Airtel Recharge Plans : ಏರ್‌ಟೆಲ್‌ ಬಿಡುಗಡೆ ಮಾಡಿದೆ ರೀಚಾರ್ಜ್‌ ಪ್ಲ್ಯಾನ್ಸ್‌ | ಅದು ಕೂಡಾ ಜಸ್ಟ್‌ 200 ರೂ.ಒಳಗಿನ ಬೆಸ್ಟ್‌ ಪ್ಲ್ಯಾನ್ಸ್‌

ದೇಶದ ಟೆಲಿಕಾಂ ಕಂಪೆನಿಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಏರ್​ಟೆಲ್ ಎರಡನೇ ಸ್ಥಾನದಲ್ಲಿದೆ. ಆದರೆ, ಈ ಕಂಪೆನಿ ದಿನದಿಂದ ದಿನಕ್ಕೆ ರಿಲಯನ್ಸ್ ಜಿಯೋಗೆ ಪೈಪೋಟಿಯನ್ನು ನೀಡುತ್ತಲೇ ಇದೆ. ಏರ್​ಟೆಲ್​ ದೇಶದೆಲ್ಲೆಡೆ 5ಜಿ ನೆಟ್​ವರ್ಕ್ ಸೇವೆಯನ್ನು ಪ್ರಾರಂಭಿಸುವ ಮೂಲಕ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ 2023ರಲ್ಲಿ ದೇಶದ ಮೂಲೆ ಮೂಲೆಯಲ್ಲೂ ತನ್ನ 5ಜಿ ಸೇವೆಯನ್ನು ವಿಸ್ತರಿಸುವುದಾಗಿ ಏರ್ಟೆಲ್ ಗ್ರಾಹಕರಿಗೆ ಭರವಸೆಯನ್ನು ನೀಡಿದೆ. ಇದರ ಜೊತೆಗೆ ಏರ್​ಟೆಲ್​ ಕಂಪೆನಿ ವಿಶೇಷ ಆಫರ್​’ನೊಂದಿಗೆ, ಕೇವಲ 200 ರೂಪಾಯಿ ಒಳಗಿನ ಪ್ರೀಪೇಯ್ಡ್​ ರೀಚಾರ್ಜ್ ಪ್ಲ್ಯಾನ್​ಗಳನ್ನು ಬಿಡುಗಡೆ ಮಾಡಿದೆ.

128 ರೂಪಾಯಿ ರೀಚಾರ್ಜ್ ಪ್ಲ್ಯಾನ್​:- ಏರ್‌ಟೆಲ್ ಟೆಲಿಕಾಂನ 128 ರೂಪಾಯಿ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದೂ, ಮೊಬೈಲ್ ಡೇಟಾಗೆ ಪ್ರತಿ ಎಮ್​ಬಿ ಗೆ 50 ಪೈಸೆ ವಿಧಿಸಲಾಗುತ್ತದೆ ಮತ್ತು ಸ್ಥಳೀಯ ಎಸ್‌ಎಮ್‌ಎಸ್‌ ಗೆ 1 ರೂಪಾಯಿ ಮತ್ತು ಎಸ್‌ಟಿಡಿ ಗೆ ಪ್ರತಿ ಎಸ್‌ಎಮ್‌ಎಸ್‌ ಗೆ 1.5 ರೂಪಾಯಿಯನ್ನು ವಿಧಿಸಲಾಗುತ್ತದೆ. ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆಯಂತೆ ಕಟ್ ಆಗುತ್ತದೆ ಮತ್ತು ರಾಷ್ಟ್ರೀಯ ವಿಡಿಯೋ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆಯಂತೆ ವಿಧಿಸುತ್ತದೆ.

111 ರೂಪಾಯಿ ರೀಚಾರ್ಜ್​ ಪ್ಲ್ಯಾನ್​:- ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. 200ಎಮ್​ಬಿ ಮೊಬೈಲ್ ಡೇಟಾದ ಜೊತೆಗೆ 99 ರೂಪಾಯಿ ಟಾಕ್ ಟೈಮ್ ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2 ರೂಪಾಯಿ 5 ಪೈಸೆಯಂತೆ ವೆಚ್ಚವಾಗುತ್ತದೆ. ಸ್ಥಳೀಯ ಎಸ್‌ಎಂಎಸ್‌ಗೆ 1 ರೂಪಾಯಿ ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ ಗೆ 1.5 ರೂಪಾಯಿ ವೆಚ್ಚವಾಗಲಿದೆ.

109 ರೂಪಾಯಿ ರೀಚಾರ್ಜ್​ ಪ್ಲ್ಯಾನ್​​:- ಈ ರೀಚಾರ್ಜ್‌ನೊಂದಿಗೆ, ನೀವು 99 ಟಾಕ್-ಟೈಮ್ ಮತ್ತು 200ಎಮ್​ಬಿ ಮೊಬೈಲ್ ಡೇಟಾವನ್ನು ಬಳಸಬಹುದಾಗಿದೆ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2 ರೂಪಾಯಿ5 ಪೈಸೆ ವೆಚ್ಚವಾಗುತ್ತದೆ. ಸ್ಥಳೀಯ ಎಸ್‌ಎಂಎಸ್‌ಗೆ 1 ರೂಪಾಯಿ ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂಪಾಯಿ ವೆಚ್ಚವಾಗುತ್ತದೆ.ಈ ಯೋಜನೆಯು 30 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

ಏರ್​​ಟೆಲ್​ನ 99 ರೂಪಾಯಿ ರೀಚಾರ್ಜ್​ ಪ್ಲ್ಯಾನ್​​:- ಏರ್‌ಟೆಲ್ ನ 99 ರೂಪಾಯಿ ಯೋಜನೆಯು ಒಟ್ಟು 28 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ . ಈ ರೀಚಾರ್ಜ್‌ನೊಂದಿಗೆ, ನೀವು 99 ರೂಪಾಯಿಯಷ್ಟು ಟಾಕ್-ಟೈಮ್ ಮತ್ತು 200 ಎಮ್​ಬಿಯಷ್ಟು ಮೊಬೈಲ್ ಡೇಟಾವನ್ನು ಬಳಸಬಹುದಾಗಿದೆ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2 ರೂಪಾಯಿ 5 ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್‌ಎಂಎಸ್‌ಗೆ 1 ರೂಪಾಯಿ ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂಪಾಯಿ ವೆಚ್ಚವಾಗುತ್ತದೆ.

ಏರ್​ಟೆಲ್​ ಟೆಲಿಕಾಂ ಕಂಪೆನಿ ಈ ಹಿಂದೆಯೂ ಹಲವಾರು ಅಗ್ಗದ ರೀಚಾರ್ಜ್​ ಪ್ಲ್ಯಾನ್​ಗಳನ್ನು ಪರಿಚಯಿಸಿದೆ. ಸದ್ಯ ದೇಶದಾದ್ಯಂತ 5ಜಿ ನೆಟ್ವರ್ಕ್ ಅನ್ನು ಪಸರಿಸಿ, ಇನ್ನೇನು ಕೆಲವೇ ದಿನಗಳಲ್ಲಿ ಏರ್​ಟೆಲ್​ನಿಂದ 5ಜಿ ರೀಚಾರ್ಜ್​ ಪ್ಲ್ಯಾನ್​ಗಳು ಸಹ ಬಿಡುಗಡೆಯಾಗಲಿದೆ.

Leave A Reply

Your email address will not be published.