಡಳಿ ನೀಡಿರುವ ಹೇಳಿಕೆಯನುಸಾರ ನಗ್ನ ಸ್ತನಗಳ ಫೋಟೋಗಳನ್ನು ನಿಷೇಧಿಸಿದ ತಮ್ಮ ಕಟ್ಟುನಿಟ್ಟಾದ ನಿಯಮವನ್ನು ತೆಗೆದುಹಾಕಲು ಮೆಟಾ ಸಂಸ್ಥೆ ನಿರ್ಧರಿಸಿದೆ.

ಮೆಟಾದ ಕಟ್ಟುನಿಟ್ಟಾದ ನಗ್ನತೆಯ ನೀತಿಯು ತೀವ್ರ ಚರ್ಚೆಯ ವಿಷಯವಾಗಿದೆ. 2018 ರಲ್ಲಿ ಸಿಇಒ ಮಾರ್ಕ್ ಜುಕರ್‌ಬರ್ಗ್ ಮೆಟಾ ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಇದನ್ನು ವಿಚಾರಣೆಗೆ ಒಳಪಡಿಸಿದ ಮೇಲ್ವಿಚಾರಣ ಮಂಡಳಿಯು ನಗ್ನತೆಯ ಬಗ್ಗೆ ಮಾತನಾಡುವಾಗ ಮೆಟಾ ‘ಸ್ಪಷ್ಟ, ವಸ್ತುನಿಷ್ಠ, ಹಕ್ಕುಗಳನ್ನು ಗೌರವಿಸುವ ಮಾನದಂಡಗಳನ್ನು ವ್ಯಾಖ್ಯಾನಿಸಬೇಕು’ ಎಂದು ಮಂಡಳಿಯು ಸ್ಪಷ್ಟಪಡಿಸಿದೆ. ‘ಇದರಿಂದಾಗಿ ಎಲ್ಲಾ ಜನರನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ’ ಎಂದು ಹೇಳಿದೆ.

ಅಲ್ಲದೆ ಜನವರಿ 17 ರಂದು ಮೇಲ್ವಿಚಾರಣಾ ಮಂಡಳಿಯು, ಮೆಟಾ ತನ್ನ ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಯ ಸಮುದಾಯದ ಮಾನದಂಡವನ್ನು ‘ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳನ್ನು ನಾವು ಗೌರವಿಸಬೇಕಿದೆ. ಇದನ್ನು ಬದಲಾಯಿಸುವ ಅಗತ್ಯವಿದೆ’ ಎಂದು ಮಂಡಳಿಯು ಶಿಫಾರಸು ಮಾಡಿದೆ. ಹಾಗೆಯೇ ಮಂಡಳಿಯ ಈ ಶಿಫಾರಸುಗಳನ್ನು ಮೆಟಾ ಅನುಸರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.