Hair care tips : ನಿಮ್ಮ ಕೇಶರಾಶಿಗೆ ಹೇರ್ ಕಂಡಿಷನರ್ ಅಪ್ಲೈ ಮಾಡುವಾಗ ಈ ವಿಷಯಗಳು ಗಮನದಲ್ಲಿರಲಿ
ಮುಖದ ಸೌಂದರ್ಯ ಮಾತ್ರವಲ್ಲ ಕೂದಲು ಕೂಡ ಚೆನ್ನಾಗಿ ಹೊಳೆಯುತ್ತಿದ್ದರೆ, ಮುಖಕ್ಕೆ ಕಳೆ ಬರುತ್ತದೆ. ಪ್ರತಿಯೊಬ್ಬರೂ ತಮ್ಮ ಕೇಶರಾಶಿ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ನಾನಾ ರೀತಿಯಲ್ಲಿ ಆರೈಕೆ ಮಾಡುತ್ತಾರೆ. ಕೂದಲ ಆರೈಕೆಗಾಗಿ ಹಲವರು ಹೇರ್ ಕಂಡಿಷನರ್ ಅನ್ನು ಬಳಸುತ್ತಾರೆ. ಕೂದಲ ಆರೈಕೆಯಲ್ಲಿ ಹೇರ್ ಕಂಡೀಶನರ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಇದನ್ನು ತಪ್ಪಾಗಿ ಬಳಸಿದರೆ ಕೂದಲಿಗೆ ಹಾನಿಯುಂಟಾಗುವುದು ಖಚಿತ!!. ಅದಕ್ಕೆ ಹೇರ್ ಕಂಡಿಷನರ್ ಅಪ್ಲೈ ಮಾಡುವಾಗ ಕೆಲವು ವಿಷಯಗಳ ಬಗ್ಗೆ ತಿಳಿದಿರಲಿ.
ಇತ್ತೀಚೆಗೆ ಶಾಂಪೂಗಳ ಬಳಕೆ ಹೆಚ್ಚಾಗಿದೆ. ಆದರೆ, ಕೂದಲಿಗೆ ಶಾಂಪೂ ಹಚ್ಚಿದ ಬಳಿಕ ಕೆಲವರು ಕಂಡಿಷನರ್ ಅನ್ನು ಬಳಸುವುದಿಲ್ಲ. ಹೇರ್ ಕಂಡಿಷನರ್ ಕೂದಲನ್ನು ಸ್ವಚ್ಛಗೊಳಿಸುವ ಮತ್ತು ಪೋಷಿಸುವ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೆ, ಹೇರ್ ಕಂಡಿಷನರ್ ಅನ್ನು ಸರಿಯಾದ ರೀತಿಯಲ್ಲಿ ಅಪ್ಲೈ ಮಾಡುವುದು ಕೂಡ ಅಗತ್ಯವಾಗಿದೆ. ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಕೂದಲು ಚೆನ್ನಾಗಿ, ಸದೃಢವಾಗಿರುತ್ತದೆ. ಹೇಗೆ ಬಳಸಬೇಕು ಎಂಬುದು ಇಲ್ಲಿದೆ.
√ ಕೆಲವರು ತಮ್ಮ ತಲೆಕೂದಲಿಗೆ ಶಾಂಪೂ ಹಾಕದೇ ನೇರವಾಗಿ ಕಂಡಿಷನರ್ ಅನ್ನು ಬಳಸುತ್ತಾರೆ. ಆದರೆ, ಇದು ನಿಮ್ಮ ಕೂದಲಿಗೆ ಹಾನಿಯುಂಟು ಮಾಡಬಹುದು. ಹಾಗಾಗಿ ಮೊದಲು ಶಾಂಪೂ ಹಾಕಿ, ನಂತರವೇ ಕಂಡಿಷನರ್ ಅಪ್ಲೈ ಮಾಡಿ. ಇದರಿಂದ ಕೂದಲಿಗೆ ಯಾವುದೇ ತೊಂದರೆ ಉಂಟಾಗೋದಿಲ್ಲ.
√ ನೀವು ಕೂದಲಿಗೆ ಕಂಡಿಷನರ್ ಅನ್ನು ಅಪ್ಲೈ ಮಾಡುವಾಗ ಕೇಶರಾಶಿಯ ಬುಡಕ್ಕೆ ಹಚ್ಚಬೇಡಿ. ಯಾವಾಗಲೂ ಕಂಡಿಷನರ್ ಅನ್ನು ಕೂದಲಿನ ಮಧ್ಯದಿಂದ ತುದಿಯವರೆಗೆ ಅಪ್ಲೈ ಮಾಡಬೇಕು. ಇದು ನೀವು ನೆನಪಿಟ್ಟುಕೊಳ್ಳಬೇಕಾದ ಎರಡನೇ ವಿಚಾರ.
√ ಕೂದಲಿಗೆ ಕಂಡಿಷನರ್ ಅಪ್ಲೈ ಮಾಡಿದ ನಂತರ ದೀರ್ಘಕಾಲ ಹಾಗೆಯೇ ಬಿಡುವುದು ಒಳ್ಳೆಯದಲ್ಲ. ಆದರೆ ಕಂಡಿಷನರ್ ಅಪ್ಲೈ ಮಾಡಿ ತಕ್ಷಣ ಹೇರ್ ವಾಶ್ ಮಾಡಬೇಡಿ. ಬದಲಾಗಿ ನೀವು ಕೂದಲಿಗೆ ಕಂಡಿಷನರ್ ಅಪ್ಲೈ ಮಾಡಿ, ಒಂದೆರಡು ನಿಮಿಷಗಳ ನಂತರ ಹೇರ್ ವಾಶ್ ಮಾಡಿ. ಇದು ಕೂದಲಿಗೆ ಪ್ರಯೋಜನಕಾರಿ ಆಗಿದೆ.
√ ನೀವು ಕೂದಲಿಗೆ ಕಂಡಿಷನರ್ ಬಳಸುವ ಮುನ್ನ ಆ ಕಂಡಿಷನರ್ ನಿಮ್ಮ ಕೂದಲಿಗೆ ಸೂಕ್ತವಾದುದೇ ಎಂದು ತಿಳಿದುಕೊಂಡು ಆ ನಂತರವೇ ಬಳಸಿ. ಇನ್ನೂ, ತೆಳ್ಳನೆಯ ಕೂದಲಿಗೆ ಸೌಮ್ಯವಾದ ಕಂಡಿಷನರ್, ಗುಂಗುರು ಕೂದಲಿಗೆ ಸ್ಟ್ರಾಂಗ್ ಕಂಡಿಷನರ್ ಬಳಸುವುದು ಸೂಕ್ತವಾದುದು. ಕೆಲವರು ಶಾಂಪೂ ಮತ್ತು ಕಂಡಿಷನರ್ ಎರಡನ್ನೂ ಒಟ್ಟಿಗೆ ಬಳಸುತ್ತಾರೆ. ಆದರೆ, ಹೀಗೆ ಬಳಸಬಾರದು. ಎರಡನ್ನೂ ಒಟ್ಟಿಗೆ ಬಳಸಿದರೆ ಕೂದಲಿಗೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ.