ಈ ಸ್ಕೂಲ್‌ನಲ್ಲಿ ಯಾರಿಗೂ ಲವ್ವಾಗೋದೇ ಇಲ್ವಂತೆ | ಅಷ್ಟಕ್ಕೂ ಆ ಸ್ಕೂಲ್‌ನಲ್ಲಿದೆ ಪವರ್‌ಫುಲ್ ರೂಲ್ಸ್ | ಏನದು ಗೊತ್ತೇ?
ಈಗ ಚಿಕ್ಕ ಮಕ್ಕಳಿಂದ ಹಿಡಿದು ಕಾಲೇಜು ಮೆಟ್ಟಲೇರೋ ಯುವ ಜನತೆ ಎಲ್ಲರಿಗೂ ಲವ್ ಅನ್ನೋದು ಕಾಮನ್ ವಿಚಾರವಾಗಿ ಮಾರ್ಪಟ್ಟಿದೆ.
ಹಿಂದಿನ ಕಾಲದಲ್ಲಿ ಪೋಷಕರು ಮಕ್ಕಳು ಕಾಲೇಜು ಮೆಟ್ಟಿಲು ಹತ್ತಿದರೆ ಹಾಳಾಗಿ ಬಿಡುತ್ತಾರೆ ಅನ್ನೋ ಭಯದಲ್ಲಿ ಶಾಲೆಗೆ ಓದಿಗೆ ತಿಲಾಂಜಲಿ ಇಡಿಸಿ ಬಿಡುತ್ತಿದ್ದರು. ಈಗ ಕಾಲ ಬದಲಾಗಿದೆ ಅಂದುಕೊಂಡರೂ ಜನರ ಮನಸ್ಥಿತಿ ಬದಲಾಗಿಲ್ಲ ಅನ್ನೋದು ಕಟು ಸತ್ಯ. ಮಕ್ಕಳು ಎಲ್ಲಿ ಬೇಡದ ಚಟಗಳಿಗೆ ದಾಸರಾಗಿ ಲವ್ವು ಡವ್ವಿ ಎಂದು ಊರೂರು ಅಲೆಯುತ್ತಾರೋ ಎಂಬ ಆತಂಕ ಸಹಜವಾಗಿ ಎಲ್ಲ ಪೋಷ ಕರಿಗೂ ಇರುವಂಥದ್ದು. ಹಾಗಾಗಿ, ಮಕ್ಕಳ ನಡೆ ನುಡಿ ಮೇಲೆ ಹೆಚ್ಚಿನ ಗಮನ ಹರಿಸುವುದು ಕೂಡ ಇದೆ. ಆದ್ರೆ, ಯುಕೆಯ ಶಾಲೆಯಲ್ಲಿ ಹುಡುಗ-ಹುಡುಗೀರು ಪರಸ್ಪರ ಶೇಕ್ ಹ್ಯಾಂಡ್ ಕೊಡೋ ಹಾಗಿಲ್ಲ ಅಂದ್ರೆ ನಂಬಲಸಾಧ್ಯ. ಅಷ್ಟೆ ಅಲ್ಲ ಕಣ್ರೀ..ಹಗ್ ಕೂಡ ಮಾಡಬಾರದು.
ನೂರಾರು ಕನಸುಗಳ ಜೊತೆಗೆ ವಯೋಸಹಜ ಆಕರ್ಷಣೆಗೆ ಒಳಗಾಗಿ ಪ್ರೀತಿಯ ಬಲೆಯಲ್ಲಿ ಬಿದ್ದು ಪ್ರಣಯ ಹಕ್ಕಿಗಳು ಎಲ್ಲೆಡೆ ಗುರುತಿಸಿಕೊಂಡು ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆದರೆ, ಮತ್ತೆ ಕೆಲವು ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪ ಎದ್ದು ಏಷ್ಟೋ ವರ್ಷಗಳ ಪ್ರೀತಿ ನೀರಿನ ಮೇಲಿನ ಗುಳ್ಳೆಯಂತೆ ಕ್ಷಣ ಮಾತ್ರದಲ್ಲಿ ಮುಗಿದು ನಾನೊಂದು ತೀರ.. ನೀನೊಂದು ತೀರ ಎಂದು ಬೇರೆಯಾಗುವ ಪ್ರಮೇಯ ಕೂಡ ಇದೆ. ಎಲ್ಲರ ಪ್ರೀತಿಯೂ ಹ್ಯಾಪಿ ಎಂಡಿಂಗ್ ಆಗಿರುವುದಿಲ್ಲ ಹೀಗಾಗಿ ಪ್ರೀತಿಸಿದವರೆಲ್ಲರೂ ಖುಷಿಯಾಗಿಯೂ ಇರುವುದಿಲ್ಲ. ಅದರಲ್ಲೂ ಕೆಲವೊಮ್ಮೆ ಪ್ರೀತಿಯಲ್ಲಿಯೂ ಕೆಲವೊಂದು ಚಿತ್ರ-ವಿಚಿತ್ರ ಘಟನೆಗಳೂ ನಡೆದು ಬಿಡುತ್ತವೆ.
