World Passport Ranking 2023: ಜಗತ್ತಿನ ಅತ್ಯಂತ ಶಕ್ತಿಶಾಲಿ Passport ಈ ದೇಶಕ್ಕೆ ಸಿಕ್ಕಿದೆ | ಅಷ್ಟಕ್ಕೂ ಭಾರತಕ್ಕೆ World Rankingನಲ್ಲಿ ಎಷ್ಟನೇ ಸ್ಥಾನ?

ಪ್ರಪಂಚದಾದ್ಯಂತ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚಾರ ಮಾಡುವಾಗ ಪಾಸ್‌ಪೋರ್ಟ್‌ ಮಹತ್ತರ ಪಾತ್ರ ವಹಿಸುತ್ತವೆ. ಪಾಸ್‌ಪೋರ್ಟ್ ಇದ್ದರೆ ಮಾತ್ರ ನೀವು ಬೇರೆ ಯಾವುದೇ ದೇಶವನ್ನು ಪ್ರವೇಶಿಸಲು ಸಾಧ್ಯ ಜೊತೆಗೆ ನಿಮ್ಮ ಪೌರತ್ವವನ್ನು ಸಾಬೀತುಪಡಿಸಲು ನಿಮಗೆ ಪಾಸ್‌ಪೋರ್ಟ್ ಅತ್ಯಗತ್ಯವಾಗಿದ್ದು,ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಯಾವುದು?ಎಂಬ ಕುತೂಹಲಕಾರಿ ಮಾಹಿತಿ ನಿಮಗೆ ತಿಳಿದಿದೆಯೇ??? ಗೊತ್ತಿಲ್ಲ ಎಂದಾದರೆ ಆ ಬಗ್ಗೆ ನಾವು ಹೇಳ್ತೀವಿ ಕೇಳಿ!!

ಲಂಡನ್ ಮೂಲದ ಟ್ರಾವೆಲ್ ಹೆನ್ಲಿ ಮತ್ತು ಪಾರ್ಟ್‌ನರ್ಸ್ 2023 ರ ಪಾಸ್‌ಪೋರ್ಟ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯ ಅನುಸಾರ, ಭಾರತದ ಶ್ರೇಯಾಂಕ ಶ್ಲಾಘನೀಯ ಮಟ್ಟದಲ್ಲಿದೆ. ಜಪಾನ್ ನಂಬರ್ ಒನ್ ಸ್ಥಾನವನ್ನು ಬಾಚಿಕೊಂಡಿದ್ದು ