Online Food Order: ಆನ್‌ಲೈನ್‌ನಲ್ಲಿ ಫುಡ್​​ ಆರ್ಡರ್ ಮಾಡ್ತೀರಾ ? ಹಾಗಾದರೆ ಆರ್ಡರ್‌ ಮಾಡುವ ಮೊದಲು ಮತ್ತು ನಂತರ ಈ ಟಿಪ್ಸ್​​ ಫಾಲೋ ಮಾಡಿ

ಇತ್ತಿಚಿನ ದಿನಗಳಲ್ಲಿ ಹೆಚ್ಚಿನವರು ಆನ್ಲೈನ್ ಫುಡ್ ಗಳ ಮೊರೆ ಹೋಗೋದು ಸಹಜ. ಆದರೆ, ಹೀಗೆ ಆನ್ಲೈನ್ ಫುಡ್ ಗಳನ್ನೂ ಸೇವಿಸುವ ಮೊದಲು ಜಾಗ್ರತೆ ವಹಿಸೋದು ಮುಖ್ಯ. ಕೋವಿಡ್-19 ಮಹಾಮಾರಿಯ ಬಳಿಕ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಿರುವುದು ಗೊತ್ತಿರುವ ವಿಷಯವೇ. ಕೋವಿಡ್ ಜನರಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸಿದ್ದು ಆಹಾರವನ್ನು ಆರ್ಡರ್ ಮಾಡುವ ಮೊದಲು ಮತ್ತು ಆಹಾರವನ್ನು ವಿತರಿಸಿದ ನಂತರ ನೀವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ.

ಆನ್‌ಲೈನ್‌(Online) ನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಈಗ ಕಾಮನ್ ಆಗಿ ಬಿಟ್ಟಿದೆ.ಅಷ್ಟೆ ಅಲ್ಲದೆ ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ನಮಗೆ ಬೇಕಾದ ಶುಚಿ ರುಚಿಯಾದ ಪ್ರಕ್ರಿಯೆ ಅತಿ ಸರಳವಾಗಿ ಸುಲಭವಾಗಿ ಬಿಟ್ಟಿದೆ. ಡೊಮಿನೋಸ್, ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ, ಪಿಜ್ಜಾ ಹಟ್ ಮುಂತಾದ ಫಾಸ್ಟ್ ಫುಡ್ ರೆಸ್ಟೋರೆಂಟ್‌ಗಳು ತಮ್ಮದೇ ಆದ ಆಹಾರ ವಿತರಣಾ ಅಪ್ಲಿಕೇಶನ್‌ಗಳನ್ನು ಹೊಂದಿವೆ. ಅವರು ಜೊಮಾಟೋ, ಸ್ವಿಗಿ, ಮುಂತಾದ ಆಹಾರ ವಿತರಣಾ ಅಪ್ಲಿಕೇಶನ್‌ಗಳ ಮೂಲಕ ಆಹಾರವನ್ನು ವಿತರಿಸಲಾಗುತ್ತದೆ.

ನಿಮಗಿಷ್ಟವಾದ ರುಚಿಕರವಾದ ಆಹಾರವನ್ನು ಯಾವಾಗ ಬೇಕಾದರೂ ಆರ್ಡರ್ ಮಾಡಬಹುದಾಗಿದ್ದು ಕೆಲವೇ ನಿಮಿಷಗಳಲ್ಲಿ ಡೋರ್ ಸ್ಟೆಪ್ ಡೆಲಿವರಿ ಕೂಡ ಲಭ್ಯವಿದೆ. ಹೀಗಾಗಿ ಈ ಮೊದಲು ಆರ್ಡರ್ ಮಾಡಿದ ಆಹಾರವನ್ನು ಮತ್ತೊಮ್ಮೆ ಆರ್ಡರ್ ಮಾಡಬಹುದು. ನೀವು ಜೊಮಾಟೋ, ಸ್ವಿಗಿ ರೀತಿಯ ಆಹಾರ ವಿತರಣಾ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗಿದೆ. ಆಹಾರ ವಿತರಣಾ ಅಪ್ಲಿಕೇಶನ್‌ಗಳಲ್ಲಿ ಖಾತೆಗಳ ಜೊತೆಗೆ ಆಯ್ಕೆಮಾಡಿದ ರೆಸ್ಟೋರೆಂಟ್‌ನಿಂದ ಆಹಾರವನ್ನು ಆನಂದಿಸಲು ನಿಮಗೆ ಬೇಕಾಗಿರುವುದು ಸ್ಮಾರ್ಟ್ ಫೋನ್ ಇಲ್ಲವೇ ಲ್ಯಾಪ್‌ಟಾಪ್ ಅಷ್ಟೆ!!!

