White Pumpkin: ಬಿಳಿ ಸಿಹಿಕುಂಬಳಕಾಯಿ ಎಂದಾದರೂ ತಿಂದಿದ್ದೀರಾ ? ಇದರಲ್ಲಿ ಇರುವ ಆರೋಗ್ಯ ಪ್ರಯೋಜನ ಎಷ್ಟಿದೆ ಗೊತ್ತಾ?

ಕುಂಬಳಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕುಂಬಳಕಾಯಿಯು ವಿವಿಧ ರೀತಿಯ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಹೊಂದಿದೆ, ಇದು ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಸಿಹಿಗುಂಬಳಕಾಯಿ ಬಿಳಿ ಮತ್ತು ಹಳದಿ ಬಣ್ಣಗಳಲ್ಲಿರುತ್ತದೆ. ಇಲ್ಲಿ ಬಿಳಿ ಸಿಹಿಕುಂಬಳಕಾಯಿಯ ಬಗ್ಗೆ ತಿಳಿಸಲಾಗಿದೆ ಇದರಲ್ಲಿನ ಪೋಷಕಾಂಶಗಳ ಸಮೃದ್ಧತೆಯ ಬಗ್ಗೆ ತಿಳಿದುಕೊಳ್ಳೋಣ. ಈ ಬಿಳಿ ಸಿಹಿಗುಂಬಳಕಾಯಿಯಲ್ಲಿ ಕಬ್ಬಿಣ, ರಂಜಕ, ಮೆಗ್ನೀಸಿಯಮ್, ನಿಯಾಸಿನ್, ಥಯಾಮಿನ್ ಮತ್ತು ಫೋಲೇಟ್ ಮುಂತಾದ ಖನಿಜಗಳು ಕಂಡುಬರುತ್ತವೆ.

ಆದರೆ ಹೆಚ್ಚಿನ ಜನರಿಗೆ ಕುಂಬಳಕಾಯಿ ಇಷ್ಟವಾಗೋದಿಲ್ಲ. ಕುಂಬಳಕಾಯಿ ಅಡುಗೆ ಮಾಡಿದಾಗ ಯಾಕಮ್ಮಾ ಇದನ್ನು ಮಾಡಿದೆ ಎಂದು ಕೇಳುವ ಒಬ್ಬರಾದರೂ ಮನೆಯಲ್ಲಿ ಇರುತ್ತಾರೆ. ಆದರೆ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಕೇಳಿದ್ರೆ ಖಂಡಿತಾ ಅದನ್ನ ಎಲ್ಲರೋ ಇಷ್ಟ ಪಡ್ತಾರೆ. ಆಸಕ್ತಿದಾಯಕ ವಿಷಯವೆಂದರೆ, ವಯಸ್ಸು ಹೆಚ್ಚಾದಂತೆ, ನಿಮ್ಮ ಆರೋಗ್ಯಕ್ಕೆ ಕುಂಬಳಕಾಯಿ ( pumpkin) ತುಂಬಾನೆ ಪ್ರಯೋಜನ ಇದೆ.

ಕುಂಬಳಕಾಯಿ ಸೇವನೆ ಪ್ರಯೋಜನಗಳು :

  • ಅಸ್ತಮಾದಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರದಲ್ಲಿ ಬಿಳಿ ಕುಂಬಳಕಾಯಿಯನ್ನು ಸೇರಿಸಿಕೊಳ್ಳಬೇಕು. ಉತ್ಕರ್ಷಣ ನಿರೋಧಕಗಳು ಈ ತರಕಾರಿಯಲ್ಲಿ ಕಂಡುಬರುತ್ತವೆ. ಇದು ಉಸಿರಾಟದ ವ್ಯವಸ್ಥೆಯಲ್ಲಿ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ವಿಟಮಿನ್ ಎ ಬಿಳಿ ಕುಂಬಳಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ರಾತ್ರಿ ಕುರುಡುತನ ಹೊಂದಿರುವವರಿಗೆ ಇದು ಪರಿಹಾರದ ಮೂಲವಾಗಿದೆ.
  • ಕೀಲು ನೋವಿನಿಂದ ಬಳಲುತ್ತಿರುವವರಿಗೆ ಬಿಳಿ ಕುಂಬಳಕಾಯಿಯು ಪರಿಹಾರದ ಮೂಲವಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಪ್ರತಿದಿನ ಬೆಳಗ್ಗೆ ಎದ್ದು ಈ ಕುಂಬಳಕಾಯಿಯ ರಸವನ್ನು ಕುಡಿಯಿರಿ. ಕೆಲವೇ ದಿನಗಳಲ್ಲಿ ನೀವು ಕೀಲು ನೋವಿನಿಂದ ಪರಿಹಾರವನ್ನು ಪಡೆಯುತ್ತೀರಿ
  • ಕುಂಬಳಕಾಯಿ ಕ್ಯಾನ್ಸರ್ ನಲ್ಲಿ ಪ್ರಯೋಜನಕಾರಿ. ಇದನ್ನ ತಿನ್ನೋದ್ರಿಂದ ಕ್ಯಾನ್ಸರ್ ನ ಅಪಾಯಕಾರಿ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಕುಂಬಳಕಾಯಿಯಲ್ಲಿರುವ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತವೆ. ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಇದು ತುಂಬಾ ಪ್ರಯೋಜನಕಾರಿ.
  • ನೀವು ಒತ್ತಡ ಅಥವಾ ಆತಂಕ ಸಮಸ್ಯೆಯಿಂದ ಬಳಲುತ್ತಿದ್ರೆ ನಿಮ್ಮ ಆಹಾರದಲ್ಲಿ ಕುಂಬಳಕಾಯಿ ಸೇರಿಸಿ. ಕುಂಬಳಕಾಯಿ ಖಿನ್ನತೆ-ಶಮನಕಾರಿ ಗುಣಲಕ್ಷಣಗಳನ್ನು ಸಹ ಹೊಂದಿದೆ.

ಈ ಎಲ್ಲಾ ಗುಣಗಳಿರುವ ಬಿಳಿ ಕುಂಬಳಕಾಯಿಯನ್ನು ಸೇವಿಸುವುದರ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.