Love jihad : ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನೋರ್ವನ ಜೊತೆ ಎಸ್ಕೇಪ್‌ | ಗಂಡನಿಗೆ ಶಾಕ್‌

ಅವರದ್ದು ದಶಕಗಳ ಸಂಸಾರ. ಸುಖವಾಗಿಯೇ ದಂಪತಿಗಳಿಬ್ಬರು ಸಂಸಾರವನ್ನು ಸಾಗಿಸುತ್ತಿದ್ದರು. ಇವರಿಗೆ ನಾಲ್ವರು ಮಕ್ಕಳಿದ್ದಾರೆ. ಆದರೆ, ಹಿರಿಮಗಳ ಮದುವೆ ಬಗ್ಗೆ ಯೋಚನೆ ಮಾಡಬೇಕಿದ್ದ ತಾಯಿ ಮತ್ತೊಬ್ಬನ ಜೊತೆ ಮದುವೆಯಾಗಿದ್ದಾಳೆ. ಅದರಲ್ಲೂ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದು ಲವ್‌ ಜಿಹಾದ್‌ನ ಸ್ವರೂಪ ಪಡೆದಿದೆ!!

 

ಹೌದು, ನಾಲ್ಕು ಜನ ಮಕ್ಕಳಿದ್ರೂ ತಂದೆ, ತಾಯಿ ಯಾವುದಕ್ಕೂ ಕೊರತೆ ಮಾಡಿರಲಿಲ್ಲ. ಹೆಂಡ್ತಿಯನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದ್ರೆ ಆಕೆಯ ಚಿತ್ತವೇ ಬೇರೆ ಕಡೆ ಹರಿದಿತ್ತು. ನಾಲ್ಕು ಮಕ್ಕಳ ತಾಯಿಯಾಗಿದ್ದ ಈಕೆ ಮುಸ್ಲಿಂ ಯುವಕನ ಹಿಂದೆ ಓಡಿ ಹೋಗಿದ್ದಾಳೆ . ಆತನನ್ನು ಮದುವೆಯಾಗಿದ್ದಲ್ಲದೇ, ಇಸ್ಲಾಂ ಧರ್ಮಗೆ ಮತಾಂತರ ಆಗಿದ್ದಾಳೆ. ಇದೇ ಪ್ರಕರಣದ ಹಿಂದೆ ಲವ್‌ ಜಿಹಾದ್‌ನ ಆರೋಪ ಕೇಳಿ ಬಂದಿದೆ. ಸದ್ಯ ಗುಜರಾತಿ ಕುಟುಂಬವು ಅಕ್ಷರಶಃ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.

ಗದಗ ನಗರದ ನಿವಾಸಿಯಾಗಿರುವ ಪ್ರಕಾಶ್‌ ಎನ್ನುವರು ಹೇಮಾವತಿ ಎಂಬಾಕೆಯನ್ನು ಮದುವೆಯಾಗಿದ್ದರು. ಇವರ ಹಾಲು- ಜೇನಿನಂತಹ ಸುಖ ಸಂಸಾರಕ್ಕೆ ನಾಲ್ಕು ಮಂದಿ ಮಕ್ಕಳಿದ್ದರು. ದಶಕಗಳಿಂದಲೂ ಚೆನ್ನಾಗಿದ್ದ ಇವರ ಸಂಸಾರದಲ್ಲಿ ಅದೊಬ್ಬ ಕಿರಾತಕ ಹುಳಿ ಹಿಂಡಿದ್ದಾನೆ. 6 ತಿಂಗಳ ಹಿಂದೆ ಹೇಮಾವತಿ ಇದ್ದಕ್ಕಿದ್ದಂತೆ ತನ್ನ ಚಿಕ್ಕ ಮಗಳ ಜೊತೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಗಾಬರಿಗೊಂಡ ಪ್ರಕಾಶ್‌ ಕೂಡಲೇ ನಾಪತ್ತೆ ಕೇಸ್‌ ದಾಖಲಿಸಿದ್ದ. ಆಗ ಗೊತ್ತಾಗಿದ್ದೇ ಆಕೆಯ ಲವ್ ಸ್ಟೋರಿ. ಮಕ್ಬುಲ್ ಅನ್ನೋ ಮುಸ್ಲಿಂ ಯುವಕ ಹೇಮಾವತಿಯನ್ನು ಮದುವೆಯಾಗಿರುವುದು ಗೊತ್ತಾಗಿದೆ.