ನೀವು ಹೀಗೆ ಆನ್ಲೈನ್ ನಿಂದ ಆರ್ಡರ್ ಮಾಡುವಾಗ ಕೆಲವು ಅಂಶಗಳನ್ನೂ ಗಮನಿಸಬೇಕು.
ನೀವು ಆನ್ಲೈನ್ ಮೂಲಕ ಫುಡ್ ಆರ್ಡರ್ ಮಾಡುವ ವೇಳೆ ಗ್ರಾಹಕರು ನೀಡುವ ರೇಟಿಂಗ್‌ಗಳ ಜೊತೆಗೆ ಗ್ರಾಹಕರು ತಮ್ಮ ಅನುಭವಗಳನ್ನು ರೇಟ್ ಮಾಡುವುದರಿಂದ ರೆಸ್ಟೋರೆಂಟ್ ನ ಆಹಾರ ವಿತರಣೆಯ ಗುಣಮಟ್ಟದ ಬಗ್ಗೆ ನಿಮಗೆ ತಿಳಿಯಲಿದೆ. ರೇಟಿಂಗ್‌ಗಳು ರೆಸ್ಟೋರೆಂಟ್/ಸೇವಾ ಪೂರೈಕೆದಾರರ ಗ್ರಾಹಕ ಸೇವೆಯ ಕುರಿತು ಪ್ರತಿಕ್ರಿಯೆಯನ್ನು ನೀಡುವ ಹಿನ್ನೆಲೆ ನಿಮಗೆ ಉತ್ತಮ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡಲು ನೆರವಾಗುತ್ತವೆ.

ಕೆಲವು ರೆಸ್ಟಾರೆಂಟ್‌ಗಳು ಅವರು ಬಡಿಸುವ ಊಟದೊಂದಿಗೆ ಪೌಷ್ಟಿಕಾಂಶದ ಮೌಲ್ಯದ ಕುರಿತು ಮಾಹಿತಿ ನೀಡಲಾಗುತ್ತದೆ. ಈ ಮೌಲ್ಯಗಳ ಆಧಾರದ ಮೇಲೆ ನಿಮ್ಮ ಆಯ್ಕೆಯ ಊಟವನ್ನು ನೀವು ಆಯ್ಕೆ ಮಾಡಬಹುದಾಗಿದೆ. ಆಹಾರ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು, ನೀವು ರೆಸ್ಟೋರೆಂಟ್‌ಗಳನ್ನು ಈ ಮೂಲಕ ಫಿಲ್ಟರ್ ಮಾಡಬಹುದಾಗಿದೆ.

ನೀವು ಆದೇಶವನ್ನು ತಲುಪಿಸಲು ಬಯಸುವ ಸ್ಥಳದ ಸ್ಥಳವನ್ನು ನಮೂದಿಸಿಕೊಂಡು ಯಾವುದೇ ತೊಂದರೆಗಳನ್ನು ತಪ್ಪಿಸಲು ನಿಖರವಾದ ಸ್ಥಳವನ್ನು ಆಯ್ಕೆಮಾಡಬೇಕು. ಕೀಟೋ ಡಯಟ್ ಆಹಾರ ಪದಾರ್ಥಗಳು, ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ ಪದಾರ್ಥಗಳನ್ನೂ ಕೆಲವು ರೆಸ್ಟೊರೆಂಟ್‌ಗಳು ಆರೋಗ್ಯ ಪ್ರಜ್ಞೆಯುಳ್ಳ ಜನರನ್ನೂ ಕೇಂದ್ರೀಕರಿಸಿಕೊಂಡು ಈ ರೀತಿಯ ಆಹಾರ ಪದಾರ್ಥಗಳನ್ನು ಕೂಡ ಒದಗಿಸಲಾಗುತ್ತದೆ. ನೀವು ಈ ರೀತಿಯ ಜೀವನಶೈಲಿ ಡಯಟ್‌ಗಳನ್ನು ಅನುಸರಿಸುತ್ತಿದ್ದರೆ, ಅಂತಹ ರೆಸ್ಟೋರೆಂಟ್‌ಗಳಿಂದ ನೀವು ಆಹಾರವನ್ನು ಆರ್ಡರ್ ಮಾಡಬಹುದು.