ಯುಕೆ ಸ್ಕೂಲ್ ವಿಚಿತ್ರವಾದ ರೂಲ್ಸ್ ಜಾರಿ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಲವ್ ಎನ್ನುವ ಹುಚ್ಚಿಗೆ ಬಿದ್ದು, ನಾಲ್ಕು ದಿನ ತಿರುಗಾಡಿ ಮತ್ತೆ ಬೋರ್ ಆದಾಗ ಮತ್ತೊಬ್ಬರನ್ನು ನೋಡಿಕೊಳ್ಳುವ . ಪ್ರಮೇಯವೇ ಹೆಚ್ಚು. ಪ್ರೀತಿ (Love)ಯೆಂಬ ವಿಷಯಕ್ಕೆ ಬಂದಾಗ ಮಾನಸಿಕ (Mental) ಸಂಬಂಧಕ್ಕಿಂತ ದೈಹಿಕ (Physical) ಸಂಬಂಧಕ್ಕೇ ಹೆಚ್ಚು ಮಹತ್ವ ನೀಡುವ ಪರಿಪಾಠ ನಡೆಯುತ್ತಿದ್ದು, ಶಾಲೆ-ಕಾಲೇಜುಗಳಲ್ಲಿಯೂ ಹೆಚ್ಚು ಯುವ ಜನತೆ ಸಂಬಂಧ ಇಟ್ಟುಕೊಳ್ಳುವುದರಿಂದ ಖಿನ್ನತೆ, ಆತ್ಮಹತ್ಯೆ (Suicide), ಬೆದರಿಕೆಯ ಸಮಸ್ಯೆಗಳು ಯುವ ಜನತೆಯನ್ನು ಕಾಡಿ ಸಾವಿನ ಕದ ತಟ್ಟಿದ ಪ್ರಕರಣ ಕೂಡ ಇದೆ.
ಈ ರೀತಿಯ ಸಮಸ್ಯೆಗಳಿಗೆ ಬ್ರೇಕ್ ನೀಡುವ ಸಲುವಾಗಿ ಯು ಕೆ ಯ ಶಾಲೆಯು ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯ ದೈಹಿಕ ಸಂಪರ್ಕದಿಂದ ನಿಷೇಧಿಸುವ ಜೊತೆಗೆ ಹುಡುಗ-ಹುಡುಗಿಯರು ಅಪ್ಪುಗೆಗಳು ಮತ್ತು ಹ್ಯಾಂಡ್‌ಶೇಕ್‌ಗಳು ಕೂಡ ಮಾಡುವುದನ್ನು ನಿಷೇಧಿಸಲಾಗಿದೆ. ಚೆಲ್ಮ್ಸ್‌ಫೋರ್ಡ್‌ನಲ್ಲಿರುವ ಹೈಲ್ಯಾಂಡ್ಸ್ ಶಾಲೆಯ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ತಬ್ಬಿಕೊಳ್ಳಲು, ಕೈ ಹಿಡಿಯಲು ಇಲ್ಲವೇ ಕೈಕುಲುಕಲು ಸಹ ಅನುಮತಿ ನೀಡುವುದಿಲ್ಲ. ಡೈಲಿ ಮೇಲ್ ವರದಿಯ ಅನುಸಾರ, ವಿದ್ಯಾರ್ಥಿಗಳ ನಡುವಿನ ಎಲ್ಲಾ ರೀತಿಯ ದೈಹಿಕ ಸಂಪರ್ಕಗಳನ್ನು ತಡೆಯುವ ನಿಟ್ಟಿನಲ್ಲಿ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿ ತ ಪತ್ರವನ್ನು ಆಡಳಿತವು ಕಳುಹಿಸಿದ್ದು ಆ ಬಳಿಕ ಈ ರೀತಿಯ ಕ್ರಮವನ್ನು ಜಾರಿಗೊಳಿಸಲಾಗಿದೆ ಎನ್ನಲಾಗಿದೆ.
