Reliance Jio : ಜಿಯೋ ನೀಡಿದೆ ಧಮಾಕ ಆಫರ್‌ | ಅನಿಯಮಿತ ಕರೆಯ ಜೊತೆ 56GB ಡೇಟಾ!

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.

 

ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಬಳಕೆದಾರರಿಗೆ ಹಲವು ಉತ್ತಮ ಪ್ರಿಪೇಯ್ಡ್ ಯೋಜನೆ ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಪ್ರಯೋಜನದ ವಿಷಯದಲ್ಲಿ ಕಂಪನಿಯ ಪೋಸ್ಟ್ಪೇಯ್ಡ್ ಯೋಜನೆಗಳು ಕೂಡ ಉತ್ತಮವಾಗಿವೆ. ಜಿಯೋದ ಬಹುತೇಕ ಯೋಜನೆಗಳು ದೈನಂದಿನ ಡೇಟಾ, ಅನಿಯಮಿತ ಕರೆ ಸೌಲಭ್ಯ, ಎಸ್ಎಮ್ಎಸ್ ಸೌಲಭ್ಯಗಳು ಗ್ರಾಹಕರಿಗೆ ದೊರೆಯುತ್ತಿವೆ.

ಜಿಯೋ ಟೆಲಿಕಾಂನ 119 ರೂ. ಪ್ರಿಪೇಯ್ಡ್ ಯೋಜನೆ 14 ದಿನಗಳ ವ್ಯಾಲಿಡಿಟಿಯನ್ನ ಹೊಂದಿದ್ದು, ಈ ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನದ ಜೊತೆಗೆ ಅನಿಯಮಿತ ಕರೆ ಸೌಲಭ್ಯ, ಎಸ್ಎಂಎಸ್ ಕೂಡ ಮಾಡಬಹುದು.

ಜಿಯೋದ 239 ರೂ. ಪ್ರಿಪೇಯ್ಡ್ ಪ್ಲಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಪ್ರತಿದಿನ 1.5 GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಜಿಯೋ ಟು ಜಿಯೋ ಮತ್ತು ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ್ ಅನಿಯಮಿತ ವಾಯಿಸ್ ಕರೆಗಳ ಜೊತೆಗೆ ಜಿಯೋ ಆಪ್ಸ್ ಸೇವೆ ಕೂಡ ಲಭ್ಯವಾಗಲಿದೆ.

ಜಿಯೋ ಟೆಲಿಕಾಂನಲ್ಲಿ ಮುಖ್ಯವಾಗಿ 299 ರೂ. ಪ್ರಿಪೇಯ್ಡ್ ಯೋಜನೆ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 299 ರೂ. ಪ್ಲಾನ್ ನೊಂದಿಗೆ ಪ್ರತಿದಿನ 100 ಎಸ್ ಎಮ್ ಎಸ್ ಸೌಲಭ್ಯ ಸಿಗಲಿದ್ದು ಇದು ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನದ ಜೊತೆಗೆ ಈ ಯೋಜನೆ ಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆ್ಯಪ್ ಅನ್ನು ಸಹ ಪಡೆಯಬಹುದಾಗಿದ್ದು ಸಂಪೂರ್ಣ ಅನಿಯಮಿತ ಉಚಿತ ಕರೆ ಸೌಲಭ್ಯ ನೀಡಲಾಗಿದೆ.

ಜಿಯೋ 479 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಸೌಲಭ್ಯ ದೊರೆಯಲಿದೆ. ಈ ಯೋಜನೆ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನ ಹೊಂದಿದೆ. ಇದರೊಂದಿಗೆ ಜಿಯೋ ದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಹೊಂದಿದ್ದು ಮಾತ್ರವಲ್ಲದೇ ಪ್ರತಿದಿನ 100 ಉಚಿತ ಎಸ್ ಎಮ್ ಎಸ್ ಸೌಲಭ್ಯ ಲಭ್ಯವಾಗಲಿದೆ.

Leave A Reply

Your email address will not be published.