Canara Bank ಡೆಬಿಟ್ ಕಾರ್ಡ್ ಸೇವಾ ಶುಲ್ಕ ಏರಿಕೆ!

ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ.

ಖಾಸಗಿ ವಲಯದ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಡಿಸೆಂಬರ್ ನಲ್ಲಿ ದೈನಂದಿನ ಡೆಬಿಟ್ ಕಾರ್ಡ್ ಮಿತಿಯನ್ನು ಹೆಚ್ಚಳ ಮಾಡಿದ್ದು ಇದೀಗ ಬ್ಯಾಂಕ್ ಮತ್ತೊಂದು ಬದಲಾವಣೆಯನ್ನು ಮಾಡಿದೆ. ಹೌದು! ಬ್ಯಾಂಕ್ ಡೆಬಿಟ್ ಕಾರ್ಡ್ ಸೇವಾ ಶುಲ್ಕವನ್ನು ಹೆಚ್ಚಿಸಿದೆ. ಬ್ಯಾಂಕ್‌ನ ವೆಬ್‌ಸೈಟ್ ಅನುಸಾರ , ನೂತನ ಡೆಬಿಟ್ ಕಾರ್ಡ್ ಸೇವಾ ಶುಲ್ಕವು 2023ರ ಫೆಬ್ರವರಿ 13ರಿಂದ ಜಾರಿಗೆ ಬರಲಿದ್ದು, ವಾರ್ಷಿಕ ಶುಲ್ಕ, ಕಾರ್ಡ್ ಬದಲಾವಣೆ ಶುಲ್ಕ, ಡೆಬಿಟ್ ಕಾರ್ಡ್ ನಿಷ್ಟ್ರೀಯಗೊಳಿಸುವ ಶುಲ್ಕ, ಎಸ್‌ಎಂಎಸ್ ಅಲರ್ಟ್ ಶುಲ್ಕ ಸೇರಿದಂತೆ ಬ್ಯಾಂಕ್ ಹಲವಾರು ಶುಲ್ಕಗಳನ್ನು ಹೆಚ್ಚಿಸಲಾಗಿದೆ.

ವಾರ್ಷಿಕ, ಕಾರ್ಡ್ ಬದಲಾವಣೆ ಶುಲ್ಕ ಎಷ್ಟಿದೆ?
ಡೆಬಿಟ್ ಕಾರ್ಡ್ ಅನ್ನು ಬದಲಾವಣೆ ಮಾಡುವ ಶುಲ್ಕವನ್ನು ಕೆನರಾ ಬ್ಯಾಂಕ್ ಹೆಚ್ಚಿಸಿದ್ದು, ಕ್ಲಾಸಿಕ್ ಹಾಗೂ ಸ್ಟಾಂಡರ್ಡ್ ಡೆಬಿಟ್ ಕಾರ್ಡ್‌ಗೆ ಸೊನ್ನೆಯಿಂದ 150 ರೂಪಾಯಿವರೆಗೆ ಶುಲ್ಕವಿದೆ. ಹಾಗೆಯೇ ಪ್ಲಾಟಿನಂ, ಬ್ಯುಜಿನೆಟ್ ಹಾಗೂ ಸೆಲೆಕ್ಟ್ ಕಾರ್ಡ್ ಶುಲ್ಕವನ್ನು 50 ರೂಪಾಯಿಯಿಂದ 150 ರೂಪಾಯಿಗೆ ಹೆಚ್ಚಿಸಲಾಗಿದೆ. ಸ್ಟಾಡರ್ಡ್ ಅಥವಾ ಕ್ಲಾಸಿಕ್ ಡೆಬಿಟ್ ಕಾರ್ಡ್‌ಗೆ ವಾರ್ಷಿಕ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಸುಮಾರು 200 ರೂಪಾಯಿಗೆ ವಾರ್ಷಿಕ ಶುಲ್ಕ ಏರಿಕೆ ಮಾಡಲಾಗಿದೆ. ಪ್ಲಾಟಿನಮ್ ಮತ್ತು ಬ್ಯುಜಿನೆಸ್ ಕಾರ್ಡ್‌ಗೆ ವಾರ್ಷಿಕ ಶುಲ್ಕವನ್ನು 500 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ನಿರ್ದಿಷ್ಟ ಡೆಬಿಟ್ ಕಾರ್ಡ್‌ಗಳಿಗೆ ವಾರ್ಷಿಕ ಶುಲ್ಕವಾಗಿ 1000 ರೂಪಾಯಿ ವಿಧಿಸುವುದನ್ನು ಕೆನರಾ ಬ್ಯಾಂಕ್ ಮುಂದುವರಿಸುವ ಕುರಿತು ಮಾಹಿತಿ ನೀಡಿದೆ.

