Radhika Merchant : ರಾಧಿಕಾ ಮರ್ಚೆಂಟ್ ಧರಿಸಿದ್ದ ಈ ‘ರಾಣಿ ಹಾರ’ದ ವಿಶೇಷತೆ ತಿಳಿದರೆ ನಿಜಕ್ಕೂ ಬೆರಗಾಗ್ತೀರ! ಅಂಬಾನಿ ಸೊಸೆ ಧರಿಸಿದ ಈ ಹಾರದ ಬಗ್ಗೆ ಇಲ್ಲಿದೆ ವಿವರ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಂತು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಹಾಗೇ ಇವರಿಬ್ಬರ ಮೆಹಂದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದ್ದು, ಮೆಹಂದಿ ಶಾಸ್ತ್ರದ ವೇಳೆ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ‘ರಾಣಿ ಹಾರ’ ಧರಿಸಿದ್ದರು. ಸದ್ಯ ಈ ‘ರಾಣಿ ಹಾರ’ ಸಖತ್ ವೈರಲ್ ಆಗಿದ್ದು, ಇದರ ವಿಶೇಷತೆ ತಿಳಿದ್ರೆ ನಿಜಕ್ಕೂ ನೀವು ಬೆರಗಾಗ್ತೀರಾ!!! ಹಾಗಾದ್ರೆ ಇದರ ವಿಶೇಷತೆ ಏನು? ಎಂದು ನೋಡೋಣ.

 

ಮೆಹಂದಿ ಶಾಸ್ತ್ರದಲ್ಲಿ ರಾಧಿಕಾ ಮರ್ಚೆಂಟ್ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದರು. ಕಸೂತಿ ಹೂವಿನ ಬೂಟಿಗಳು ಮತ್ತು ಸಣ್ಣ ಕನ್ನಡಿಗಳೊಂದಿಗೆ, ಬಹು-ಬಣ್ಣದ ರೇಷ್ಮೆ ಬಟ್ಟೆಗಳಿಂದ ಈ ಲೆಹೆಂಗಾ ವಿನ್ಯಾಸಗೊಂಡಿತ್ತು. ಇದರ ಜೊತೆಗೆ ರಾಣಿ ಹಾರವನ್ನು ಕೂಡ ಧರಿಸಿದ್ದರು. ಇದರಿಂದ ಅವರ ಸೌಂದರ್ಯ ದುಪ್ಪಟ್ಟಾಗಿತ್ತು.

ರಾಧಿಕಾ ಧರಿಸಿದ್ದ ಹಾರವನ್ನು ರಾಣಿ ನೆಕ್ಲೆಸ್ ಅಥವಾ ರಾಣಿ ಹಾರ ಎಂದು ಕರೆಯುತ್ತಾರೆ. ಈ ಹಾರ ರಾಜಸ್ಥಾನಿ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಸಾಮಾನ್ಯವಾಗಿ ಇಂತಹ ಆಭರಣಗಳನ್ನು ಅಲ್ಲಿನ ರಾಣಿಯರು ಮತ್ತು ರಾಜಕುಮಾರಿಯರು ಧರಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ ರಾಧಿಕಾ ಮರ್ಚೆಂಟ್‌ಗಿಂತ ಮೊದಲೇ ಹಲವು ಬಾಲಿವುಡ್ ನಟಿಯರು ತಮ್ಮ ಮದುವೆ ಸಂದರ್ಭದಲ್ಲಿ ಈ ‘ರಾಣಿ ಹಾರ’ ವನ್ನು ಧರಿಸಿದ್ದಾರೆ. ಯಾರೆಲ್ಲಾ ಧರಿಸಿದ್ದರು?

2018 ರಲ್ಲಿ ಬಾಲಿವುಡ್ ನಟಿ ಸೋನಂ ಕಪೂರ್ ದೆಹಲಿ ಮೂಲದ ಉದ್ಯಮಿಯಾದ ಆನಂದ್ ಅಹುಜಾ ಅವರನ್ನು ವಿವಾಹವಾದರು. ತಮ್ಮ ವಿವಾಹದಲ್ಲಿ ನಟಿ ಕೆಂಪು ಲೆಹೆಂಗಾವನ್ನು ಧರಿಸಿದ್ದರು. ಇದರ ಜೊತೆಗೆ ‘ರಾಣಿ ಹಾರ’ವನ್ನು ಕೂಡ ಧರಿಸಿದ್ದರು. ಹಾಗೇ ಇನ್ನೋರ್ವ
ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾದ ಸಂದರ್ಭದಲ್ಲಿ ಸಿಂಧೂರಿ ಲೆಹೆಂಗಾದ ಜೊತೆಗೆ ‘ರಾಣಿ ಹಾರ’ ಧರಿಸಿದ್ದರು.

ಅಲ್ಲದೆ, ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ಕೂಡ ತಮ್ಮ ವಿವಾಹದ ಸಂದರ್ಭದಲ್ಲಿ ಈ ‘ರಾಣಿ ಹಾರ’ ಧರಿಸಿ, ಕಂಗೊಳಿಸುತ್ತಿದ್ದರು. ಹಾಗೇ ಐಶ್ವರ್ಯಾ ರೈ ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಗೋಲ್ಡನ್ ಸೀರೆಯ ಜೊತೆಗೆ ‘ರಾಣಿ ಹಾರ’ ಮತ್ತು ಕುತ್ತಿಗೆಯಲ್ಲಿ ಚೋಕರ್ ಧರಿಸಿದ್ದರು. ಈ ‘ರಾಣಿ ಹಾರ’ ವಿಶೇಷವಾಗಿದ್ದು, ಸೆಲೆಬ್ರಿಟಿಗಳು ತಮ್ಮ ವಿವಾಹದಂದು ಇದನ್ನು ಧರಿಸಿ ಸೌಂದರ್ಯ ಹೆಚ್ಚಿಸಿಕೊಂಡಿದ್ದಾರೆ.

Leave A Reply

Your email address will not be published.