ಪೋಷಕರಿಗೆ ಕಳುಹಿಸಿದ ಪತ್ರದಲ್ಲಿ ಈ ರೀತಿಯ ಸಂದೇಶ ರವಾನೆ ಮಾಡಲಾಗಿದ್ದು, ‘ಇದು ನಿಮ್ಮ ಮಗುವನ್ನು ಸುರಕ್ಷಿತವಾಗಿರಿಸಲು ತೆಗೆದುಕೊಳ್ಳುತ್ತಿರುವ ಕ್ರಮವಾಗಿದ್ದು, ನಿಮ್ಮ ಮಗು ಬೇರೆಯವರನ್ನು ಸ್ಪರ್ಶಿಸುತ್ತಿದ್ದರೆ, ಅವರು ಒಪ್ಪಿಗೆ ಇದ್ದರೂ ಕೂಡ ಅಥವಾ ಇಲ್ಲದೇ ಇದ್ದರೂ ಪರವಾಗಿಲ್ಲ.
ಈ ವೇಳೆ ಏನು ಬೇಕಾದರೂ ಆಗುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಗಾಯ ಉಂಟಾಗಬಹುದು. ಇಲ್ಲವೇ ಯಾರಾದರೂ ತುಂಬಾ ಅನಾನುಕೂಲತೆಯನ್ನು ಅನುಭವಿಸಬಹುದು ಅಥವಾ ಯಾರನ್ನಾದರೂ ಅನುಚಿತವಾಗಿ ಸ್ಪರ್ಶಿಸಬಹುದು’. ಹೀಗಾಗಿ ಈ ನಿಯಮ ನಿಮ್ಮ ಮಗುವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನ ಎನ್ನಲಾಗಿದೆ.
ಈ ಹೊಸ ನಿಯಮಗಳ ಅನುಸಾರ , ಕ್ಯಾಂಪಸ್‌ನಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ . ಅಲ್ಲದೆ, ವಿದ್ಯಾರ್ಥಿಯೊಬ್ಬ ಫೋನ್ ಬಳಸಿ ಸಿಕ್ಕಿಬಿದ್ದಲ್ಲಿ ಅದನ್ನು ಒಂದು ದಿನದ ಮಟ್ಟಿಗೆ ಸುರಕ್ಷಿತವಾಗಿ ಲಾಕ್ ಮಾಡಲಾಗುತ್ತದೆ ಎನ್ನಲಾಗಿದೆ. ಕೆಲ ಪೋಷಕರು ಶಾಲೆಯ ಹೊಸ ನಿಯಮಕ್ಕೆ (Rules) ಖುಷಿ ವ್ಯಕ್ತ ಪಡಿಸಿದ್ದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಒಬ್ಬರು ಪೋಷಕರು (Parents), ‘ನನಗೆ ಇಂಥಾ ನಿಯಮ ಜಾರಿಗೆ ತಂದಿದ್ದಾರೆ ಎಂಬುದನ್ನು ನಂಬಲಸಾಧ್ಯ. ಅನುಚಿತ ಸ್ಪರ್ಶ, ಹೊಡೆಯುವುದು ಮತ್ತು ಗುದ್ದುವುದರ ವಿರುದ್ಧ ಖಂಡಿತವಾಗಿ ವ್ಯವಹರಿಸಬೇಕು ಎಂದು ನಾನು ಸಮರ್ಥಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ , ಈ ನಡುವೆ ವಿದ್ಯಾರ್ಥಿಗಳಿಗೆ ಆರೋಗ್ಯಕರ ಸಂಬಂಧವನ್ನು ಹೇಗೆ ಹೊಂದಬೇಕೆಂದು ಎಂಬುದನ್ನು ಹೇಳಿಕೊಡುವ ಅವಶ್ಯಕತೆ ಇದೆ ಎಂದು ಪೋಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.