ಸ್ಟಾಡರ್ಡ್ ಅಥವಾ ಕ್ಲಾಸಿಕ್ ಕಾರ್ಡ್‌ಗೆ ದೈನಂದಿನ ಎಟಿಎಂ ವಿತ್‌ಡ್ರಾ ಮಿತಿ 40 ಸಾವಿರವಾಗಿದ್ದು ದೈನಂದಿನ ವಹಿವಾಟು ಮಿತಿ 1 ಲಕ್ಷ ರೂಪಾಯಿ ಆಗಿದೆ. ಪ್ಲಾಟಿನಂ/ಸೆಲೆಕ್ಟ್ ಕಾರ್ಡ್‌ಗಳಿಗೆ ದೈನಂದಿನ ಎಟಿಎಂ ವಿತ್‌ಡ್ರಾ ಮಿತಿ 50 ಸಾವಿರವಾಗಿದೆ. ದೈನಂದಿನ ವಹಿವಾಟು ಮಿತಿ 2 ಲಕ್ಷ ರೂಪಾಯಿ ಆಗಿದ್ದು, ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕವನ್ನು ಕೂಡಾ ಏರಿಕೆ ಮಾಡಿದೆ. ಬ್ಯುಜಿನೆಸ್ ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕವಾಗಿ ಬ್ಯಾಂಕ್ ವಾರ್ಷಿಕವಾಗಿ 300 ರೂಪಾಯಿ ವಿಧಿಸಲಾಗುತ್ತದೆ. ಇದರ ಜೊತೆಗೆ ಬೇರೆ ಪಾವತಿ ವಿಧಾನವು ಉಚಿತವಾಗಿದ್ದು ಬೇರೆ ಕಾರ್ಡ್‌ಗಳಿಗೆ ಯಾವುದೇ ರೀತಿಯ ಶುಲ್ಕವಿಲ್ಲ. ಈ ಹಿಂದೆ ಕೆನರಾ ಬ್ಯಾಂಕ್ ಒಂದು ತ್ರೈಮಾಸಿಕಕ್ಕೆ 15 ರೂಪಾಯಿ ಎಸ್‌ಎಂಎಸ್‌ ಶುಲ್ಕವನ್ನು ವಿಧಿಸಲಾಗುತ್ತಿತ್ತು. ಆದರೆ ಈ ಶುಲ್ಕವನ್ನು ತೆಗೆಯಲಾಗಿತ್ತು. ಇದೀಗ ಮತ್ತೆ ಶುಲ್ಕವನ್ನು ಆರಂಭಿಸಲಾಗಿದ್ದು ಒಂದು ತ್ರೈಮಾಸಿಕಕ್ಕೆ 15 ರೂಪಾಯಿ ಎಸ್‌ಎಂಎಸ್‌ ಶುಲ್ಕವಾಗಿ ವಿಧಿಸಲಾಗುತ್ತದೆ.

ಬ್ಯುಜಿನೆಸ್ ಕಾರ್ಡ್
ಆಕ್ಟಿವೇಷನ್/ಮೆಂಬರ್‌ಶಿಪ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎನ್‌ರೋಲ್‌ಮೆಂಟ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ವಾರ್ಷಿಕ ಶುಲ್ಕ: ಹಳೆ ಕಾರ್ಡ್‌ಗೆ 300 ರೂ, ಹೊಸ ಕಾರ್ಡ್‌ಗೆ 500 ರೂಪಾಯಿ ಆಗಿದೆ.
ಕಾರ್ಡ್ ಬದಲಾವಣೆ ಶುಲ್ಕ: ಹಳೆ ಕಾರ್ಡ್‌ಗೆ 50 ರೂಪಾಯಿ , ಹೊಸ ಕಾರ್ಡ್‌ಗೆ 150 ರೂಪಾಯಿ
ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕ: ಹಳೆ ಕಾರ್ಡ್‌ಗೆ 300 ರೂಪಾಯಿ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎಸ್‌ಎಂಎಸ್ ಅಲರ್ಟ್ ಶುಲ್ಕ (ತ್ರೈಮಾಸಿಕ): 15 ರೂಪಾಯಿ ಆಗಿದೆ.

