ಹಿಜಾಬ್ ಧರಿಸಿದರೆ ನಾನು ನಾನಾಗಿರಲ್ಲ – ಟೆನಿಸ್ ಆಟಗಾರ್ತಿಯ ಹೇಳಿಕೆ
ಇರಾನ್‌ನಲ್ಲಿ ಹಿಜಾಬ್ ವಿವಾದ ಕಾರಣದಿಂದ ಓರ್ವ ಯುವತಿ ಸಾವನ್ನಪ್ಪಿದ್ದ ಘಟನೆಯೊಂದು ದೇಶದಾದ್ಯಂತ ಚರ್ಚೆಗೊಳಪಟ್ಟಿದ್ದು ಎಲ್ಲರಿಗೂ ತಿಳಿದೇ ಇದೆ. 22ವರ್ಷದ ಯುವತಿಯೋರ್ವಳನ್ನು ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂಬ ಕಾರಣದಿಂದ ಅಲ್ಲಿನ ನೈತಿಕ ಪೊಲೀಸರು ಬಂಧಿಸಿದ್ದು, ನಂತರ ಯುವತಿ ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ ಘಟನೆಯ ನಂತರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಎಲ್ಲೆಡೆ ವರದಿಯಾಗಿತ್ತು.
ನಂತರ ಇತ್ತೀಚೆಗೆ ಇರಾನ್‌ನಿಂದ ಗಡಿಪಾರಾಗಿರುವ ಅಂತರಾಷ್ಟ್ರೀಯ ಚೆಸ್ ಪ್ಲೇಯರ್ ಸಾರಾ ಖದೀಮ್ ಅವರನ್ನು ಕೂಡಾ ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂಬ ಕಾರಣದಿಂದ ಗಡಿಪಾರು ಮಾಡಲಾಗಿತ್ತು. ಅಂತರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಹಿಜಾಬ್ ಧರಿಸದೇ ಆಟ ಆಡಿದ್ದರಿಂದ ಅವರನ್ನು ಗಡಿಪಾರು ಮಾಡಲಾಗಿದೆ. ಈಗ ಅವರು ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. “ಹಿಜಾಬ್ ಧರಿಸಿದರೆ ನಾನು ನಾನಾಗಿರುವುದಿಲ್ಲ. ಅದನ್ನು ಧರಿಸಿ ನಾನು ಆರಾಮವಾಗಿ ಇರಲು ಸಾಧ್ಯವಿಲ್ಲ. ಹೀಗಾಗಿ ಆ ಪರಿಸ್ಥಿತಿಯನ್ನು ಕೊನೆಗಾಣಿಸಲು ನಾನು ಬಯಸುತ್ತೇನೆ. ಅಲ್ಲದೇ ನಾನು ಮುಂದೆಂದೂ ಹಿಜಾಬ್ ಧರಿಸುವುದಿಲ್ಲ ಎಂದು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದು, ಸ್ಪೇನ್‌ಗೆ ಬಂದ ನಂತರ ಇದು ಅವರ ಮೊದಲ ಸಾರ್ವಜನಿಕ ಪ್ರತಿಕ್ರಿಯೆಯಾಗಿದೆ.
ಡಿಸೆಂಬರ್‌ನಲ್ಲಿ ಇರಾನ್‌ನ ಚೆಸ್ ಆಟಗಾರ್ತಿ 25 ವರ್ಷದ ಸಾರಾ ಖದೀಮ್(Sara Khadem), ಕಝಾಕಿಸ್ತಾನ್‌ನ (Kazakhstan) ಅಲ್ಮಾಟಿಯಲ್ಲಿ (Almaty)ನಡೆದ ಇಂಟರ್‌ನ್ಯಾಶನಲ್ ಚೆಸ್ ಫೆಡರೇಶನ್ (FIDE) ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಹಿಜಾಬ್ ಧರಿಸದೇ ಭಾಗವಹಿಸಿದ್ದರು. ಇರಾನ್‌ನ ಸ್ಥಳೀಯ ಕಾನೂನಿನ ಪ್ರಕಾರ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಸಾರಾ ಅವರ ನಿರ್ಧಾರವನ್ನು ಹಿಜಾಬ್ ವಿರುದ್ಧದ ಹೋರಾಟಕ್ಕೆ ಬೆಂಬಲ ಎಂದು ಇರಾನ್‌ನ ಹಿಜಾಬ್ ಹೋರಾಟಗಾರರು ಹೇಳಿದ್ದರು.
