SBI ಗ್ರಾಹಕರೇ ಗಮನಿಸಿ: ATM ಗೆ ಹೋಗೋ ಅಗತ್ಯನೇ ಇಲ್ಲ, ಮನೆಯಲ್ಲೇ ಹಣ ವಿತ್ ಡ್ರಾ ಮಾಡಿ
ಹೇಳಿ ಕೇಳಿ ಇದು ಡಿಜಿಟಲ್ ಯುಗ..ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬಸಾಧನದ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಬ್ಯಾಂಕ್ ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಎಲ್ಲ ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಇದೀಗ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಹೌದು!! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹೊಸ ಸೇವೆಗಳನ್ನ ಪರಿಚಯಿಸುತ್ತಿದೆ. ಈಗ ನಿಮ್ಮ ಸುತ್ತಲಿನ ಎಟಿಎಂಗಳ ಬಗ್ಗೆ ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಮೊಬೈಲ್ನಲ್ಲಿ UPI ಕಾರ್ಯನಿರ್ವಹಿಸದಿದ್ದರೆ ಏನು ಮಾಡೋದು ಅಂತ ಟೆನ್ಶನ್ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ!! ಯಾಕೆ ಅಂತೀರಾ??
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನೇಕ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿವೆ. ಇದೀಗ , ನೀವು ಮನೆಯಲ್ಲಿ ಕುಳಿತು ಹಣವನ್ನ ಹಿಂಪಡೆಯಲು ಕೂಡ ಅವಕಾಶ ಕಲ್ಪಿಸಲಾಗಿದೆ. ಅರೇ, ಇದು ಹೇಗೆ?? ಅಂತ ಚಿಂತಿಸುವವರು ಈ ಮಾಹಿತಿ ತಿಳಿದುಕೊಳ್ಳವುದು ಒಳ್ಳೆಯದು.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐನ ಮನೆ ಬಾಗಿಲಿನ ಸೇವೆಯ ನೆರವಿನಿಂದ ನೀವು ನಿಮ್ಮ ಮನೆಯ ಸೌಕರ್ಯದಿಂದ ಸುಲಭವಾಗಿ ಹಾಗೂ ಸರಳವಾಗಿ ಹಣವನ್ನ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ನೀವು ಬ್ಯಾಂಕ್ ಅಥವಾ ಎಟಿಎಂಗೆ ತೆರಳಬೇಕಾದ ಅಗತ್ಯವಿಲ್ಲ. ಈ ಸೇವೆಯು ವಿಶೇಷವಾಗಿ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಹೆಚ್ಚು ಪ್ರಯೋಜನ ಕಾರಿಯಾಗಿದೆ. ಈ ಸೌಲಭ್ಯವನ್ನ ಬಳಸುವುದಕ್ಕಾಗಿ ಬ್ಯಾಂಕ್ ಗ್ರಾಹಕರಿಗೆ ಕೆಲವು ಶುಲ್ಕಗಳನ್ನು ವಿಧಿಸುತ್ತದೆ. ಎಸ್ಬಿಐ ತನ್ನ ಗ್ರಾಹಕರಿಗಾಗಿ ಎಸ್ಬಿಐ ಡೋರ್ಸ್ಟೆಪ್ ಸೇವೆಯನ್ನೂ ತಂದಿದ್ದು, ನಿಮ್ಮ ಹತ್ತಿರವಿರುವ ಎಟಿಎಂಗಳೊಂದಿಗೆ, ನೀವು ಮನೆ ಬಾಗಿಲಿನ ಸೇವೆಯ ಮೂಲಕ ನಿಮ್ಮ ಮನೆಯ ಸೌಕರ್ಯದಿಂದ ಹಣವನ್ನು ಹಿಂಪಡೆಯುವ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ಕೆಲವು ಪ್ರಕ್ರಿಯೆಗಳನ್ನೂ ಮಾಡಬೇಕಾದ ಅವಶ್ಯಕತೆ ಇದೆ.
ಎಸ್ಬಿಐ ಡೋರ್ಸ್ಟೆಪ್ ಸೇವಾ ನೋಂದಣಿ ಮಾಡುವ ಪ್ರಕ್ರಿಯೆ ಹೇಗೆ? ಎಂಬ ಮಾಹಿತಿ ಇಲ್ಲಿದೆ.
ಎಸ್ಬಿಐ ಡೋರ್ಸ್ಟೆಪ್ ಸೇವಾ ನೋಂದಣಿ ಇಲ್ಲವೇ ಹಣವನ್ನು ಹಿಂಪಡೆಯಲು ಜೊತೆಗೆ ಈ ಸೌಲಭ್ಯವನ್ನ ಬಳಸಲು ನೀವು ಮೊದಲು SBI ಡೋರ್ಸ್ಟೆಪ್ ಸೇವೆಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಮೊದಲು ನೀವು ಡೋರ್ಸ್ಟೆಪ್ ಬ್ಯಾಂಕಿಂಗ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕಾಗಿದ್ದು ಬಳಿಕ ಮೊಬೈಲ್ ಸಂಖ್ಯೆಯನ್ನ ನಮೂದಿಸಬೇಕು. ನಿಮ್ಮ ನೋಂದಾಯಿತ ಮೊಬೈಲ್ನಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿದ ಬಳಿಕ ಗ್ರಾಹಕರು ತಮ್ಮ ಹೆಸರು, ಇಮೇಲ್, ಪಾಸ್ವರ್ಡ್ (ಪಿನ್) ಅನ್ನು ನಮೂದಿಸಬೇಕು ಮತ್ತು ಷರತ್ತನ್ನು ಒಪ್ಪಿಕೊಂಡ ಬಳಿಕ ನೋಂದಣಿಯಾಗುತ್ತದೆ.
ಈ ಪ್ರಕ್ರಿಯೆ ಬಳಿಕ DSB ಅಪ್ಲಿಕೇಶನ್ನಿಂದ ಸಂದೇಶ ಸ್ವೀಕರಿಸಲಾಗುತ್ತದೆ. ಈಗ ಗ್ರಾಹಕರು ಪಿನ್, ಇತರ ವಿವರಗಳೊಂದಿಗೆ ಅಪ್ಲಿಕೇಶನ್ಗೆ ಲಾಗಿನ್ ಮಾಡಬಹುದಾಗಿದ್ದು ಇಲ್ಲಿ ನೀವು ನಿಮ್ಮ ವಿಳಾಸವನ್ನು ಸಹ ನಮೂದಿಸಬೇಕು.
SBI ಡೋರ್ಸ್ಟೆಪ್ ಬ್ಯಾಂಕಿಂಗ್ನಿಂದ ಹಣವನ್ನು ಹಿಂಪಡೆಯುವ ಪ್ರಕ್ರಿಯೆಗೆ ಈ ಸರಳ ವಿಧಾನಗಳನ್ನು ಅನುಸರಿಸಿ:
DSB ಅಪ್ಲಿಕೇಶನ್ಗೆ ಲಾಗ್ ಇನ್ ಮಾಡಿದ ನಂತರ ಹಣವನ್ನು ಹಿಂಪಡೆಯಲು SBI ಆಯ್ಕೆಮಾಡಬೇಕು. ಆ ಬಳಿಕ ಗ್ರಾಹಕರ ಖಾತೆ ಸಂಖ್ಯೆಯ ಕೊನೆಯ ಆರು ಅಂಕೆಗಳನ್ನು ನಮೂದಿಸಿಕೊಂಡು ಸಲ್ಲಿಸಬೇಕು. ಪರಿಶೀಲನೆಯ ನಂತರ OTP ಗ್ರಾಹಕರ ಮೊಬೈಲ್ಗೆ ರವಾನೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಬಳಿಕ ಡೋರ್ಸ್ಟೆಪ್ ಬ್ಯಾಂಕಿಂಗ್ ಮೊಬೈಲ್ ಅಪ್ಲಿಕೇಶನ್ನಲ್ಲಿ OTP ಅನ್ನು ನಮೂದಿಸಿ ಮತ್ತು ಸಲ್ಲಿಸಬೇಕು. ದೃಢೀಕರಣದ ನಂತರ ನಿಮ್ಮ ವಿವರಗಳು ಕಾಣಿಸುತ್ತವೆ.
ಕೊನೆಗೆ ಗ್ರಾಹಕರ ಖಾತೆಯಿಂದ ಹಣ ಹಿಂಪಡೆಯುವ ಸೇವೆಯನ್ನು ಆಯ್ಕೆ ಮಾಡಿಕೊಂಡು ವಹಿವಾಟಿನ ಮೊತ್ತವನ್ನ ನಮೂದಿಸಿಕೊಂಡು ವಹಿವಾಟು ಮೋಡ್ ನಮೂದಿಸಬೇಕು. ಈ ಬಳಿಕ ಗ್ರಾಹಕರ ಖಾತೆಯಿಂದ ಶುಲ್ಕವನ್ನು ಕಡಿತ ಮಾಡಲಾಗುತ್ತದೆ. ಆಗ ವಿನಂತಿ ಸಂಖ್ಯೆಯನ್ನು ನಮೂದಿಸಬೇಕಾಗಿದ್ದು ಗ್ರಾಹಕರು SMS ಮೂಲಕ ಅಧಿಸೂಚನೆಯನ್ನು ಸ್ವೀಕರಿಸುತ್ತಾರೆ. ಗ್ರಾಹಕರ ಮನೆಗೆ ತಲುಪಿದ ಬಳಿಕ ಪರಿಶೀಲನೆಯ ನಂತರ ಏಜೆಂಟ್ ಬಂದು ಹಣವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.
ಅಂಗವಿಕಲರಿಗೆ ಒಂದು ತಿಂಗಳಲ್ಲಿ ಬ್ಯಾಂಕ್ ಮೂರು ವಹಿವಾಟುಗಳನ್ನು ಉಚಿತವಾಗಿ ಒದಗಿಸಿಕೊಟ್ಟಿದೆ. ಹೀಗಿದ್ದರೂ ಕೂಡ ಅವರು ಈ ಸೌಲಭ್ಯವನ್ನು ತಿಂಗಳಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಬಳಕೆ ಮಾಡಿದ್ದಲ್ಲಿ ಅವರು ಹಣಕಾಸು ಮತ್ತು ಹಣಕಾಸೇತರ ಸೇವೆಗಳಿಗೆ ರೂ.75 ಮತ್ತು ಜಿಎಸ್ಟಿಯನ್ನು ಪಾವತಿ ಮಾಡಬೇಕಾಗುತ್ತದೆ.