ಸೊಸೆ ಮಾಡಿದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದ ಅತ್ತೆ! ಸಿಟ್ಟಿಗೆದ್ದು ಚಾಕುವಿನಿಂದ ತಾಯಿಯನ್ನೇ ಇರಿದ ಪಾಪಿ ಮಗ!!

ಮದುವೆಯಾದ ಬಳಿಕ ಹೆಂಡತಿಯು ಗಂಡನ ಮನೆಗೆ ಹೋಗಿ, ಹೊಸ ಸಂಸಾರಕ್ಕೆ ಒಗ್ಗಿಕೊಂಡು ಬದುಕಬೇಕಾಗುವುದು ಅನಿವಾರ್ಯ. ಕೆಲವೊಮ್ಮೆ ಮನೆಗೆ ಬಂದ ಸೊಸೆಗೆ ತಂದೆ ತಾಯಿಯಂತೆ ಪ್ರೀತಿ ತೋರುವ ಅತ್ತೆ ಮಾವಂದಿರು ದೊರೆತರೆ, ಇನ್ನು ಕೆಲವೊಮ್ಮೆ ಇವರ ನಡುವೆ ಹೊಂದಾಣಿಕೆ ಬರದೇ ಸದಾ ಜಗಳವಾಡುವಂತವರೂ ಸಿಗತ್ತಾರೆ. ಇವೆಲ್ಲವೂ ಸರ್ವೇ ಸಾಮಾನ್ಯ. ಜಗಳವಾಡದೇ ಇರುವ ಅತ್ತೆ-ಮಾವಂದಿರು ಸಿಗುವುದು ಬಹಳ ಅಪರೂಪ.

 

ಅದರಲ್ಲಿಯೂ ಗಂಡ ಆದವನು ಒಂದು ಕಡೆ ಹೆಂಡತಿ ಮತ್ತೊಂದು ಕಡೆ ತಾಯಿ ಇಬ್ಬರನ್ನು ಸಮಾಧಾನಗೊಳಿಸಲು ಪ್ರಯತ್ನಿಸುತ್ತಲೇ ಇರುತ್ತಾನೆ. ತಾಯಿಯೊಂದಿಗೆ ಮಾತನಾಡಿದರೆ ಹೆಂಡತಿಗೆ ಕೋಪ, ಹೆಂಡತಿಯೊಂದಿಗೆ ಮಾತನಾಡಿದರೆ ತಾಯಿ ಕೋಪಗೊಳ್ಳುತ್ತಾಳೆ. ಇಬ್ಬರನ್ನೂ ನಿಭಾಯಿಸಲು ಸಾಧ್ಯವಾಗದ ಪುರುಷರ ಪಾಡು ಕೇಳ ತೀರದ್ದು. ಆದರೆ ಕೆಲವರು ಮಾತ್ರ ಹೆಂಡತಿಯ ಮಾತು ಕೇಳಿ ತಾಯಿಗೆ ಹಲವು ರೀತಿಯಲ್ಲಿ ತೊಂದರೆ ನೀಡುತ್ತಾರೆ. ಹೆಚ್ಚಿನ ಗಂಡಂದಿರು ಹೆಂಡತಿಯ ಮಾತು ಕೇಳಿ ತಾಯಿಯನ್ನೇ ದೂರುತ್ತಾರೆ. ಇದೀಗ ಇಂತಹದೇ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಹೆಂಡತಿಯ ಪರವಹಿಸಿ ವ್ಯಕ್ತಿಯೋರ್ವ ತನ್ನ ಹೆತ್ತ ತಾಯಿ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಅದೂ ಕೂಡ ಯಾವ ಕಾರಣಕ್ಕೆ ಗೊತ್ತಾ?

ಹೌದು, ಹೆಂಡತಿ ಮಾತು ಕೇಳಿಕೊಂಡು ವ್ಯಕ್ತಿಯೋರ್ವ ಜನ್ಮ ಕೊಟ್ಟ ತಾಯಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಸೊಸೆ ಮಾಡಿದ್ದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದಿದ್ದಕ್ಕೆ ತಾಯಿ ಮೇಲೆ ಮಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಮಹಿಳೆಯ ತಲೆಗೆ ತೀವ್ರ ಪೆಟ್ಟಾಗಿದೆ. ತೆಲಂಗಾಣದ ಮಹಬೂಬಾದ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಹಲ್ಲೆಗೊಳಗಾದ ಮಹಿಳೆ ಪುತ್ರರತ್ನಂ ಎಂದು ಗುರುತಿಸಲಾಗಿದೆ.

ಸೊಸೆ ನಂದಿನಿ ಮಾಡಿದ್ದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದು ಆಕೆಯ ಅತ್ತೆ ಹೇಳಿದ್ದು, ನಂದಿನಿಗೆ ಛೀಮಾರಿ ಹಾಕಿದ್ದಾರೆ. ಇದರಿಂದ ಮನನೊಂದು ಕಣ್ಣೀರು ಹಾಕಿದ ಸೊಸೆ, ಸಂಜೆ ಮನೆಗೆ ಬಂದ ಪತಿ ಮಹೇಂದರ್ ಬಳಿ ನಡೆದ ಘಟನೆಯನ್ನು ಹೇಳಿದ್ದಾಳೆ. ನಂತರ ಕೋಪಗೊಂಡ ಮಗ ನನ್ನ ಹೆಂಡತಿ ಮಾಡಿದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದು ಹೇಳುತ್ತೀಯಾ ಎಂದು ತನ್ನ ತಾಯಿಯ ಮೇಲೆ ರೋಷಗೊಂಡು ಮನೆಯಲ್ಲಿದ್ದ ಮಟನ್ ಚಾಕುವಿನಿಂದ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ಮಹೇಂದರ್ ತಾಯಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಮಹಿಳೆಯ ತಲೆಗೆ ಗಂಭೀರವಾಗಿ ಗಾಯವಾಗಿದೆ.

ನಂತರ ಸ್ಥಳೀಯರು ಆಕೆಯನ್ನು ಮಹಬೂಬಾಬಾದ್ ಏರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಮಹಿಳೆಯ ಸಂಬಂಧಿಕರು ಮಹೇಂದರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಮಹಬೂಬಾಬಾದ್ ಜಿಲ್ಲೆಯ ವೆನ್ನೂರು ಗ್ರಾಮದಲ್ಲಿ ಮಹೇಂದರ್ ಮತ್ತು ನಂದಿನಿ ಎಂಬ ದಂಪತಿ ವಾಸವಾಗಿದ್ದಾರೆ. ಅವರೊಂದಿಗೆ ಮಹೇಂದರ್ ತಾಯಿ ಕೂಡ ಇರುತ್ತಾರೆ. ನಂದಿನಿ ಮತ್ತು ಆಕೆಯ ಅತ್ತೆಯ ನಡುವೆ ಆಗಾಗ ಸಣ್ಣಪುಟ್ಟ ಜಗಳವಾಗುತ್ತಿತ್ತು. ಹೀಗೆ ಅತ್ತೆ ಮತ್ತು ಸೊಸೆಯ ನಡುವಿನ ಸಣ್ಣ ಜಗಳ ಕೊನೆಗೆ ಒಂದು ಪ್ರಾಣವನ್ನೇ ತೆಗೆಯುವ ಹಂತಕ್ಕೆ ತಲುಪಿದೆ.

Leave A Reply

Your email address will not be published.