Viral Video : ನೂಡಲ್ಸ್ ಪ್ರಿಯರೇ, ನಿಮಗೆ ನೂಡಲ್ಸ್ ಹೇಗೆ ತಯಾರಾಗುತ್ತೆ ಗೊತ್ತಾ? ನೀವು ಈ ವಿಡಿಯೋ ನೋಡಿದ್ರೆ ಜನ್ಮದಲ್ಲೇ ತಿನ್ನಲ್ಲ!!

ಇತ್ತೀಚಿನ ದಿನಗಳಲ್ಲಿ ಫಟಾ ಫಟ್ ಅಂತ ರೆಡಿಯಾಗುವ ಆಹಾರಗಳೇ ಜನರಿಗೆ ಪ್ರಿಯವಾಗಿದೆ. ಹೊಟ್ಟೆ ತುಂಬುತ್ತದೋ ಇಲ್ವೋ ಗೊತ್ತಿಲ್ಲ ಆದ್ರೆ ನಾಲಿಗೆಗೆ ರುಚಿಕರ ಅನಿಸ್ಬೇಕು ಅಷ್ಟೇ!!. ಇಂದಿನ ಜನರಿಗೆ ಕಷ್ಟ ಪಡೋದು ಅಂದ್ರೆ ಅಲರ್ಜಿ. ಎಲ್ಲವೂ ಸುಲಭವಾಗಿ ಸಿಗಬೇಕು ಅನ್ನೋದೇ ಅವರ ಬಯಕೆ. ಹಾಗಾಗಿ ಸುಲಭವಾಗಿ ಸಿಗುವ ಪಾಸ್ಟ್ ಫುಡ್ ಅನ್ನೇ ಬಯಸುತ್ತಾರೆ. ಅದರಲ್ಲೂ ಎರಡೇ ನಿಮಿಷದಲ್ಲಿ ರೆಡಿಯಾಗುತ್ತೇ ಅನ್ನೋ ನೂಡಲ್ಸ್, ಮ್ಯಾಗಿ ಎಲ್ಲರಿಗೂ ಹೆಚ್ಚು ಪ್ರಿಯಕರ. ಆದ್ರೆ ಈ ನೂಡಲ್ಸ್ ಹೇಗೆ ತಯಾರು ಮಾಡ್ತಾರೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ? ಇಲ್ಲಾ ಅಲ್ವಾ!! ಸದ್ಯ ವೈರಲ್ ಆಗ್ತಿರೋ ವಿಡಿಯೋದಲ್ಲಿ ನೂಡಲ್ಸ್ ಹೇಗೆ ತಯಾರು ಮಾಡ್ತಾರೆ ಅಂತ ತೋರಿಸಿದ್ದಾರೆ. ಇನ್ನು ನೂಡಲ್ಸ್ , ಮ್ಯಾಗಿ ಪ್ರಿಯರಂತು ಈ ವಿಡಿಯೋ ನೋಡಿದ್ರೆ ಜನ್ಮದಲ್ಲಿ ಇದನ್ನು ತಿನ್ನೋದಿಲ್ಲ ಅನಿಸುತ್ತೆ. ಹಾಗಾದ್ರೆ, ಹೇಗೆ ತಯಾರು ಮಾಡುತ್ತಾರೆ ಅಂತ ನೋಡ್ಲೇಬೇಕು ಅಲ್ವಾ!!

ಪಿಎಫ್‌ಸಿ ಕ್ಲಬ್ ಸಂಸ್ಥಾಪಕ ಚಿರಾಗ್ ಬರ್ಜತ್ಯಾ ಅವರು ನೂಡಲ್ಸ್ ತಯಾರಿಸುವ ವಿಡಿಯೋವನ್ನು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೂಡಲ್ಸ್ ಅನ್ನು ತುಂಬಾ ಕೊಳಕು ಪರಿಸ್ಥಿತಿಗಳಲ್ಲಿ ತಯಾರಿಸಲಾಗುತ್ತದೆ ಎಂದು ನೋಡಬಹುದು. ಕಾರ್ಮಿಕರು ನೂಡಲ್ಸ್ ಅನ್ನು ಸಣ್ಣ ಫ್ಯಾಕ್ಟರಿಯಲ್ಲಿ ತಯಾರಿಸುತ್ತಿದ್ದಾರೆ. ಹೇಗೆ ತಯಾರಿಸುತ್ತಿದ್ದಾರೆ ಅಂದ್ರೆ ನೀವು ಅದನ್ನ ನೋಡಿದ್ರೆ ನೂಡಲ್ಸ್ ಹತ್ತಿರನೂ ಸುಳಿಲಿಕ್ಕಿಲ್ಲ.