ಕ್ಲಾಸಿಕ್‌/ಸ್ಟಾಡರ್ಡ್ ಕಾರ್ಡ್
ಆಕ್ಟಿವೇಷನ್/ಮೆಂಬರ್‌ಶಿಪ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎನ್‌ರೋಲ್‌ಮೆಂಟ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ವಾರ್ಷಿಕ ಶುಲ್ಕ: ಹಳೆ ಕಾರ್ಡ್‌ಗೆ 125 ರೂ, ಹೊಸ ಕಾರ್ಡ್‌ಗೆ 200 ರೂಪಾಯಿ ಆಗಿದೆ.
ಕಾರ್ಡ್ ಬದಲಾವಣೆ ಶುಲ್ಕ: ಹಳೆ ಕಾರ್ಡ್‌ಗೆ ಇಲ್ಲ, ಹೊಸ ಕಾರ್ಡ್‌ಗೆ 150 ರೂಪಾಯಿ ಆಗಿದೆ.
ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎಸ್‌ಎಂಎಸ್ ಅಲರ್ಟ್ ಶುಲ್ಕ (ತ್ರೈಮಾಸಿಕ): 15 ರೂಪಾಯಿ ಆಗಿದೆ.

ಪ್ಲಾಟಿನಂ ಕಾರ್ಡ್
ಆಕ್ಟಿವೇಷನ್/ಮೆಂಬರ್‌ಶಿಪ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎನ್‌ರೋಲ್‌ಮೆಂಟ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ವಾರ್ಷಿಕ ಶುಲ್ಕ: ಹಳೆ ಕಾರ್ಡ್‌ಗೆ 250 ರೂ, ಹೊಸ ಕಾರ್ಡ್‌ಗೆ 500 ರೂಪಾಯಿ ಆಗಿದೆ.
ಕಾರ್ಡ್ ಬದಲಾವಣೆ ಶುಲ್ಕ: ಹಳೆ ಕಾರ್ಡ್‌ಗೆ 50 ರೂಪಾಯಿ , ಹೊಸ ಕಾರ್ಡ್‌ಗೆ 150 ರೂಪಾಯಿ
ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎಸ್‌ಎಂಎಸ್ ಅಲರ್ಟ್ ಶುಲ್ಕ (ತ್ರೈಮಾಸಿಕ): 15 ರೂಪಾಯಿ ಆಗಿದೆ.

ಸೆಲೆಕ್ಟ್ ಡೆಬಿಟ್ ಕಾರ್ಡ್

ಎನ್‌ರೋಲ್‌ಮೆಂಟ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಆಕ್ಟಿವೇಷನ್/ಮೆಂಬರ್‌ಶಿಪ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ವಾರ್ಷಿಕ ಶುಲ್ಕ: ಹಳೆ ಕಾರ್ಡ್‌ಗೆ 1000 ರೂ, ಹೊಸ ಕಾರ್ಡ್‌ಗೆ 1000 ರೂಪಾಯಿ ಆಗಿದೆ.
ಕಾರ್ಡ್ ಬದಲಾವಣೆ ಶುಲ್ಕ: ಹಳೆ ಕಾರ್ಡ್‌ಗೆ 50 ರೂಪಾಯಿ , ಹೊಸ ಕಾರ್ಡ್‌ಗೆ 150 ರೂಪಾಯಿ
ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕ: ಹಳೆ ಕಾರ್ಡ್‌ಗೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎಸ್‌ಎಂಎಸ್ ಅಲರ್ಟ್ ಶುಲ್ಕ (ತ್ರೈಮಾಸಿಕ): 15 ರೂಪಾಯಿ ಆಗಿದೆ.

Leave A Reply

Your email address will not be published.