ನಿಮ್ಮ ಆದ್ಯತೆಯ ಅನುಸಾರ ಆಹಾರಗಳನ್ನು ಮಸಾಲೆಯುಕ್ತವಾಗಿ ಇರಿಸಿಕೊಳ್ಳಲು ನೀವು ರೆಸ್ಟೋರೆಂಟ್‌ಗಳಿಗೆ ಸೂಚನೆಗಳನ್ನು ನೀಡಬಹುದಾಗಿದೆ. ಕಡಿಮೆ ಮಸಾಲೆಯುಕ್ತ, ಮಧ್ಯಮ ಮಸಾಲೆ ಮತ್ತು ತುಂಬಾ ಮಸಾಲೆಯುಕ್ತ ಪದಾರ್ಥಗಳನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಆರ್ಡರ್ ಮಾಡಬಹುದು. ಫೋರ್ಕ್‌ಗಳು, ಸ್ಪೂನ್‌ಗಳಂತಹ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಲು ಯಾವುದೇ ಕಟ್ಲರಿ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು. ಆಹಾರ ವಿತರಣಾ ಅಪ್ಲಿಕೇಶನ್‌ಗಳು ವಿವಿಧ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಪಾವತಿ ವ್ಯಾಲೆಟ್‌ಗಳು ಇತ್ಯಾದಿಗಳಲ್ಲಿ ರಿಯಾಯಿತಿಯನ್ನು ನೀಡುವ ಹಿನ್ನೆಲೆ ಆರ್ಡರ್ ಮಾಡುವ ಮೊದಲು ಯಾವಾಗಲೂ ಆಫರ್‌ಗಳಿಗಾಗಿ ಪರಿಶೀಲನೆ ನಡೆಸುವುದು ಉತ್ತಮ.

ನೀವು ಆರ್ಡರ್ ಮಾಡುವ ಮೊದಲು ಅಂತಿಮ ಪರಿಶೀಲನೆಗಳ ಬಗ್ಗೆ ನೋಡಿಕೊಳ್ಳುವುದು ಒಳ್ಳೆಯದು. ನೀವು ಈ ಅಪ್ಲಿಕೇಶನ್‌ನಲ್ಲಿ ಡೆಲಿವರಿ ವಿಳಾಸಗಳನ್ನು ಉಳಿಸಿಕೊಂಡು ಪಾವತಿ ಮಾಡುವ ಮೊದಲು ವಿಳಾಸವನ್ನು ಪರಿಶೀಲನೆ ಮಾಡಿ ಯಾವುದೇ ಸಮಸ್ಯೆಗಳು ಎದುರಾಗದಂತೆ ತಡೆಯಲು ಆಹಾರದ ಪ್ರಮಾಣದ ಬಗ್ಗೆ ಕೂಡ ಗಮನಹರಿಸುವುದು ಒಳ್ಳೆಯದು.

ಆಹಾರವನ್ನು ವಿತರಿಸಿದ ಬಳಿಕ ಗಮನಿಸಬೇಕಾದ ಸಂಗತಿಗಳು
ಆಹಾರ ವಿತರಣಾ ಅಪ್ಲಿಕೇಶನ್‌ಗಳು ತಮ್ಮ ಆಹಾರ ಸೇವೆಯ ಪ್ರಸಿದ್ದಿಗೆ ವಿಶೇಷ ಗಮನ ವಹಿಸುತ್ತವೆ. ಗ್ರಾಹಕರು ಆಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವೇಳೆ ನಿಮ್ಮ ಅಪ್ಲಿಕೇಶನ್ ವ್ಯಾಲೆಟ್‌ನಲ್ಲಿ ಸ್ವಲ್ಪ ಮೊತ್ತವನ್ನು ಮರುಪಾವತಿಸುತ್ತಾರೆ ಇಲ್ಲವೇ ನೀವು ಪಾವತಿ ರಿವರ್ಸಲ್‌ಗಳನ್ನು ಆಯ್ದುಕೊಂಡರೆ , ನೀವು ಮರುಪಾವತಿಯನ್ನು ಪೇಟಿಎಂ, ಗೂಗಲ್​ ಪೇ, ಫೋನ್​​ ಪೇ ನಂತಹ ಪಾವತಿ ವಾಲೆಟ್‌ಗಳಿಗೆ ಹಿಂತಿರುಗಿಸಬಹುದು.

