ಬಿಯರ್ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲುಗಳು ಕರಗುತ್ತದೆಯೇ ? ತಜ್ಞರು ಏನು ಹೇಳಿದ್ದಾರೆ ? ಇಲ್ಲಿದೆ ಉತ್ತರ
ನೀರು ಮತ್ತು ಚಹಾದ ಬಳಿಕ ಜಗತ್ತಿನಲ್ಲಿ ಹೆಚ್ಚು ಜನರು ಸೇವಿಸುವ ಪಾನೀಯವೇ ಬಿಯರ್. ಇದು ಅತ್ಯಂತ ಹಳೆಯ ಪಾನೀಯವೂ ಹೌದು. ನಿಮ್ಮ ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ, ‘ಒಂದು ಪೆಗ್ ಬಿಯರ್ ಹಾಕು ಮಗಾ…ಎಲ್ಲಾ ಸರಿ ಹೋಗುತ್ತೆ’ ಎಂದು ಗೆಳೆಯರು ನಗೆ ಚಟಾಕಿ ಹಾರಿಸಿರುವುದನ್ನು ಕೇಳಿರುತ್ತೀರಿ. ಆದಾಗ್ಯೂ, ಅಚ್ಚರಿ ಎಂಬಂತೆ ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಬಹುದು ಎಂದು ಕೆಲವರು ಭಾವಿಸುತ್ತಾರೆ. ನೀವು ಅವರಲ್ಲಿ ಒಬ್ಬರಾದರೆ, ಈಗಲೇ ಈ ಯೋಚನೆಯನ್ನು ಬಿಟ್ಟುಬಿಡಿ. ಏಕೆಂದರೆ ಇದು ಸಂಪೂರ್ಣ ಸತ್ಯವಲ್ಲ!!!
ಹೌದು, ಬಿಯರ್ ಕುಡಿದರೆ, ಮೂತ್ರಪಿಂಡದಲ್ಲಿನ ಕಲ್ಲುಗಳು ಹೊರಗೆ ಹೋಗುವುದಿಲ್ಲ. ಇದು ಕೇವಲ ಭ್ರಮೆ ಅಷ್ಟೆ. ಅಮೆರಿಕನ್ ಅಡಿಕ್ಷನ್ ಸೆಂಟರ್ ನ ವರದಿಯ ಪ್ರಕಾರ ಕುಡಿತವು ಮೂತ್ರಪಿಂಡದ ಕಲ್ಲುಗಳು ಹೊರಬರಲು ಸಹಾಯಮಾಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ನೀವು ಪದೇ ಪದೇ ಬಿಯರ್ ಕುಡಿಯುತ್ತಿದ್ದರೆ, ಇದು ಮೂತ್ರಪಿಂಡದ ಸಮಸ್ಯೆಗಳು, ಮೂತ್ರಪಿಂಡ ವೈಫಲ್ಯ, ರಕ್ತದೊತ್ತಡ, ಕ್ಯಾನ್ಸರ್ ಮತ್ತು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಆಲ್ಕೋಹಾಲ್ ಅಥವಾ ಬಿಯರ್ ಮೂತ್ರಪಿಂಡದ ಕಲ್ಲುಗಳನ್ನು ಹೊರತೆಗೆಯಲು ಸಹಾಯ ಮಾಡುವುದಿಲ್ಲ ಎಂದು ಎಸಿಸಿ ವರದಿ ಸ್ಪಷ್ಟವಾಗಿ ಹೇಳುತ್ತದೆ. ಇದಕ್ಕಾಗಿ ನೀವು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಔಷಧಿಗಳನ್ನು ತೆಗೆದುಕೊಳ್ಳಲೇ ಬೇಕು. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ವರದಿಯ ಪ್ರಕಾರ ಒಂದು ಹನಿ ಆಲ್ಕೋಹಾಲ್ ಅನ್ನು ಕೂಡಾ ಅಪಾಯಕಾರಿ ಎಂದು ಸ್ಪಷ್ಟೀಕರಿಸಿದೆ.