ಸುಮಾರು ಆರೇಳು ತಿಂಗಳಿಂದ ಹೆಂಡತಿ ಕಾಣ್ತಿಲ್ಲ, ನಾಲ್ಕು ಜನ ಮಕ್ಕಳಲ್ಲಿ ಒಬ್ಬ ಮಗಳೂ ನಾಪತ್ತೆಯಾಗಿದ್ದಳು. ಪೊಲೀಸರಿಗೆ ದೂರು ಕೊಟ್ಟಾಗಲೇ ಗೊತ್ತಾಗಿದ್ದು ಮನೆ ಬಾಡಿಗೆ ಕೊಡಿಸಿದ್ದ ಮುಸ್ಲಿಂ ಯುವಕನ ಜೊತೆ ಹೆಂಡತಿ ಪರಾರಿಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾಳೆ ಎಂಬ ಕಟುಸತ್ಯ. ಕಳೆದ ಲಾಕ್ ಡೌನ್ ನಲ್ಲಿ ಗೋವಾಕ್ಕೆ ತೆರಳಿದ್ದಾಗ ಬಾಡಿಗೆ ಮನೆ ಕೊಡಿಸುವುದಾಗಿ ಹೇಳಿ ಪರಿಚಯವಾದ ಮುಸ್ಲಿಂ ಯುವಕ ಮುಕ್ಬೂಲ್ , ಪ್ರಕಾಶ್ ಹೆಂಡತಿಯನ್ನು ಪುಸಲಾಯಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ ಆಕೆಯನ್ನೇ ಮದುವೆಯಾಗಿದ್ದಾನೆ ಎಂದು ಪ್ರಕಾಶ್ ಗುಜರಾತಿ ಆರೋಪಿಸಿದ್ದಾನೆ. ಇದಷ್ಟೇ ಅಲ್ಲದೆ ಸದ್ಯ ನಾಲ್ಕು ಜನ ಮಕ್ಕಳಲ್ಲಿ ಒಬ್ಬ ಅಪ್ರಾಪ್ತೆ ಬಾಲಕಿಯನ್ನೂ ಸಹ ಆ ಮುಸ್ಲೀಂ ಯುವಕನೇ ಕರೆದುಕೊಂಡು ಹೋಗಿ ಮತಾಂತರ ಮಾಡಿದ್ದಾನೆ ಎಂದು ಪ್ರಕಾಶ ಅನುಮಾನ ಹೊರಹಾಕಿದ್ದಾನೆ.

ಹಾವೇರಿ ಜಿಲ್ಲೆ ಸವಣೂರ ಗ್ರಾಮದ ಮಕ್ಬುಲ್‌ ಗೋವಾಕ್ಕೆ ದುಡಿಯಲು ಹೋಗಿದ್ದ. ಅಲ್ಲೇ ಪ್ರಕಾಶ್‌ ಫ್ಯಾಮಿಲಿಯ ಪರಿಚಯ ಆಗಿ, ಗೋವಾದಲ್ಲಿ ಬಾಡಿಗೆ ಮನೆ ಕೊಡಿಸಲು ನೆರವಾಗಿದ್ದ. ಜೊತೆಗೆ ಪ್ರಕಾಶ್‌ ಹೆಂಡ್ತಿಯನ್ನೇ ಪಟಾಯಿಸಿದ್ದನು. ಮೂವರು ಮಕ್ಕಳು ಹಾಗೂ ಗಂಡನನ್ನೇ ಬಿಟ್ಟುಬರುವಷ್ಟು ಬ್ರೇನ್‌ವಾಷ್‌ ಮಾಡಿದ್ದಾನೆ ಎನ್ನುವುದು ಆಕೆಯ ಪತಿ ಪ್ರಕಾಶ್ ಆರೋಪವಾಗಿದೆ.

ಇನ್ನು ಪೊಲೀಸ್‌ ಕೇಸ್‌ನಿಂದ ಯಾವ ಪ್ರಯೋಜನವಾಗಿಲ್ಲದಿದ್ದರಿಂದ ಶ್ರೀರಾಮ ಸೇನೆ ಕೂಡಾ ಎಂಟ್ರಿಯಾಗಿದೆ. ಲವ್‌ ಜಿಹಾದ್‌ ವಿರುದ್ಧ, ಮತಾಂತರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟಿಸಿದ್ದಾರೆ. ಇದರ ಹಿಂದೆ ಲವ್‌ ಜಿಹಾದ್’ನ ಷಡ್ಯಂತರದ ಆರೋಪ ಕೇಳಿ ಬಂದಿದ್ದು, ಪೊಲೀಸರು ತನಿಖೆ ನಡೆಸಬೇಕಿದೆ.

Leave A Reply

Your email address will not be published.