ಪ್ರಯಾಣ ಮಾಡುವಾಗ ಬಿಪಿ ಲೋ ಆಗುವ ಸಮಸ್ಯೆ ಕಂಡು ಬಂದರೆ ಈ ರೀತಿ ಮಾಡಿ

ಪ್ರಯಾಣಿಸುವ ವೇಳೆ ಕೆಲವರಿಗೆ ಹೊಟ್ಟೆ ತೊಳೆಸಿದ ಅನುಭವವಾಗುತ್ತವೆ. ಮತ್ತೆ ಕೆಲವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡುತ್ತದೆ. ಕೆಲವೊಮ್ಮೆ ದೇಹದಲ್ಲಿ ರಕ್ತದ ಒತ್ತಡ ಕೆಳಹದಿಗೆ ಬಂದು ನಿಂತಿರುತ್ತದೆ. ಹೀಗೆ ಆಕಸ್ಮಾತ್ ಟ್ರಾವೆಲ್ ಮಾಡುವಾಗ ಬಿಪಿ ಲೋ ಆದರೆ ಏನು ಮಾಡೋದು ಎನ್ನುವ ಚಿಂತೆ ಕಾಡೋದು ಸಹಜ.ಆದ್ರೆ ಬಿಪಿ ಲೋ ಆದಾಗ ಈ ಸರಳ ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಿ!!!


ವೈದ್ಯಕೀಯ ಭಾಷೆಯಲ್ಲಿ ಹೈಪೋಟೆಂಶನ್ ಎಂದು ಕರೆಸಿಕೊಳ್ಳುವ ಲೋ ಬಿಪಿ ಇದ್ದಕ್ಕಿಂದ್ದಂತೆ ಏಕೆ ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಗಮನಿಸಿದರೆ, ಕೆಟ್ಟ ಜೀವನಶೈಲಿ, ಸರಿಯಾಗಿ ನಿದ್ದೆ ಮಾಡದೇ ಇರುವುದು, ಆರೋಗ್ಯಕಾರಿ ಆಹಾರ ಸೇವನೆ ಮಾಡದೇ ಇರುವುದು, ಈ ಕಾಯಿಲೆಗೆ ಪ್ರಮುಖ ಕಾರಣ ಎಂಬುದು ಬಲ್ಲವರ ಅಭಿಪ್ರಾಯ. ಬಿಪಿ ಅಥವಾ ರಕ್ತದ ಒತ್ತಡದ ವಿಷಯದಲ್ಲಿ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ಇಲ್ಲವೇ ಹೈಬಿಪಿ ಸಮಸ್ಯೆಯಂತೆ ಬಳಲುತ್ತಿರುವ ಜನರಂತೆ ಕಡಿಮೆ ರಕ್ತದ ಒತ್ತಡ ಅಥವಾ ಲೋ ಬಿಪಿ ಜನರೂ ಸಹ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹೀಗಾಗಿ, ಅಧಿಕ ರಕ್ತದೊತ್ತಡದಷ್ಟು ಅಪಾಯಕಾರಿಯಲ್ಲವೆಂದು ಎನಿಸಿದರೂ ಕೂಡ ಲೋ ಬಿಪಿ ನಿರ್ಲಕ್ಯ ಮಾಡುವ ಕಾಯಿಲೆಯಂತು ಅಲ್ಲ.

ಲೋ ಬಿಪಿಯ ಲಕ್ಷಣಗಳು
ಕಣ್ಣು ಇದ್ದಕ್ಕಿದ್ದಂತೆ ಮಂಜಾಗುವುದು, ಇದ್ದಕ್ಕಿದ್ದಂತೆ ತಲೆಸುತ್ತು ಕಾಣಿಸಿಕೊಳ್ಳುವುದು, ಪದೇ ಪದೇ ದಣಿವು, ಆಯಾಸ ಆಗುವ ಇಲ್ಲವೇ ಕೈ ನಡುಕ ಶುರುವಾಗುವುದು. ಕೂತಲ್ಲಿಂದ ಒಂದೇ ಸಲಕ್ಕೆ ಎದ್ದಾಗ ತಲೆಸುತ್ತು ಬಂದಂತೆ ಆಗುವುದು. ಈ ರೀತಿಯ ಲಕ್ಷಣಗಳು ಲೋ ಬಿಪಿ ಉಂಟಾದಾಗ ಕಂಡುಬರುತ್ತವೆ. ಪ್ರಯಾಣಿಸುವ ವೇಳೆ ಇದ್ದಕ್ಕಿಂದ್ದಂತೆ ಲೋ ಬಿಪಿ ಉಂಟಾದಾಗ ಏನು ಮಾಡಬಹುದು?? ಅಂತ ಚಿಂತಿಸುತ್ತಿದ್ದರೆ, ಕೆಳಗೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಿ.

ರೋಸ್ಮರಿ ಆಯಿಲ್ ಇಟ್ಟುಕೊಂಡಿರಿ
ಒಂದು ವೇಳೆ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ, ಬಿಪಿ ಲೋ ಆಗುವಂತೆ ಭಾಸವಾದರೆ, ಕೂಡಲೇ, ಈ ರೋಸ್ಮರಿ ಎಣ್ಣೆಯನ್ನು ಅಂಗೈಯಲ್ಲಿ ಹಾಕಿಕೊಂಡು ಮೂಗಿನ ಬಳಿ ತಂದು ಕೊಳ್ಳಬೇಕು. ಆ ಬಳಿಕ ದೀರ್ಘವಾಗಿ ಉಸಿರನ್ನು ಒಳಗೆ ಎಳೆದುಕೊಳ್ಳಿ. ಐದು ಹತ್ತು ನಿಮಿಷದಲ್ಲಿಯೇ ರಕ್ತದೊತ್ತಡ ಸಹಜ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಗಿಡಮೂಲಿಕೆ ಅಂಶಗಳನ್ನು ಹೊಂದಿರುವ ಎಸೆನ್ಶಿಯಲ್ ತೈಲಗಳು ಸಾರಭೂತ ಎಣ್ಣೆಗಳು, ಮನುಷ್ಯ ಆರೋಗ್ಯಕ್ಕೆ ಬಹಳ ಉತ್ತಮವಾಗಿದ್ದು, ರೋಸ್ಮರಿ ಎಸೆನ್ಶಿಯಲ್ ಆಯಿಲ್ ಈ ಎಲ್ಲ ಅಂಶಗಳನ್ನು ಒಳಗೊಂಡಿವೆ. ಪ್ರಮುಖವಾಗಿ ಈ ಎಣ್ಣೆಯಲ್ಲಿ ಕರ್ಪೂರದ ಅಂಶ ಯಥೇಚ್ಛವಾಗಿ ಕಂಡು ಬರುವ ಹಿನ್ನೆಲೆ ಇದ್ದಕ್ಕಿಂದಂತೆ ಕಂಡು ಬರುವ ಲೋ ಬಿಪಿ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ನೆರವಾಗುತ್ತದೆ.

ತುಳಸಿ ಎಲೆ
ಪ್ರತಿದಿನ ನೀವು ಪ್ರಯಾಣ ಮಾಡುವವರಾಗಿದ್ದಲ್ಲಿ, ಬೆಳಗ್ಗೆ ಎದ್ದ ಕೂಡಲೇ ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು-ನಾಲ್ಕು ತುಳಸಿ ಎಲೆಗಳನ್ನು ಜಿಗಿದು, ಅದರ ರಸವನ್ನು ನಿಧಾನಕ್ಕೆ ಹೀರುವುದು ಒಳ್ಳೆಯದು. ತುಳಸಿ ಎಲೆಗಳಲ್ಲಿ ಮೆಗ್ನೀಷಿಯಂ ಹಾಗೂ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಮನುಷ್ಯನಲ್ಲಿ ಸಡನ್ ಆಗಿ ಕಂಡುಬರುವ ಲೋ ಬಿಪಿ ಸಮಸ್ಯೆಯನ್ನು ನಿಯಂತ್ರಣ ಮಾಡುವಲ್ಲಿ ತುಳಸಿ ಎಲೆಗಳು ಮಹತ್ತರ ಪಾತ್ರ ವಹಿಸುತ್ತವೆ. ದಿನವೂ ತುಳಸಿ ಎಲೆಗಳನ್ನು ಸೇವಿಸುತ್ತಾ ಬಂದರೆ ಲೋ ಬಿಪಿ ಸಮಸ್ಯೆ ಬಹಳ ಬೇಗನೇ ನಿವಾರಣೆಯಾಗುತ್ತದೆ.

ಉಪ್ಪಿನಾಂಶ ಇರುವ ತಿಂಡಿ, ಸದಾ ಇರಲಿ
ಸಡನ್ ಆಗಿ ಬಿಪಿ ಲೋ ಆಗಿಬಿಟ್ಟಲ್ಲಿ ಕೂಡಲೇ ಉಪ್ಪಿನಾಂಶ ಇರುವ ಆಹಾರಗಳನ್ನು ಸೇವನೆ ಮಾಡಿ ( ಉದಾಹರಣೆಗೆ ಸಾಲ್ಟ್ ಚಿಪ್ಸ್, ಅಥವಾ ಇತರ ಉಪ್ಪಿನಾಂಶ ಇರುವ ತಿಂಡಿಗಳು) ಇಲ್ಲದಿದ್ದರೆ ಉಪ್ಪಿನಕಾಯಿ ಸೇವಿಸಬಹುದು. ಹೀಗಾಗಿ ಪ್ರಯಾಣ ಮಾಡುವ ಸಮಯದಲ್ಲಿ ನಿಮ್ಮ ಬ್ಯಾಗಿನಲ್ಲಿ ಉಪ್ಪಿನಾಂಶ ಇರುವ ಬಿಸ್ಕೆಟ್ ಅಥವಾ ಸಾಲ್ಟ್ ಚಿಪ್ಸ್ ಇಟ್ಟುಕೊಳ್ಳುವದು ಉತ್ತಮ.

ಉಪ್ಪಿನಲ್ಲಿ ಸೋಡಿಯಂ ಹಾಗೂ ಕ್ಲೋರೈಡ್ ಎಂಬ ಎರಡು ಸಂಯುಕ್ತ ಅಂಶಗಳು ಅಗಾಧ ಪ್ರಮಾಣದಲ್ಲಿ ಸಿಗುವುದರಿಂದ, ಅರ್ಧ ಟೀ ಚಮಚದಷ್ಟು ಉಪ್ಪನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಚೆನ್ನಾಗಿ ಕದಡಿ ಕುಡಿದಾಗ ಕೂಡ ರಕ್ತದ ಒತ್ತಡ ಸಾಮಾನ್ಯ ಸ್ಥಿತಿಗೆ ಮರಳಲು ನೆರವಾಗುತ್ತದೆ.

Leave A Reply

Your email address will not be published.