ಆಲ್ಕೋಹಾಲ್ ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ವೈದ್ಯರು ಹಲವಾರು ಅಧ್ಯಯನಗಳಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಮೂತ್ರವಿಸರ್ಜನೆಯನ್ನು ಹೆಚ್ಚಿಸಲು ಬಿಯರ್ ಕೆಲಸ ಮಾಡುತ್ತದೆ ಹಾಗೂ ಸಣ್ಣ ಕಲ್ಲುಗಳನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಆದರೆ ಅದು 5 ಎಂ.ಎಂ ಗಿಂತ ದೊಡ್ಡದಾದ ಕಲ್ಲುಗಳನ್ನು ಹೊರತೆಗೆಯಲು ಸಾದ್ಯವಿಲ್ಲ. ಏಕೆಂದರೆ ಬೆಳವಣಿಗೆಯ ಪಥವು ಸುಮಾರು 3 ಮಿ.ಮೀ. ಇದ್ದಾಗ, ಮೂತ್ರಪಿಂಡಗಳಲ್ಲಿ ನೋವು ಅಥವಾ ಮೂತ್ರವಿಸರ್ಜನೆ ಮಾಡಲು ಸಾಧ್ಯವಾಗದಿದ್ದಾಗ ನೀವು ಬಿಯರ್ ಕುಡಿದರೆ, ಅದು ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ವರದಿಯಾಗಿದೆ. ಬಿಯರ್ ಹೆಚ್ಚು ಮೂತ್ರವನ್ನು ಉತ್ಪಾದಿಸುತ್ತದೆ. ಹೀಗಾಗಿ ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಅತಿಯಾದ ಸೇವನೆಯು ನಿರ್ಜಲೀಕರಣಕ್ಕೂ ಕಾರಣವಾಗಬಹುದು.
ಮೂತ್ರಪಿಂಡದ ಕಲ್ಲುಗಳು ಸಂಭವಿಸಲು ಕಾರಣವೇನು ಗೊತ್ತಾ?
ನಮಗೆಲ್ಲರಿಗೂ ತಿಳಿದಿರುವಂತೆ ಮೂತ್ರಪಿಂಡದ ಮೊದಲ ಕಾರ್ಯವೆಂದರೆ ರಕ್ತವನ್ನು ಶುದ್ಧೀಕರಿಸುವುದು. ಇದು ಮೂತ್ರದ ಮೂಲಕ ವಿಷ ಮತ್ತು ಅನಗತ್ಯ ಪೋಷಕಾಂಶಗಳನ್ನು ತೆಗೆದುಹಾಕುತ್ತದೆ. ಆದರೆ ರಕ್ತದಲ್ಲಿ ವಿಷಕಾರಿ ಅಂಶಗಳ ಪ್ರಮಾಣ ಹೆಚ್ಚಾದಂತೆ, ಅದನ್ನು ಸರಿಯಾಗಿ ಶುದ್ಧೀಕರಿಸಲು ಮೂತ್ರಪಿಂಡದಿಂದ ಸಾಧ್ಯವಿಲ್ಲ. ಸರಿಯಾಗಿ ಫಿಲ್ಟರ್ ಮಾಡದಿದ್ದಾಗ, ತ್ಯಾಜ್ಯವು ಘನ ರೂಪದಲ್ಲಿ ಸಂಗ್ರಹವಾಗುತ್ತದೆ. ಇದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೂತ್ರಪಿಂಡಗಳಲ್ಲಿನ ಕಲ್ಲುಗಳು ಆಮ್ಲೀಯ ಲವಣಗಳಿಂದ ಮಾಡಲ್ಪಟ್ಟಿದ್ದು, ಇದರ ಆರಂಭಿಕ ಲಕ್ಷಣವೆಂದರೆ ಕಿಬ್ಬೊಟ್ಟೆಯ ಒಂದು ಬದಿಯಲ್ಲಿ ಅಥವಾ ಬೆನ್ನಿನಲ್ಲಿ (ಬೆನ್ನು) ಹಠಾತ್ ನೋವು. ಮೂತ್ರಪಿಂಡದ ಕಲ್ಲುಗಳ ರಚನೆಯಿಂದಾಗಿ ಮೂತ್ರ ವಿಸರ್ಜಿಸುವಾಗ ನಿಮಗೆ ನೋವು ಅಥವಾ ಉರಿಯೂತ ಉಂಟಾದರೆ, ನೀವು ತಕ್ಷಣ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಬೇಕು.