ಸಚಿವರ ನಾಲಿಗೆಯನ್ನು ಕತ್ತರಿಸಿದವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿದ ಧರ್ಮಗುರು!
ಪವಿತ್ರ ಗ್ರಂಥ ರಾಮಚರಿತಮಾನಸವು ಸಮಾಜದಲ್ಲಿ ದ್ವೇಷ ಮತ್ತು ಒಡಕು ಮೂಡಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರನ್ನು ತಕ್ಷಣವೇ ನಿತೀಶ್ ಕುಮಾರ್ ಸರ್ಕಾರ ವಜಾಗೊಳಿಸಬೇಕು ಎಂದು ಅಯೋಧ್ಯಾ ಧರ್ಮಗುರು ಜಗದ್ಗುರು ಪರಮಹಂಸ ಆಚಾರ್ಯ ಒತ್ತಾಯಿಸಿದ್ದಾರೆ.
ಬಿಹಾರದ ಶಿಕ್ಷಣ ಸಚಿವರು ರಾಮಚರಿತಮಾನಸ ಪುಸ್ತಕವನ್ನು ದ್ವೇಷ ಹರಡುವ ಪುಸ್ತಕ ಎಂದು ಬಣ್ಣಿಸಿರುವ ರೀತಿ, ಇಡೀ ದೇಶಕ್ಕೆ ನೋವಾಗಿದೆ, ಇದು ಎಲ್ಲಾ ಸನಾತನಿಗೆ ಅವಮಾನವಾಗಿದೆ ಮತ್ತು ಈ ಹೇಳಿಕೆಗಾಗಿ ನಾನು ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇನೆ. ಒಂದು ವಾರದೊಳಗೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರು ಕ್ಷಮೆಯಾಚಿಸಬೇಕು, ಇದು ಸಂಭವಿಸದಿದ್ದರೆ, ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ನಾಲಿಗೆಯನ್ನು ಕತ್ತರಿಸುವ ಯಾರಿಗಾದರೂ ನಾನು 10 ಕೋಟಿ ರೂಪಾಯಿ ಬಹುಮಾನ ಘೋಷಿಸುತ್ತೇನೆ ಎಂದು ಅಯೋಧ್ಯೆಯ ಪ್ರಭಾವಿ ಧರ್ಮಗುರು ಜಗದ್ಗುರು ಪರಮಹಂಸ ಆಚಾರ್ಯ ಹೇಳಿದ್ದಾರೆ.
ರಾಮಾಯಣವನ್ನು ಆಧರಿಸಿದ ರಾಮಚರಿತಮಾನಸ ಎಂಬ ಮಹಾಕಾವ್ಯವು ಹಿಂದೂ ಧಾರ್ಮಿಕ ಪುಸ್ತಕವಾಗಿದ್ದು “ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ” ಎಂದು ಹೇಳುವುದರ ಮೂಲಕ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದವನ್ನು ಹುಟ್ಟುಹಾಕಿದ್ದಾರೆ. ನಳಂದ ಮುಕ್ತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್ ಅವರು ರಾಮಚರಿತಮಾನಸಗಳು ಮತ್ತು ಮನುಸ್ಮೃತಿ ಸಮಾಜವನ್ನು ವಿಭಜಿಸುವ ಪುಸ್ತಕಗಳು ಎಂದು ಬಣ್ಣಿಸಿದ್ದರು.
ಮುಂದೆ ಮಾತನಾಡಿದ್ದ ಅವಲು ‘ಮನುಸ್ಮೃತಿಯನ್ನು ಏಕೆ ಸುಡಲಾಯಿತು, ಏಕೆಂದರೆ ಅದರಲ್ಲಿ ದೊಡ್ಡ ವರ್ಗದ ವಿರುದ್ಧ ಅನೇಕ ನಿಂದನೆಗಳನ್ನು ನೀಡಲಾಗಿತ್ತು. ಕೆಳಜಾತಿಯವರಿಗೆ ಶಿಕ್ಷಣವನ್ನು ಪ್ರವೇಶಿಸಲು ಅವಕಾಶವಿರಲಿಲ್ಲ ಮತ್ತು ಕೆಳಜಾತಿಯ ಜನರು ವಿಷಪೂರಿತರಾಗುತ್ತಾರೆ.ಎಂದು ಅವುಗಳಲ್ಲಿ ಹೇಳಲಾಗಿತ್ತು. ಇದರಿಂದ ದಲಿತರು-ಹಿಂದುಳಿದವರು ಹಾಗೂ ಸಮಾಜದಲ್ಲಿನ ಮಹಿಳೆಯರು ಶಿಕ್ಷಣ ಪಡೆಯುವುದನ್ನು ನಿರಾಕರಿಸಲಾಗಿತ್ತು. ಇದರಿಂದ ಮನುಸ್ಮೃತಿ ಮತ್ತು ರಾಮಚರಿತಮಾನಸಗಳು ಸಮಾಜದಲ್ಲಿ ದ್ವೇಷವನ್ನು ಹರಡುವ ಪುಸ್ತಕಗಳಾಗಿವೆ, ದ್ವೇಷವು ದೇಶವನ್ನು ಶ್ರೇಷ್ಠಗೊಳಿಸುವುದಿಲ್ಲ, ಪ್ರೀತಿಯು ದೇಶವನ್ನು ಶ್ರೇಷ್ಠಗೊಳಿಸುತ್ತದೆ” ಎಂದು ಸಚಿವರು ಹೇಳಿದ್ದರು.
ಇದೆಲ್ಲದರ ಕುರಿತು ಪ್ರತಿಕ್ರಿಯಿಸಿದ ಧರ್ಮಗುರುಗಳು ‘ಅಂತಹ ಟೀಕೆಗಳನ್ನು ಸಹಿಸಲಾಗುವುದಿಲ್ಲ. ಏಕೆಂದರೆ ರಾಮಚರಿತಮಾನಸವು ಪ್ರತಿಯೊಬ್ಬರನ್ನೂ ಬೆಸೆಯುವ ಪುಸ್ತಕವಾಗಿದೆಯೇ ಹೊರತು ಅದು ವಿಭಜಿಸುವುದಿಲ್ಲ. ರಾಮಚರಿತ ಮಾನಸವು ಮಾನವೀಯತೆಯನ್ನು ಸ್ಥಾಪಿಸುವ ಪುಸ್ತಕವಾಗಿದೆ. ಇದು ಭಾರತೀಯ ಸಂಸ್ಕೃತಿಯ ರೂಪ, ಇದು ನಮ್ಮ ದೇಶದ ಹೆಮ್ಮೆ. ರಾಮಚರಿತಮಾನಸ ದ ಮೇಲಿನ ಇಂತಹ ಕಾಮೆಂಟ್‌ಗಳನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.
ಸಚಿವರ ಈ ಹೇಳಿಕೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಮತ್ತೊಬ್ಬ ಅರ್ಚಕ ಚಂದ್ರಶೇಖರನನ್ನು ಅನಾಗರಿಕ ಎಂದು ಕರೆದಿದ್ದಾರೆ. ‘ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರು ಅಶಿಕ್ಷಿತ, ಅಸಂಸ್ಕೃತ ವ್ಯಕ್ತಿಯಾಗಿದ್ದು, ರಾಮಚರಿತಮಾನಗಳ ಬಗ್ಗೆ ಏನೂ ತಿಳಿದಿಲ್ಲ. ರಾಮಚರಿತಮಾನಗಳು ಇಡೀ ಸಮಾಜವನ್ನು ಸಂಪರ್ಕಿಸುವ ಉದ್ದೇಶವಾಗಿದೆ. ರಾಮ ಎಲ್ಲರಿಗೂ ಸೇರಿದವರೈ. ರಾಮ ಪ್ರತಿಯೊಬ್ಬ ಭಾರತೀಯನ ಆತ್ಮ. ಶಿಕ್ಷಣ ಸಚಿವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಅವರು ಬಿಹಾರ ಸರ್ಕಾರವನ್ನು ಅವರು ಒತ್ತಾಯಿಸಿದರು.
‘ಬಹುಸಂಖ್ಯಾತ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಸಚಿವರು ಮಾಡುತ್ತಿದ್ದಾರೆ. ಇದಕ್ಕೆ ನಮ್ಮೆಲ್ಲರ ಆಕ್ಷೇಪವಿದೆ. ರಾಮ ಭಗವಾನ್ ಮರ್ಯಾದೆಯ ಶಿಖರವಾಗಿತ್ತು. ಈ ದೇವರು ಇಡೀ ಜಗತ್ತಿಗೆ ಘನತೆ, ಮಾನವೀಯತೆ ಮತ್ತು ಜೀವನದ ಪಾಠವನ್ನು ಕಲಿಸಿದ್ದಾನೆ ಎಂದು ಅವರು ಹೇಳಿದ್ದಾರೆ.