ಪ್ರತಿದಿನ ಸೇವಿಸಿ ಒಂದೊಂದು ಕರಿಬೇವಿನ ಎಲೆ | ಬಳಿಕ ಪಡೆಯಿರಿ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!
ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ.
ಇಂತಹ ಉತ್ತಮವಾದ ಆಹಾರ ತಂದುಕೊಡುವಲ್ಲಿ ಕರಿಬೇವು ಉತ್ತಮ ಪಾತ್ರವನ್ನು ವಹಿಸುತ್ತದೆ. ಹೌದು. ಮನುಷ್ಯನ ಬುದ್ಧಿವಂತಿಕೆ, ನೆನೆಪುಶಕ್ತಿ ಹೆಚ್ಚಿಸುವಲ್ಲಿ ಕರಿಬೇವಿನ ಸೊಪ್ಪು ಮಹತ್ವ ಪಡೆದಿದೆ. ಹೆಚ್ಚು ಚುರುಕುತನ ಮತ್ತು ಒಳ್ಳೆಯ ನೆನಪಿನ ಶಕ್ತಿ ಬೇಕು ಎನ್ನುವವರು ಕರಿಬೇವಿನ ಸೊಪ್ಪಿನ ಚಹಾ ಮಾಡಿ ಕುಡಿಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಬಿಪಿ ಇರುವವರು ಮಾತ್ರ ವೈದ್ಯರ ಸಲಹೆ ಪಡೆದುಕೊಂಡೇ ಮುಂದುವರಿಯಬೇಕು.
ಭಾರತೀಯರ ಅಡುಗೆ ಮನೆಯಲ್ಲಿ ಯಾವಾಗಲು ಹಾಜರಿರುವ ಕರಿಬೇವಿನ ಸೊಪ್ಪು, ತ್ವಚೆಯಿಂದ ಹಿಡಿದು ಕೂದಲಿನವರೆಗೂ ರಕ್ಷಣೆ ನೀಡುವ ಕರಿಬೇವಿನ ಪೌಡರ್ ಅನ್ನು ಅನೇಕ ಮಂದಿ ಇಷ್ಟಪಡುತ್ತಾರೆ. ಕರಿಬೇವು ಸೌಂದರ್ಯ ಸೇರಿದಂತೆ ಆರೋಗ್ಯಕ್ಕೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.
ಹೌದು. ಕರಿಬೇವಿನ ಎಲೆಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿನ ಅನೇಕ ರೋಗಗಳನ್ನು ಗುಣಪಡಿಸಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕರಿಬೇವಿನ ಸೊಪ್ಪಿನಲ್ಲಿ ಔಷಧೀಯ ಗುಣಗಳೂ ಇವೆ. ಆಹಾರದ ಪರಿಮಳವನ್ನು ಹೆಚ್ಚಿಸುವ ಕರಿಬೇವಿನ ಎಲೆಗಳು ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ದೂರವಿಡಲು ಸಹಾಯ ಮಾಡುತ್ತದೆ.
ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಲು ಸಹಾಕಾರಿಯಾಗಿದೆ. ಇದರೊಂದಿಗೆ ಕರಿಬೇವಿನ ಸೊಪ್ಪನ್ನು ತಿನ್ನುವುದರಿಂದ ದೇಹದಲ್ಲಿ ರಕ್ತ ಸಂಚಾರವೂ ಉತ್ತಮಗೊಳ್ಳುತ್ತದೆ. ಅಲ್ಲದೇ ನಿಮ್ಮ ಹೃದ್ರೋಗದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ ಮತ್ತು ನಿಮ್ಮ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ
ಕರಿಬೇವಿನ ಎಲೆಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಕರಿಬೇವಿನ ಎಲೆಗಳಲ್ಲಿರುವ ಆಯಂಟಿ ಆಕ್ಸಿಡೆಂಟ್, ಗ್ಯಾಲಿಕ್ ಆಸಿಡ್ ಮತ್ತು ಆಯಂಟಿ ಕಾರ್ಸಿನೋಜೆನಿಕ್ ಗುಣಗಳಿದ್ದು, ಇವು ದೇಹದಲ್ಲಿರುವ ಕ್ಯಾನ್ಸರ್ ಕೋಶಗಳನ್ನು ಸುಲಭವಾಗಿ ನಾಶಪಡಿಸುತ್ತದೆ. ಇದರಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳನ್ನು ತಡೆಯಬಹುದು.
ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಮಧುಮೇಹ ಆರೋಗ್ಯದ ಸಮಸ್ಯೆಯನ್ನು ನಿವಾರಿಸಬಹುದು. ಕರಿಬೇವಿನ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರ ಜೊತೆಗೆ ಕರಿಬೇವಿನ ಎಲೆಗಳು ಮೂತ್ರಪಿಂಡದ ಹಾನಿಯನ್ನು ತಡೆಯುತ್ತದೆ.
ಕರಿಬೇವಿನ ಎಲೆಗಳಲ್ಲಿರುವ ಉರಿಯೂತ ನಿವಾರಕ ಅಂಶಗಳು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ದೇಹದಲ್ಲಿನ ಉರಿಯೂತವನ್ನು ನಿವಾರಿಸಲು ನೀವು ಪ್ರತಿದಿನ ಕರಿಬೇವಿನ ಎಲೆಗಳನ್ನು ತಿನ್ನಬಹುದು. ಹಾಗಿದ್ರೆ ಇನ್ಯಾಕೆ ಯೋಚಿಸುತ್ತಿದ್ದೀರಾ.. ದಿನಾಲೂ ಕರಿ ಬೇವು ಸೇರಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ..