ಮೂರು ಮಕ್ಕಳಿರುವ ಮಹಿಳೆಯರಿಗೆ ಗುಡ್‌ನ್ಯೂಸ್ | 3 ಲಕ್ಷ ಹಣದ ಜೊತೆಗೆ ಹೆಚ್ಚಿನ ಸಂಬಳ
ಭಾರತದಲ್ಲಿ ಈಗಾಗಲೇ ಜನಸಂಖ್ಯೆ ಹೆಚ್ಚಳ ಕಾರಣದಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆದರೆ ಭಾರತದ ಒಂದು ರಾಜ್ಯದ ಮುಖ್ಯಮಂತ್ರಿ ಸಾಧ್ಯವಾದಷ್ಟು ಮಕ್ಕಳಿಗೆ ಜನ್ಮ ನೀಡುವಂತೆ ನಾಗರಿಕರನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಪ್ರಸ್ತುತ ಜನಸಂಖ್ಯೆ ನಿಯಂತ್ರಣ ನಿಯಮ ಅನುಸಾರ ಕಾನೂನಿನ ಪ್ರಕಾರ ಒಬ್ಬ ದಂಪತಿಗೆ 2 ಮಕ್ಕಳು ಮಾತ್ರ ಇರಬೇಕು ಎಂದು ನಿಯಮವಿದೆ. ಆದರೆ ಒಂದೊಂದು ದೇಶಗಳಲ್ಲಿ ಒಂದೊಂದು ನೀತಿ ನಿಯಮಗಳು ಇರುತ್ತದೆ. ಆದರೆ, ಭಾರತದ ಒಂದು ರಾಜ್ಯದ ಮುಖ್ಯಮಂತ್ರಿ ಸಾಧ್ಯವಾದಷ್ಟು ಮಕ್ಕಳಿಗೆ ಜನ್ಮ ನೀಡುವಂತೆ ನಾಗರಿಕರನ್ನು ಪ್ರೋತ್ಸಾಹಿಸುತ್ತಿದ್ದಾರೆ. 3 ಮಕ್ಕಳಿಗೆ ಜನ್ಮ ನೀಡಿದವರಿಗೆ ಬಹುಮಾನ ವಿತರಿಸಿದ್ದಾರೆ. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಈ ಘೋಷಣೆ ಮಾಡಿದ್ದಾರೆ.
ಸಾಧ್ಯವಾದಷ್ಟು ಮಕ್ಕಳನ್ನು ಹೊಂದಲು ಸರ್ಕಾರವು ನಾಗರಿಕರನ್ನು ಪ್ರೋತ್ಸಾಹಿಸುತ್ತಿರುವ ಭಾರತದ ಮೊದಲ ರಾಜ್ಯ ಸಿಕ್ಕಿಂ ಆಗಿದೆ. ಜನಿಸುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಈಗಾಗಲೇ ಮಹಿಳೆಯರಿಗೆ 365 ದಿನಗಳ ಹೆರಿಗೆ ರಜೆ ಮತ್ತು ಪುರುಷ ಉದ್ಯೋಗಿಗಳಿಗೆ 30 ದಿನಗಳ ರಜೆಯನ್ನು ಒದಗಿಸುತ್ತದೆ.
ದಕ್ಷಿಣ ಸಿಕ್ಕಿಂನ ಜೋರೆಥಾನ್ಹ್ ಪಟ್ಟಣದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ತಮಾಂಗ್ ಅವರು ಕಾರ್ಯಕ್ರಮದಲ್ಲಿ ಘೋಷಿಸಿದ್ದು, ”ಮಹಿಳಾ ಉದ್ಯೋಗಿಗಳಿಗೆ ಎರಡನೇ ಮಗುವಿಗೆ ಜನ್ಮ ನೀಡುವುದಕ್ಕಾಗಿ ಒಂದು ವೇತನ ಹೆಚ್ಚಳ ಹಾಗೂ ಮೂರನೇ ಮಗುವಿಗೆ ಜನ್ಮ ನೀಡುವುದಕ್ಕಾಗಿ ಎರಡು ವೇತನ ಹೆಚ್ಚಳಕ್ಕೆ ರಾಜ್ಯ ಸರಕಾರ ಮುಂದಾಗಿದೆ ಎಂದು ಮಾಹಿತಿ ನೀಡಿದರು .
ತಮಾಂಗ್, “ಸರ್ಕಾರವು ಸಿಕ್ಕಿಂನ ಆಸ್ಪತ್ರೆಗಳಲ್ಲಿ ಐವಿಎಫ್ ಸೌಲಭ್ಯವನ್ನು ಪ್ರಾರಂಭಿಸಿದೆ. ನೈಸರ್ಗಿಕವಾಗಿ ಗರ್ಭಧರಿಸಲು ತೊಂದರೆ ಇರುವ ಮಹಿಳೆಯರು ಈ ಪ್ರಕ್ರಿಯೆಯ ಮೂಲಕ ಮಕ್ಕಳಿಗೆ ಜನ್ಮ ನೀಡಬಹುದು. ಈ ರೀತಿ ಹೆರಿಗೆಯಾಗುವ ಮಹಿಳೆಯರಿಗೆ 3 ಲಕ್ಷ ರೂ. ಸಹಾಯಧನ ನೀಡಲಾಗುವುದು” ಎಂದು ತಿಳಿಸಿದರು .
ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಪ್ರಕಾರ ಮಹಿಳೆಯರು ಸೇರಿದಂತೆ ಸ್ಥಳೀಯ ಜನರು ಸಾಧ್ಯವಾದಷ್ಟು ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ಉತ್ತೇಜಿಸುವ ಮೂಲಕ ಫಲವತ್ತತೆಯ ಪ್ರಮಾಣ ಕುಸಿಯುತ್ತಿರುವುದನ್ನು ತಡೆಯುವ ಅಗತ್ಯವಿದೆ. ನಮ್ಮ ಸರ್ಕಾರವು ದೊಡ್ಡ ಕುಟುಂಬವನ್ನು ಹೊಂದಲು ಸ್ಥಳೀಯ ಜನರನ್ನು ಪ್ರೋತ್ಸಾಹಿಸುತ್ತಿದೆ. ಪ್ರಸ್ತುತ, ಸಿಕ್ಕಿಂನ ಜನಸಂಖ್ಯೆಯು ಸರಿಸುಮಾರು ಏಳು ಲಕ್ಷಕ್ಕಿಂತ ಕಡಿಮೆಯಿದೆ. ಅವರಲ್ಲಿ ಸುಮಾರು 80 ಪ್ರತಿಶತ ಸ್ಥಳೀಯರು ಇದ್ದಾರೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಪ್ರತಿ ಮಹಿಳೆಗೆ ಒಂದು ಮಗು ಸ್ಥಳೀಯ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿದೆ ಆದ್ದರಿಂದ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.