ಅಬ್ಬಾ ! ದೈತ್ಯ ಮೊಸಳೆಯನ್ನು ಬೈಕ್ ಗೇರಿಸಿ, ಯುವಕನ ರೈಡ್ | ಭಯ ಬೀಳಿಸುವ ಈ ವೀಡಿಯೋ ನೀವು ನೋಡಲೇ ಬೇಕು!

ಪ್ರಾಣಿಗಳೆಂದರೆ ಸಾಕು!!! ಮಾರು ದೂರ ನಿಂತು ನೋಡುವವರೆ ಜಾಸ್ತಿ. ಅದರಲ್ಲಿಯು ಹಾವು, ಮೊಸಳೆ ಕಂಡರೆ ಸಾಕು !! ಜೀವ ಉಳಿದರೆ ಸಾಕಪ್ಪಾ ಎಂದು ಅಲ್ಲಿಂದ ಜೂಟ್ ಹೇಳೋರೆ ಹೆಚ್ಚು ಮಂದಿ. ಹೀಗಿದ್ದ ಮೇಲೆ ನಿಮ್ಮ ಸಂಗಾತಿಯ ಜೊತೆಗೆ ರೈಡ್ ಹೋಗೋ ಹಾಗೆ ಮೊಸಳೆಯ ಜೊತೆ ಒಂದು ಜಾಲಿ ರೈಡ್ ಹೋದರೆ ಹೇಗಿರಬಹುದು??? ಅಯ್ಯೋ!! ರೈಡ್ ಕೂಡ ಬೇಡ…ಯಾವ ಟ್ರಿಪ್ ಕೂಡ ಬೇಡ ಬಡಪಾಯಿ ಜೀವ ಉಳಿದರೆ ಸಾಕು ಎಂದು ನಿಮಗೆ ಅನಿಸದೆ ಇರದು. ಆದ್ರೆ, ಇಲ್ಲೊಬ್ಬ ಮಹಾಶಯ ಭಯವನ್ನು ದಾಟಿ ಮೊಸಳೆಯೊಂದನ್ನು ಸಲೀಸಾಗಿ ಬೈಕ್ ಮೇಲೆ ಮಲಗಿಸಿಕೊಂಡು ಆ ನಂತರ ಅದರ ಮೇಲೆ ಕುಳಿತು ಬೈಕ್ ಓಡಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ.

 