ನಿಮ್ಮ ಊಟವನ್ನು ಸೇವಿಸುವ ಮೊದಲು, ನೀವು ಆರ್ಡರ್ ಮಾಡಿದ ಎಲ್ಲಾ ಐಟಂಗಳು ನಿಮಗೆ ತಲುಪಿದೆಯೆ ಎಂದು ಖಾತರಿ ಪಡಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಆರ್ಡರ್‌ನಿಂದ ಐಟಂ ಇಲ್ಲದಿದ್ದರೆ ಅಥವಾ ಅದು ನಿಮಗೆ ಬೇಕಾದ ಅವಶ್ಯಕತೆ ಪೂರೈಕೆಗೆ ಹೊಂದಿಕೆಯಾಗದಿದ್ದರೆ, ನೀವು ಇದನ್ನು ಗ್ರಾಹಕ ಮಾಹಿತಿ ಕಾರ್ಯನಿರ್ವಾಹಕರಿಗೆ ವರದಿ ಮಾಡಲು ಅವಕಾಶವಿದೆ. ಉದಾಹರಣೆಗೆ, ನೀವು ಜೈನ್ ಊಟವನ್ನು ಆಯ್ದುಕೊಂಡಿದ್ದು ಆದ್ರೆ ಊಟದಲ್ಲಿ ಈರುಳ್ಳಿ/ಬೆಳ್ಳುಳ್ಳಿ ಇತ್ಯಾದಿ ಇದ್ದರೆ ಅದನ್ನು ಕಂಪನಿಗೆ ವರದಿ ಮಾಡಿ ಮತ್ತು ಮರುಪಾವತಿ ಇಲ್ಲವೇ ಬದಲಿ ವ್ಯವಸ್ಥೆಗೆ ಮನವಿ ಮಾಡಬಹುದು.

ಆಹಾರವು ಚೆಲ್ಲಿದರೆ ಅಥವಾ ಪ್ಯಾಕೇಜಿಂಗ್ ಟ್ಯಾಂಪರ್ಡ್ ಆಗಿ ಕಂಡುಬಂದರೆ, ತಕ್ಷಣವೇ ಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಆಹಾರದ ವಸ್ತುವಿನ ಹಿಂತಿರುಗಿಸುವಿಕೆಗೆ ಆಯ್ಕೆ ಇದ್ದು, ಟ್ಯಾಂಪರ್ಡ್ ಪ್ಯಾಕೇಜಿಂಗ್ ಹೊಂದಿರುವ ಆಹಾರ ಪದಾರ್ಥವನ್ನು ಸೇವಿಸುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ಆರ್ಡರ್ ಮಾಡಿದ ಆಹಾರದ ಪೊಟ್ಟಣವನ್ನು ತೆರೆಯುವಾಗ ಮೊಬೈಲ್ ನಿಂದ ವಿಡಿಯೋ ಮಾಡಿಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಲು ನೆರವಾಗಬಹುದು. ಆಹಾರವು ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿದ್ದರೆ ಪೆಟ್ಟಿಗೆಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತವೆ. ಬಾಕ್ಸ್‌ಗಳನ್ನು ಶುಚಿಗೊಳಿಸಿದ ನಂತರ ಆಹಾರವನ್ನು ನಿಮ್ಮ ಸ್ಟೀಲ್ ಪಾತ್ರೆಗಳಿಗೆ ವರ್ಗಾಯಿಸಿಕೊಂಡು ಪ್ಲಾಸ್ಟಿಕ್ ಬಾಕ್ಸ್‌ಗಳನ್ನು ಸೂಕ್ತ ಕಸ ನಿರ್ವಹಣೆ ಮಾಡಬಹುದು.

Leave A Reply

Your email address will not be published.