1337 ವರ್ಷಗಳ ಬಳಿಕ, ಭೂಮಿಯ ಸಮೀಪ ಬರಲಿದ್ದಾನೆ ಚಂದ್ರ! ಆದರೆ ಸೂಪರ್ ಮೂನ್ ನೋಡಲು ಕಾದವರಿಗೆ ಸಿಗುವುದು ನಿರಾಶೆ ಮಾತ್ರ! ಕಾರಣವೇನು ಗೊತ್ತಾ?

ಈ ಜಗತ್ತೇ ಒಂದು ಕೌತುಕ. ಇದರಲ್ಲಿ ಅಡಗಿರುವ ಪ್ರತಿಯೊಂದೂ ವಿಷಯವೂ ಎಂತವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ. ಅದರಲ್ಲೂ ಕೂಡ ಸೌರಮಂಡಲದಲ್ಲಾಗುವ ಬದಲಾಲಣೆಗಳು, ಅಲ್ಲಿ ನಡೆಯುವ ವಿಸ್ಮಯಗಳು ನಮ್ಮನ್ನು ನಿಬ್ಬೆರಗಾಗಿಸುತ್ತವೆ. ವರ್ಷಂಪ್ರತಿ ಏನಾದರೂ ಭಯಾನಕ ವಿಸ್ಮಯವನ್ನು ಖಗೋಳವು ಹೊತ್ತು ತರುತ್ತದೆ. ಇದೀಗ ಇಂತದೇ ಒಂದು ವಿಸ್ಮಯ ಘಟನೆ ನಮ್ಮ ಸೌರಮಂಡಲದಲ್ಲಿಂದು ನಡೆಯಲಿದೆ.

ಹೌದು, ಶನಿವಾರ ಅಂದರೆ ಇಂದು ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರನು ನಮ್ಮ ಗ್ರಹಕ್ಕೆ ಅತಿ ಸಮೀಪದಲ್ಲಿರಲಿದ್ದಾನೆ. ಎಷ್ಟು ಸಮೀಪ ಎಂದರೆ ಕಳೆದ ಬರೋಬ್ಬರಿ 1,337 ವರ್ಷಗಳಲ್ಲಿ ಆತ ಎಂದೂ ಇಷ್ಟು ಹತ್ತಿರ ಬಂದಿರಲಿಲ್ಲ. ಈ ದಿನ ಮತ್ತೆ ಆ ಘಟನೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಹಾಗಂತ ನಾವು ಈ ದೊಡ್ಡ ಚಂದ್ರನನ್ನು ನೋಡಬಹುದು ಎಂದು ತುಂಬಾ ಆಸೆ ಇಟ್ಟುಕೊಳ್ಳಬೇಡಿ. ಇಂತಹ ಸೂಪರ್ ಮೂನ್ ಅನ್ನು ನಮಗೆ ನೋಡಲು ಆಗುವದಿಲ್ಲ ಎಂಬ ಬೇಸರವೂ ಇದೆ ಎಂಬುದನ್ನು ಮರೆಯಬೇಡಿ.

ನಿಜ, ಸೂಪರ್ ಮೂನ್ ಆಗಿರಬಹುದಾದ ಚಂದ್ರನನ್ನು ನೋಡುವ ಭಾಗ್ಯ ಖಗೋಳ ಕುತೂಹಲಿಗಳಿಗೆ ಇಂದು ದಕ್ಕುವುದಿಲ್ಲ. ಕಾರಣವೇನಂದ್ರೆ, ಇಂದು ಅಮವಾಸ್ಯೆ! ಭೂಮಿಯ ಉಪಗ್ರಹವಾದ ಚಂದ್ರ ಇಂದು ನಮಗೆ ಬಹಳ ಹತ್ತಿರದಲ್ಲಿರಲಿರುತ್ತಾನೆ. ಆದರೆ, ಇಂದು ಅಮವಾಸ್ಯೆ. ಆದ್ದರಿಂದ ಬಾಹ್ಯಾಕಾಶದಲ್ಲಿ ನಡೆವ ಈ ವಿಸ್ಮಯ ಘಟನೆಯ ಸಮಯದಲ್ಲಿ ಚಂದ್ರನು ನಮಗೆ ಸಂಪೂರ್ಣವಾಗಿ ಅಗೋಚರವಾಗಿರುತ್ತಾನೆ.

ಚಂದ್ರ ಮತ್ತು ಭೂಮಿಯ ಈ ವಿಸ್ಮಯವು 1030ರಲ್ಲಿ ಹಿಂದೆ ಸಂಭವಿಸಿತ್ತು. ಬಿಟ್ಟರೆ ಇಂದು, ಈ ವಾರಾಂತ್ಯವಾದ ಇಂದು ಮತ್ತು ಮುಂದೆ 2368ರಲ್ಲಿ ಸಂಭವಿಸಲಿದೆಯಂತೆ. ಈ ವಾರಾಂತ್ಯದ ಅಮಾವಾಸ್ಯೆಯ ವಿಶಿಷ್ಟತೆಯನ್ನು ಫೋರ್ಬ್ಸ್ ಪ್ರಕಾರ, Timeanddate.com ನಲ್ಲಿ ಖಗೋಳ ಭೌತಶಾಸ್ತ್ರಜ್ಞ ಮತ್ತು ವಿಜ್ಞಾನ ಸಂವಹನಕಾರ ಗ್ರಹಾಂ ಜೋನ್ಸ್ ಗಮನಿಸಿದ್ದಾರೆ. ಶ್ರೀ ಜೋನ್ಸ್ 2,000 ವರ್ಷಗಳ ಅವಧಿಯಲ್ಲಿ ಅಮಾವಾಸ್ಯೆಯಲ್ಲಿ ಭೂಮಿಯ-ಚಂದ್ರನ ಹತ್ತಿರದ ಅಂತರವನ್ನು ನೋಡಿದರು. ಅವರು ಮೂರು ಅಮವಾಸ್ಯೆಗಳನ್ನು ಕಂಡುಹಿಡಿದರು- ಅಲ್ಲಿ ಭೂಮಿಯಿಂದ ಚಂದ್ರನ ದೂರವು 356,570 ಕಿಮೀಗಿಂತ ಕಡಿಮೆಯಿದೆ ಎಂಬುದನ್ನು ಕಂಡುಕೊಂಡರು.

ಇನ್ನೂ ಮುಖ್ಯವಾದ ವಿಚಾರವೆಂದರೆ ಈ ರೀತಿ ಚಂದ್ರನು ಇನ್ನು ಮುಂದಿನ 345 ವರ್ಷಗಳವರೆಗೆ ಮತ್ತೆ ಹತ್ತಿರವಾಗುವುದಿಲ್ಲ. ಚಂದ್ರನನ್ನು ಕ್ರಿ.ಶ. 992ರಿಂದ ಇಲ್ಲಿಯವರೆಗೆ ಗಮನಿಸಿದರೆ ಇಷ್ಟು ವರ್ಷಗಳಲ್ಲಿನ ಅಮಾವಾಸ್ಯೆಗಳಿಗಿಂತ ಈ ದಿನದ ಅಮವಾಸ್ಯೆಯಲ್ಲಿ ಭೂಮಿಗೆ ಅತಿ ಹತ್ತಿರದಲ್ಲಿದ್ದಾನೆ. ಮತ್ತು ಕೇವಲ ಒಂದು ದಿನದ ನಂತರ, ಬರಿಗಣ್ಣಿಗೆ ಗೋಚರಿಸುವ ಚಂದ್ರನ ಹತ್ತಿರ ಶುಕ್ರ ಮತ್ತು ಶನಿಯ ಸಂಯೋಗ ಇರುತ್ತದೆ.

ಹೆಚ್ಚುವರಿಯಾಗಿ, ಅಮಾವಾಸ್ಯೆಯ ನಂತರದ ದಿನ, ಶುಕ್ರ ಮತ್ತು ಶನಿ ಸಂಯೋಗದಲ್ಲಿ ಇರುತ್ತದೆ. ಕೆಲವು ದೂರದರ್ಶಕಗಳು ಮತ್ತು ಹೆಚ್ಚಿನ ದುರ್ಬೀನುಗಳಲ್ಲಿ, ಎರಡೂ ಗ್ರಹಗಳು ಒಂದೇ ದೃಷ್ಟಿಕೋನದಲ್ಲಿ ಹೊಂದಿಕೊಳ್ಳುತ್ತವೆ. ಈ ಜೋಡಿಯು ಬರಿಗಣ್ಣಿಗೆ ಅಥವಾ ಜೋಡಿ ಬೈನಾಕ್ಯುಲರ್‌ಗಳ ಮೂಲಕ ಗೋಚರಿಸುತ್ತದೆ.

Leave A Reply

Your email address will not be published.