Telecom Companies: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್ ನ್ಯೂಸ್!
ಟೆಲಿಕಾಮ್ ದೈತ್ಯ ಕಂಪನಿಗಳಲ್ಲಿ ತನ್ನ ಪಾರುಪತ್ಯ ಕಾಯ್ದು ಕೊಂಡಿರುವ ಜಿಯೋ ಇದೀಗ ಭದ್ರವಾಗಿ ನೆಲೆಯೂರಿ ಮೊದಲಿನ ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸುತ್ತಿದೆ. ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.
ಇತ್ತೀಚೆಗೆ ಭಾರತದಲ್ಲಿ ಟೆಲಿಕಾಂ ಕಂಪೆನಿಗಳು (Telecom Company)ಒದಗಿಸುತ್ತಿರುವ ರೀಚಾರ್ಜ್ ಯೋಜನೆಗಳ ಮೂಲಕ ಭಾರೀ ಮುಂಚೂಣಿಯಲ್ಲಿರುವುದು ಗೊತ್ತಿರುವ ವಿಚಾರವೇ!!! ಈ ಟೆಲಿಕಾಂ ಕಂಪೆನಿಗಳು ಹೊಸ ಹೊಸ ರೀಚಾರ್ಜ್ ಯೋಜನೆಗಳನ್ನು (Recharge Plans) ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಲೇ ಇರುತ್ತವೆ. ಇನ್ನು ಟೆಲಿಕಾಂ ಕಂಪೆನಿಗಳು ಅಭಿವೃದ್ಧಿಯ ಸ್ಥಾನಗಳತ್ತ ಗಮನ ಹರಿಸಿದರೆ, ಜಿಯೋ (Jio) ಅಗ್ರ ಸ್ಥಾನದಲ್ಲಿದೆ. ಇದೇ ರೀತಿಯಲ್ಲಿ ಏರ್ಟೆಲ್ ಟೆಲಿಕಾಂ ಕಂಪೆನಿಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನೂ ಬಾಚಿ ಕೊಂಡಿದೆ. ವೊಡಫೋನ್ ಐಡಿಯಾ ಕಂಪೆನಿಯ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇದೀಗ ಈ ಕಂಪೆನಿಗಳು ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯನ್ನೂ ನೀಡಲು ಮುಂದಾಗಿದೆ.
ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಒದಗಿಸುತ್ತಿರುವ ಪ್ರಯೋಜನ ಗಮನಿಸಿದರೆ, ಕಂಪೆನಿಗಳು ಪಡೆಯುತ್ತಿರುವ ಸರಾಸರಿ ಆದಾಯ ಕಡಿಮೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರೀಚಾರ್ಜ್ನ ಬೆಲೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಕಂಪೆನಿಗಳು ಹೇಳಿವೆ ಎನ್ನಲಾಗಿದೆ.