ತಮ್ಮ ಈ ಹೇಳಿಕೆಯಿಂದ ಇರಾನ್‌ನಲ್ಲಿರುವ ತನ್ನ ಸಂಬಂಧಿಕರ ಮೇಲೆ ಪ್ರತೀಕಾರ ತೀರಿಸಲಾರರು ಎಂಬ ಭರವಸೆ ನನಗಿದೆ. ಏಕೆಂದರೆ ನನ್ನ ಕೆಲಸಗಳಿಗೆ ನಾನೇ ಜವಾಬ್ದಾರಿ ಹೊರತು ಬೇರಾರೂ ಅಲ್ಲ. ಈ ನಿರ್ಧಾರ ನನ್ನ ಸ್ವಂತದ್ದು, ಇದರ ಬಗ್ಗೆ ವಿವರಣೆ ನೀಡಬೇಕಾದವಳು ನಾನೇ ಆಗಿದ್ದೇನೆ ಎಂದು ಅವರು ಹೇಳಿದ್ದಾರೆ. ತನ್ನ ಮಗನ ಜನನದ ನಂತರ ತಾನು ವಿದೇಶಕ್ಕೆ ತೆರಳುವ ಬಗ್ಗೆ ಚಿಂತನೆ ನಡೆಸಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.
ನನ್ನ ಪುತ್ರ ಸ್ಯಾಮ್ ಬೀದಿಗಳಲ್ಲಿ ಭಯದ ವಾತಾವರಣವಿಲ್ಲದೇ ಓಡಾಡಬೇಕು, ಆತನಿಗೆ ಹೊರಗಿನ ಚಿಂತೆಗಳು ಯಾವುದೂ ಇರಬಾರದು, ಅಂತಹ ನಿಷ್ಕಲ್ಮಶ ವಾತಾವರಣದಲ್ಲಿ ನನ್ನ ಮಗ ಬೆಳೆಯಬೇಕೆಂದು ನಾನು ಹಾಗೂ ಆತನಿಗೆ ಹೊರಗಿನ ಚಿಂತೆಗಳಿರಬಾರದು ಅಂತಹ ವಾತಾವರಣದಲ್ಲಿ ನನ್ನ ಪುತ್ರ ಬೆಳೆಯಬೇಕು. ಇದು ನನ್ನ ಬಯಕೆ. ಹೀಗೆ ಆತನ ಬಗ್ಗೆ ಯೋಚಿಸಿದಾಗ ಸ್ಪೇನ್ ನಮಗೆ ಒಳ್ಳೆಯ ಸ್ಥಳ ಎನಿಸಿತು ಎಂದು ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ. ನಾನು ಚೆಸ್ ಟೂರ್ನ್‌ಮೆಂಟ್‌ನಲ್ಲಿ ಇರಾನ್ ಅನ್ನು ಪ್ರತಿನಿಧಿಸುವುದನ್ನು ಇಷ್ಟ ಪಡುತ್ತೇನೆ. ಅಷ್ಟು ಮಾತ್ರವಲ್ಲೇ ಆನ್‌ಲೈನ್ ಸ್ಟ್ರೀಮರ್ ಆಗಲು ಕೂಡಾ ನನಗೆ ಇಚ್ಛೆ ಇದೆ ಎಂಬ ಮಾತನ್ನು ಹೇಳಿದ್ದಾರೆ.
ಸರಸದತ್ ಖಡೇಮಲಶರೀಃ ಎಂದು ಕೂಡ ಪರಿಚಿತರಾಗಿರುವ ಸಾರಾ ಖದೀಮ್, ಅವರು ಜನವರಿ ಆರಂಭದಲ್ಲಿ ತನ್ನ ಪತಿ ಹಾಗೂ ಸಿನಿಮಾ ನಿರ್ದೇಶಕ ಅರ್ದೇಶಿರ್ ಅಹ್ಮದಿ ಹಾಗೂ ತನ್ನ 10 ತಿಂಗಳ ಪುತ್ರ ಸ್ಯಾಮ್ ಜೊತೆ ದೇಶ ತೊರೆದಿದ್ದರು. ಭದ್ರತೆಯ ದೃಷ್ಟಿಯಿಂದ ಈ ಸಂದರ್ಶನವನ್ನು ಗೌಪ್ಯ ಸ್ಥಳದಲ್ಲಿ ಮಾಡಲಾಗಿದೆ ಎಂದು ಸ್ಪೇನ್‌ನ ದಿನಪತ್ರಿಕೆ ಇಐ ಪಾಯಿಸ್ ಹೇಳಿದೆ. ಇರಾನಿನಲ್ಲಿ ಅಲ್ಲಿನ ಕಾನೂನಿನ ಪ್ರಕಾರ, ಅಲ್ಲಿನ ಮಹಿಳಾ ಅಥ್ಲೀಟ್‌ಗಳು, ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಪ್ರತಿನಿಧಿಸುವಾಗ ತಮ್ಮ ತಲೆಯನ್ನು ಮುಚ್ಚಬೇಕು. ಇದು ಬಹಳ ಮುಖ್ಯವಾಗಿದೆ. ಇಸ್ಲಾಮಿಕ್ ರಿಪಬ್ಲಿಕ್ ಮಹಿಳೆಯರಿಗೆ ನೀಡಲಾದ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಅವರು ಕಡ್ಡಾಯವಾಗಿ ಧರಿಸಬೇಕು ಎಂಬುದು ಅಲ್ಲಿನ ಕಾನೂನಾಗಿದೆ.