ವಿಡಿಯೋದಲ್ಲಿ, ಕೆಲಸಗಾರರು ಹಿಟ್ಟನ್ನು ಬೆರೆಸಲು ಮಿಕ್ಸರ್‌ಗೆ ಹಾಕ್ತಾರೆ. ನಂತರ, ರೋಲಿಂಗ್ ಯಂತ್ರದ ಮೂಲಕ ತೆಳುವಾದ ಎಳೆಗಳನ್ನು ಕತ್ತರಿಸಲಾಗುತ್ತದೆ. ಈ ವೇಳೆ ಯಾವುದೇ ಕಾರ್ಮಿಕರು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ ಅಥವಾ ಕೈಯಲ್ಲಿ ಕೈಗವಸುಗಳನ್ನು ಧರಿಸುವುದಿಲ್ಲ. ಬಳಿಕ ನೂಡಲ್ಸ್ ಅನ್ನು ತುಕ್ಕು ಹಿಡಿದ ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಲಾಗುತ್ತೆ. ಹಾಗಾದ್ರೆ ಕಬ್ಬಿಣದ ಅಂಶ ಎಲ್ಲಾ ತಿನ್ನುವವರ ಹೊಟ್ಟೆಯಲ್ಲಿರಬಹುದು ಅಲ್ವಾ!!. ಅದು ಕೂಡ ಸ್ವಲ್ಪವೂ ಶುಭ್ರವಾಗಿಲ್ಲದ ಕೊಳಕು ಪೆಟ್ಟಿಗೆ. ಇನ್ನೂ, ನೂಡಲ್ಸ್ ಅನ್ನು ಕುದಿಸಿದ ನಂತರ ನೆಲದ ಮೇಲೆ ರಪ್ ರಪ್ ಅಂತ ಎಸೆಯೋದೆ. ಗಲೀಜು ನೆಲದಲ್ಲಿ, ಸ್ವಲ್ಪವೂ ಸ್ವಚ್ಛತೆ ಇರದ ನೆಲದಲ್ಲಿ ನೂಡಲ್ಸ್ ಗಳನ್ನು ಎರ್ರಾಬಿರ್ರಿ ಎಸೆದು ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಲಾಗುತ್ತೆ.

ಸದ್ಯ ಈ ವಿಡಿಯೋ ವೈರಲ್ ಆದ ನಂತರ ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿದೆ. ಈ ಕಾರ್ಖಾನೆ ನಡೆಯುತ್ತಿದ್ದರೆ ಅದನ್ನು ಕೂಡಲೆ ಮುಚ್ಚಬೇಕು ಎಂದು ಒಬ್ಬರು ಕಾಮೆಂಟ್‌ ಮಾಡಿದರೆ, ಇನ್ನೊಬ್ಬರು, ನೀವು ಉತ್ಪನ್ನವನ್ನು ತೆಗೆದುಕೊಂಡರೆ ಮತ್ತು ಅದು ಯಾವುದೇ ದೊಡ್ಡ ಬ್ರಾಂಡ್‌ನಲ್ಲದಿದ್ದರೆ, ಅದನ್ನು ತಯಾರಿಸುವ ವಿಧಾನ ಹೀಗೇ ಇರುತ್ತದೆ. ಸ್ಯಾಂಡ್‌ವಿಚ್, ಸೇವ್ ಪುರಿ ಮತ್ತು ಪಾನಿ ಪುರಿ ಮಾಡುವ ರೀತಿ ಕೂಡ ಇಂತದ್ದೇ ಎಂದಿದ್ದಾರೆ. ಅಲ್ಲದೆ, ರಸ್ತೆಬದಿಯಲ್ಲಿರುವ ಸ್ಯಾಂಡ್‌ವಿಚ್ ಬೆಣ್ಣೆಯನ್ನು ಹೇಗೆ ತಯಾರಿಸ್ತಾರೆ ಅಂತ ನೋಡಿದ್ದೀರಾ? ಎಂದು ಕಾಮೆಂಟ್‌ ಮಾಡಿದ್ದಾರೆ.

ಒಟ್ಟಾರೆ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನೂಡಲ್ಸ್ ಪ್ರಿಯರಂತು ಎರಡು ನಿಮಿಷ ಯಾಕೆ ಒಂದು ಗಂಟೆಯಾದ್ರೂ ಪರವಾಗಿಲ್ಲ ಉತ್ತಮ ಆಹಾರವೇ ಬೇಕು ಅಂತಾ ಹೇಳ್ಬೋದು. ಅದಕ್ಕೆ ಮನೆಯಲ್ಲಿ ಮಾಡಿದ ಆಹಾರಗಳೇ ಯಾವತ್ತಿಗೂ ಒಳ್ಳೆಯದು. ನಾಲಿಗೆಗೆ ಕಹಿಯಾದರೂ ದೇಹಕ್ಕೆ ಸಿಹಿಯಾಗಿರುತ್ತದೆ. ಹೊರಗಿನ ಆಹಾರದಷ್ಟು ರುಚಿ ಇಲ್ಲದಿದ್ದರೂ ಸ್ವಚ್ಛತೆಯಿಂದ ಕೂಡಿದ ಉತ್ತಮ ಆಹಾರವದು.

Leave A Reply

Your email address will not be published.