Free Credit Card Offer: ಹೊಸ ಕ್ರೆಡಿಟ್‌ ಕಾರ್ಡ್‌ಗೆ ಅಪ್ಲೈ ಮಾಡುವ ಯೋಚನೆಯಲ್ಲಿದ್ದೀರಾ ? ಹಾಗಾದರೆ ಇಲ್ಲಿದೆ ನಿಮಗೊಂದು ಹೊಸ ಸುದ್ದಿ

ಕ್ರೆಡಿಟ್ ಕಾರ್ಡ್ ನಮಗೆ ನಗದುರಹಿತ ವಹಿವಾಟು ನಡೆಸಲು ಸಾಧ್ಯ ಮಾಡಿಕೊಡುತ್ತದೆ. ನಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಮೂಲಕ ಸಾಲದ ರೂಪದಲ್ಲಿ ನಾವು ಖರ್ಚು ಮಾಡಬಹುದು. ಮುಖ್ಯವಾಗಿ ಪ್ರತಿಯೊಂದು ಕ್ರೆಡಿಟ್ ಕಾರ್ಡ್‌ಗೂ ನಿರ್ದಿಷ್ಟ ಸಾಲ ಮಿತಿ ಒಸಗಿಸಲಾಗಿರುತ್ತದೆ. ಆದ್ದರಿಂದ ಇನ್ನೊಂದು ಕ್ರೆಡಿಟ್ ಕಾರ್ಡ್ ಕೊಳ್ಳಲು ಬಯಸಿದ್ದರೆ ನಿಮಗೆ ಇಲ್ಲಿದೆ ಹೊಸ ಮಾಹಿತಿ.

ಹೌದು ನೀವೂ ಹೊಸ ಕ್ರೆಡಿಟ್ ಕಾರ್ಡ್​ಗೆ ಅಪ್ಲೈ ಮಾಡ್ಬೇಕು ಅಂದುಕೊಂಡಿದ್ದೀರಾ. ಹಾಗಿದ್ದರೆ ನಿಮಗೆ ಅದ್ಭುತವಾದ ಆಫರ್​ ಲಭ್ಯವಿದೆ. ಬ್ಯಾಂಕ್​ ಬಂಪರ್​ ಘೋಷಿಸಿದೆ. ಈ ಕ್ರೆಡಿಟ್​ ಕಾರ್ಡ್ ಉಚಿತವಾಗಿ ಸಿಗಲಿದೆ.

ಸದ್ಯ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿರುವುದು ಗೊತ್ತೇ ಇದೆ. ಇದರ ಭಾಗವಾಗಿ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.

ಈಗ ನೀವು ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಉಚಿತವಾಗಿ ಪಡೆಯಬಹುದು. ಇದು ಸೀಮಿತ ಅವಧಿಯ ಕೊಡುಗೆಯಾಗಿದೆ. ಈ ಒಪ್ಪಂದವು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಈ ಕೊಡುಗೆಯು ಜನವರಿ 31 ರವರೆಗೆ ಲಭ್ಯವಿದೆ.

ಈ ಕ್ರೆಡಿಟ್ ಕಾರ್ಡ್ ಪಡೆಯಲು ಉದ್ದೇಶಿಸಿರುವವರು ಏರ್‌ಟೆಲ್ ಥ್ಯಾಂಕ್ಸ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್‌ಗೆ ಹೋಗಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. 18 ರಿಂದ 70 ವರ್ಷದೊಳಗಿನವರು ಈ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

ಮೊಬೈಲ್, ವೈಫೈ, ಡಿಟಿಎಚ್, ಏರ್‌ಟೆಲ್ ಬ್ಲಾಕ್ ಇತ್ಯಾದಿಗಳಲ್ಲಿ ಕ್ಯಾಶ್‌ಬ್ಯಾಕ್ ಪಡೆಯಬಹುದು. ಯುಟಿಲಿಟಿ ಬಿಲ್ ಪಾವತಿಗಳಲ್ಲಿ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಮಾಡಿದ ಪಾವತಿಗಳಿಗೆ ಇದು ಅನ್ವಯಿಸುತ್ತದೆ. ಶಾಪಿಂಗ್ ಮತ್ತು ಪ್ರಯಾಣದಂತಹ ಇತರ ವಿಷಯಗಳ ಮೇಲೆ ನೀವು ಕ್ಯಾಶ್ ಬ್ಯಾಕ್ ಪಡೆಯಬಹುದು.

ಏರ್‌ಟೆಲ್ ಗ್ರಾಹಕರು ಈ ಕ್ರೆಡಿಟ್ ಕಾರ್ಡ್ ಮೂಲಕ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಈ ಕ್ರೆಡಿಟ್ ಕಾರ್ಡ್‌ನಲ್ಲಿ ಸ್ವಾಗತ ಪ್ರಯೋಜನಗಳು, ಕ್ಯಾಶ್ ಬ್ಯಾಕ್ ಬಹುಮಾನಗಳು, ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲಾಂಜ್, ಇಂಧನ ಸರ್ಚಾರ್ಜ್ ಮನ್ನಾ ಮುಂತಾದ ಪ್ರಯೋಜನಗಳು ಸಹ ಲಭ್ಯವಿವೆ. ಈ ಕಾರ್ಡ್‌ನೊಂದಿಗೆ ವಾರ್ಷಿಕ ರೂ. 18 ಸಾವಿರದವರೆಗೆ ಉಳಿತಾಯ ಮಾಡಬಹುದು ಎಂದು ಬ್ಯಾಂಕ್ ಹೇಳಿಕೊಂಡಿದೆ.

ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವವರಿಗೆ ರೂ.500 ಉಚಿತ ಅಮೆಜಾನ್ ವೋಚರ್ ಸಿಗುತ್ತದೆ. ಅಲ್ಲದೆ, ಏರ್‌ಟೆಲ್ ಮೊಬೈಲ್, ಬ್ರಾಡ್‌ಬ್ಯಾಂಡ್, ವೈಫೈ, ಡಿಟಿಎಚ್ ಬಿಲ್ ಪಾವತಿಗಳಲ್ಲಿ ಶೇಕಡಾ 25 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ. ಯುಟಿಲಿಟಿ ಪಾವತಿಗಳ ಮೇಲೆ ನೀವು 10 ಪ್ರತಿಶತ ಕ್ಯಾಶ್​​ಬ್ಯಾಕ್​ ಪಡೆಯಬಹುದು.

Zomato, Swiggy, Big Basket ನಂತಹ ವಹಿವಾಟುಗಳ ಮೇಲೆ 10 ಪ್ರತಿಶತದಷ್ಟು ಕ್ಯಾಶ್ ಬ್ಯಾಕ್. ಇತರ ವೆಚ್ಚಗಳ ಮೇಲೆ 1 ಪ್ರತಿಶತ ಅನಿಯಮಿತ ಕ್ಯಾಶ್‌ಬ್ಯಾಕ್. ಕ್ಯಾಲೆಂಡರ್ ವರ್ಷದಲ್ಲಿ ಏರ್‌ಪೋರ್ಟ್ ಲಾಂಜ್ ಪ್ರವೇಶವು 4 ಬಾರಿ ಲಭ್ಯವಿದೆ. ರೆಸ್ಟೊರೆಂಟ್‌ಗಳಲ್ಲಿ ಶೇಕಡಾ 20 ರಷ್ಟು ರಿಯಾಯಿತಿಯನ್ನು ಪಡೆಯಬಹುದು ಎಂಬ ಮಾಹಿತಿ ಇದೆ.

Leave A Reply

Your email address will not be published.