ಭಾರತೀಯ ಟೆಲಿಕಾಂ ಕಂಪೆನಿಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿಕೊಂಡು ಜಿಯೋ ಅಗ್ರ ಸ್ಥಾನದಲ್ಲಿ ಇದ್ದರೂ ಕೂಡ ಏರ್ಟೆಲ್ ಆದಾಯ ಗಳಿಕೆಯಲ್ಲಿ ಮಾತ್ರ ಮುಂಚೂಣಿ ಸಾಧಿಸಿದೆ. ಇದುವರೆಗೆ ಏರ್ಟೆಲ್ನಲ್ಲಿ 200 ರೂಪಾಯಿಗೆ ಸನಿಹವಿದ್ದ ರೀಚಾರ್ಜ್ ಬೆಲೆಯನ್ನು 300 ರೂಪಾಯಿಗಳವರೆಗೆ ಏರಿಕೆ ಮಾಡುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಇನ್ನು ಬೇರೆ ಕಂಪೆನಿಗಳು ಸಹ ತನ್ನ ರೀಚಾರ್ಜ್ ಬೆಲೆಗಳನ್ನು ಏರಿಕೆ ಮಾಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಭಾರತದ ಟೆಲಿಕಾಂ ವಲಯದಲ್ಲಿ ಏರ್ಟೆಲ್ ಎರಡನೇ ಸ್ಥಾನದಲ್ಲಿದ್ದು ಇದರ ಅಧ್ಯಕ್ಷರಾಗಿರುವಂತಹ ಸುನಿಲ್ ಭಾರ್ತಿ ಮಿತ್ತಲ್ ಅವರು ತನ್ನ ಕಂಪೆನಿಯ ರೀಚಾರ್ಜ್ ಪ್ಲ್ಯಾನ್ಗಳ ಬೆಲೆಗಳನ್ನು ಏರಿಕೆ ಮಾಡುವ ಕುರಿತಾಗಿ ಹೇಳಿಕೆ ನೀಡಿ ತನ್ನ ಗ್ರಾಹಕರಿಗೆ ಶಾಕ್ ನೀಡಿದ್ದಾರೆ. ಇತ್ತೀಚೆಗೆ ದಾವೋಸ್ನಲ್ಲಿ ಮನಿ ಕಂಟ್ರೋಲ್ ತಂಡದ ಜೊತೆಗೆ ಮಾತನಾಡಿರುವ ಸುನಿಲ್ ಮಿತ್ತಲ್ ಅವರು ‘ ದೇಶದಲ್ಲಿ ಪ್ರಸ್ತುತ ಟೆಲಿಕಾಂ ನಿರ್ಧರಿಸಿ ಬೆಲೆಗಳು ಲಾಭದಾಯಕ ವಾಗಿಲ್ಲ ಎಂದು ಹೇಳಿದ್ದು, ಪ್ರತೀ ಬಳಕೆದಾರರಿಂದ ತಿಂಗಳಿಗೆ ಅತಿ ಕಡಿಮೆ ಎಂದು ಅಂದಾಜಿಸಿದರೂ ಕೂಡ ರೂ 300 ರೂಪಾಯಿಗಳಷ್ಟು ಆದಾಯವನ್ನು ಪಡೆಯಬೇಕು. ಹೀಗಾಗಿ, ಭಾರತದ ಟೆಲಿಕಾಂ ಕಂಪೆನಿಗಳು ತನ್ನ ಬೆಲೆ ನಿರ್ಧಾರದಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ದೇಶದ ಗ್ರಾಹಕರು ಪ್ರತಿ ತಿಂಗಳು 300 ರೂಪಾಯಿಗೆ 60ಜಿಬಿ ವರೆಗೆ ಡೇಟಾ ಪ್ರಯೋಜನ ಪಡೆಯುತ್ತಿರುವುದು ಅತ್ಯಂತ ಅಗ್ಗವಾಗಿದೆ ಎಂದು ಸುನಿಲ್ ಮಿತ್ತಲ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ದೇಶದಲ್ಲಿ ಮೊಬೈಲ್ ರೀಚಾರ್ಜ್ ಬೆಲೆಗಳು ಏರಿಕೆಯಾಗುವ ಬಗ್ಗೆ ಕುರಿತಾಗಿ ಸಣ್ಣ ಹಿಂಟ್ ಬಿಟ್ಟು ಕೊಟ್ಟಿದ್ದಾರೆ. ಇನ್ನು ಈ ಕಂಪೆನಿಗಳ ಮಾಸಿಕ ಆದಾಯ ಗಳಿಕೆಯ ಕಡೆ ಗಮನ ಹರಿಸಿದರೆ, ಕಳೆದ ತ್ರೈಮಾಸಿಕದ ಸಮೀಕ್ಷೆಯ ಪ್ರಕಾರ, ಏರ್ಟೆಲ್ ಪ್ರತೀ ತಿಂಗಳು ಬಳಕೆದಾರರಿಂದ ಗಳಿಸುತ್ತಿರುವ ಆದಾಯ 190 ರೂಪಾಯಿ ಆಗಿದ್ದು, ಅದೇ ರೀತಿ ರಿಲಯನ್ಸ್ ಜಿಯೋ 177.2 ರೂಪಾಯಿ ಹಾಗೂ ಟೆಲಿಕಾಂ ಕಂಪೆನಿಗಳಲ್ಲಿ ಮೂರನೇ ಸ್ಥಾನವನ್ನು ಪಡೆದಿರುವ ವೊಡಫೋನ್ ಐಡಿಯಾ ತಿಂಗಳಿಗೆ 131 ರೂಪಾಯಿಯಷ್ಟು ಆದಾಯವನ್ನು ಪಡೆಯುತ್ತಿದೆ.