ಕೆಲವೊಮ್ಮೆ ಸಾಹಸ ಮಾಡುವ ಮನಸ್ಸಿದ್ದರೂ ಕೂಡ ಇಲ್ಲದ ಅಪಾಯಗಳಿಗೆ ಆಹ್ವಾನ ಮಾಡಿಕೊಡುವುದಾದರು ಏಕೆ ಎಂದುಕೊಂಡು ಹೆಚ್ಚಿನವರು ಮನೆಯಲ್ಲಿ ಕುಳಿತು ಮೊಬೈಲ್ ಇಲ್ಲವೇ ಟಿವಿ ಪರದೆ ಮೂಲಕ ಅತೀ ಅಪಾಯಕಾರಿ ವೀಡಿಯೋ ನೋಡಿ ಬೆದರುವ ಪ್ರಮೇಯ ಕೂಡ ಇದೆ. ಭೂಮಿಯ ಮೇಲೆ ಇರುವ ಕೆಲ ಜೀವಿಗಳನ್ನು ನೋಡಿದ ಕೂಡಲೇ ಅವುಗಳಿಂದ ತಪ್ಪಿಸಿಕೊಳ್ಳಲು ಮಾರು ದೂರ ಹೋಗಲು ಬಯಸುತ್ತಾರೆ. ಸಿಂಹ, ಚಿರತೆ, ಆನೆ, ಹಾವು ಮುಂತಾದ ಜೀವಿಗಳನ್ನು ನೋಡಿದ ನಂತರ ಜನರ ಉಸಿರೇ ಹೋದ ಅನುಭವವಾಗುತ್ತದೆ. ಆದರೆ ನೀವು ಎಂದಾದರೂ ಮೊಸಳೆಯನ್ನು ಹತ್ತಿರದಿಂದ ನೋಡಿರುವ ಸಾಧ್ಯತೆ ಇದ್ದರೂ ಕೂಡ ಮೊಸಳೆಯೊಂದಿಗೆ ಸವಾರಿ ಮಾಡುವ ಅಭಿಲಾಷೆ ಹೊಂದಿರಲು ಸಾಧ್ಯವೇ ಇಲ್ಲ. ಕೇಳಿದಾಗಲೇ ಹುಚ್ಚಾಟ ಎನಿಸಿದರು ಅಚ್ಚರಿಯಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋವೊಂದನ್ನು ನೋಡಿದರೆ ಬೆಚ್ಚಿ ಬೀಳೋದು ಗ್ಯಾರಂಟಿ!! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯುವಕನೊಬ್ಬ ಮೊಸಳೆಯೊಂದಿಗೆ ನಿರ್ಭೀತಿಯಿಂದ ಬೈಕ್ ಸವಾರಿ ಮಾಡುತ್ತಿರುವುದನ್ನು ನೀವು ನೋಡಬಹುದಾಗಿದೆ. ಈ ಯುವಕ ತನ್ನ ಬೈಕ್‌ನಲ್ಲಿ ಭಯಾನಕ ಮತ್ತು ದೈತ್ಯ ಮೊಸಳೆಯನ್ನು ಕಟ್ಟಿದ್ದು, ಮೊಸಳೆಯನ್ನು ಬೈಕ್‌ನ ಸೀಟಿನ ಮೇಲೆ ಕೂರುವ ರೀತಿ ಮಾಡಿಕೊಂಡು ಬಳಿಕ ತಾನು ಅದರ ಮೇಲೆ ಕುಳಿತುಕೊಂಡಿದ್ದಾನೆ. ಯುವಕ ಮೊಸಳೆಯ ಬಾಯಿಯನ್ನು ಕಟ್ಟಿ ರಸ್ತೆಯಲ್ಲಿ ಅತಿವೇಗದಲ್ಲಿ ವಾಹನ ಚಲಾಯಿಸುತ್ತಿರುವ ವೀಡಿಯೋ ಸದ್ಯ ವೈರಲ್ ಆಗಿದೆ. ಹಿಂದಿನಿಂದ ಯಾರೋ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಅವರ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು ನೋಡಿದವರು ಮೂಗಿನ ಬೆರಳಿಟ್ಟು ಅಚ್ಚರಿ ಪಡುತ್ತಿದ್ದಾರೆ.

ವೀಡಿಯೋ ಗಮನಿಸಿದರೆ ಯುವಕ ತನ್ನ ಬೈಕ್‌ನಲ್ಲಿ ಕಟ್ಟಿ ಹಾಕಿರುವ ಮೊಸಳೆಯನ್ನು ಕಳ್ಳಸಾಗಾಣಿಕೆಗೆ ತೆಗೆದುಕೊಂಡು ಹೋಗುವಂತೆ ಕಂಡುಬರುತ್ತಿವೆ. ಇದನ್ನು ಮೀಮ್ ಪೇಜ್ ಮೂಲಕ ಶೇರ್ ಮಾಡಲಾಗಿದೆ. ಇದನ್ನು oy._.starrr ಹೆಸರಿನ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದುವರೆಗೆ ಒಂದು ಲಕ್ಷ 41 ಸಾವಿರ ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಲಕ್ಷಾಂತರ ಮಂದಿ ಈ ವೀಡಿಯೋ ನೋಡಿದ್ದು, ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಮೆಂಟುಗಳನ್ನು ಮಾಡುತ್ತಿದ್ದಾರೆ.

https://www.instagram.com/reel/CnMVjJxIhVX/?utm_source=ig_web_copy_link

Leave A Reply

Your email address will not be published.