No-fly-zone: ನಿಮಗಿದು ಗೊತ್ತೇ? ಈ 5 ಸ್ಥಳಗಳಲ್ಲಿ ವಿಮಾನ ಹಾರುವುದಿಲ್ಲ | ಯಾಕೆ? ಕಾರಣ ಇಲ್ಲಿದೆ

ವಿಮಾನದ ಬಗೆಗಿನ ಕೆಲವೊಂದು ಕುತೂಹಲಕಾರಿ ವಿಷಯಗಳು ಇಲ್ಲಿವೆ. ವಿಮಾನ ಹಾರುವಾಗ ರಾಷ್ಟ್ರೀಯ ಭದ್ರತೆಗೆ ಪ್ರಮುಖವಾಗಿ ಪ್ರದೇಶಗಳಿಗೆ ಸಂಬಂಧಿಸಿರುತ್ತದೆ. ಹಾಗಾಗಿ ವಿಮಾನ ಯಾವ ಸ್ಥಳಗಳ ಮೂಲಕ ಹಾದು ಹೋಗಬೇಕು ಮತ್ತು ಎಲ್ಲಿ ಹಾರಬಾರದು ಎಂಬ ನಿಯಮಗಳಿರುತ್ತದೆ. ಇನ್ನೂ, ಕೆಲವು ಸ್ಥಳಗಳಲ್ಲಿ ವಿಮಾನ ಹಾರುವುದಿಲ್ಲ. ಆ ಸ್ಥಳಗಳ ಪಟ್ಟಿ ಇಲ್ಲಿವೆ.

ಟಿಬೆಟ್ : ಇದನ್ನು ಪ್ರಪಂಚದ ಛಾವಣಿ ಎಂದು ಕರೆಯಲಾಗುತ್ತದೆ.
ಯಾಕಂದ್ರೆ, ಸುತ್ತಲೂ ಉನ್ನತ, ಎತ್ತರದ ಅಪಾರ ಪರ್ವತರಾಶಿಗಳಿವೆ. ಅಲ್ಲದೆ, ವಿಶ್ವದ ಎರಡು ಅತಿ ಎತ್ತರದ ಶಿಖರಗಳಾದ ಮೌಂಟ್ ಎವರೆಸ್ಟ್ ಮತ್ತು ಕೆ2 ಇಲ್ಲಿವೆ. ಆದರೆ ಈ ಟಿಬೆಟ್‌ನಲ್ಲಿ ವಿಮಾನ ಹಾರುವುದಿಲ್ಲ. ವಿಮಾನ ಹಾರಾಟಕ್ಕೆ ಅವಕಾಶವಿಲ್ಲ. ಯಾಕಂದ್ರೆ ಇದರ ಮೇಲೆ ವಿಮಾನ ಹಾದು ಹೋದ್ರೆ ವಿಮಾನ ಕ್ಲ್ಯಾಷ್​ ಆಗುತ್ತದೆ. ಹಾಗಾಗಿ ವಿಮಾನ ಹಾರುವುದನ್ನು ನಿಷೇಧಿಸಲಾಗಿದೆ. ಮತ್ತು ಇಲ್ಲಿ ತುರ್ತು ಲ್ಯಾಂಡಿಂಗ್‌ಗೆ ಸುರಕ್ಷಿತ ಸ್ಥಳವಿಲ್ಲ ಹಾಗಾಗಿ ವಿಮಾನಗಳು ಹಾರುವುದಿಲ್ಲ.

ಮೆಕ್ಕಾ : ಇದು ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿದೆ. ಇದು ಸೌದಿ ಅರೇಬಿಯಾದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಪ್ರಪಂಚದ ಮೂಲೆಯಿಂದ ಕೋಟಿಗಟ್ಟಲೆ ಮುಸ್ಲಿಮರು ಹಜ್ ಮಾಡಲು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ವಿಮಾನ ಹಾರಾಟ ಮಾಡುವುದಿಲ್ಲ. ಮೆಕ್ಕಾ ಮೂಲಕ ವಿಮಾನ ಹಾರುವುದಿಲ್ಲವಂತೆ. ಈ ಪವಿತ್ರ ಸ್ಥಳದ ಮೇಲೆ ವಿಮಾನ ಹಾರಾಡುವುದನ್ನು ಕಂಡರೆ ವಿಮಾನಯಾನ ಸಂಸ್ಥೆಗೆ ಬಾರೀ ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.

ತಾಜ್ ಮಹಲ್ : ಇದು ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್‌‌ ಚಕ್ರವರ್ತಿ ಷಹಜಹಾನ್‌‌ ತನ್ನ ಪ್ರೀತಿಯ ಪತ್ನಿ ಮಮ್ತಾಜ್‌ ಮಹಲ್‌ಳ ನೆನಪಿಗಾಗಿ ಕಟ್ಟಿಸಿದ್ದಾನೆ. ಈ ತಾಜ್ ಮಹಲ್ ಅನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. UNESCO ಇದನ್ನು ವಿಶ್ವ ಪರಂಪರೆಯ ತಾಣವೆಂದು ಪರಿಗಣಿಸಿದೆ. ಈ ಸ್ಥಳ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದೆ. ಹಾಗಾಗಿ ಭಾರತ ಸರ್ಕಾರ ಇದನ್ನು ನೋ ಫ್ಲೈ ಝೋನ್ ಮಾಡಿದೆ. ವಿಮಾನದಿಂದ ಬರುವ ಕಂಪನಗಳು ತಾಜ್ ನಿರ್ಮಾಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗಾಗಿ ತಾಜ್ ಮಹಲ್ ಮೇಲೆ ವಿಮಾನ ಹಾರುವುದಿಲ್ಲ.

ಆಂಡೆಸ್ ಪರ್ವತಗಳು : ಇದು ಭೂಮಿಯ ನೆಲದ ಮೇಲಿನ ಅತಿ ಉದ್ದದ ಪರ್ವತಶ್ರೇಣಿಯಾಗಿದೆ. ಭೂಮಿಯ ಅತಿ ಉದ್ದನೆಯ ಪರ್ವತಶ್ರೇಣಿಗಳು ಸಾಗರದಾಳದಲ್ಲಿವೆ. ದಕ್ಷಿಣ ಅಮೆರಿಕಾದ ಮಚು ಪಿಚು ಪೆರುವಿನ ಆಂಡಿಸ್ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ 7 ಸಾವಿರ ಅಡಿ ಎತ್ತರದಲ್ಲಿದೆ. ಇದು ಪ್ರಪಂಚದ 7 ಅದ್ಭುತಗಳಲ್ಲಿ ಒಂದಾಗಿದೆ. ಆದರೆ ಇಲ್ಲಿ ವಿಮಾನ ಹಾರುವುದಿಲ್ಲ. ಯಾಕಂದ್ರೆ, ಪ್ರವಾಸೋದ್ಯಮವನ್ನು ಉತ್ತೇಜಿಸಲು, ಪರಿಸರವನ್ನು ಸ್ವಚ್ಛವಾಗಿಡಲು ಈ ಸ್ಥಳವನ್ನು ನೋ ಫ್ಲೈ ಝೋನ್‌ನಲ್ಲಿ ಇರಿಸಲಾಗಿದೆ.

ಇದು ವಿಮಾನ ಹಾರಾಟ ಮಾಡದ ಕೊನೆಯ ಸ್ಥಳವಾಗಿದೆ. ಒಟ್ಟು ಐದು ಸ್ಥಳಗಳಲ್ಲಿ ವಿಮಾನ ಹಾರುವುದಿಲ್ಲ. ಅದರಲ್ಲಿ ಇದೂ ಒಂದು. ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಮನೆಯ ಮೇಲೆ ವಿಮಾನ ಹಾರುವುದಿಲ್ಲ. ಯಾಕೆ? ಅಂತಹ ವಿಶೇಷತೆ ಏನಿದೆ? ಎಂದು ಕುತೂಹಲವೇ? ಹಾಗಾದ್ರೆ ಕಾರಣ ತಿಳಿಯೋಣ. ಇದಕ್ಕೆ ಕಾರಣ ಮೆಸ್ಸಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಬಿ ಸಾಕರ್ ವೆಬ್‌ಸೈಟ್ ಪ್ರಕಾರ, ಮೆಸ್ಸಿ ಬಾರ್ಸಿಲೋನಾದ ಗಾವಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆ ಪ್ರದೇಶದಲ್ಲಿ ಸಸ್ಯ ಮತ್ತು ಪ್ರಾಣಿಗಳು ಅಲ್ಲಿ ಬಲು ಅಪರೂಪ. ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಗಾಳಿ ಕಲುಷಿತವಾಗಬಾರದು ಎಂಬುದು ಸರ್ಕಾರದ ಆಶಯ. ಹಾಗಾಗಿ ಆ ಪ್ರದೇಶದಲ್ಲಿ ವಿಮಾನ ಹಾರವುದಿಲ್ಲ.

Leave A Reply

Your email address will not be published.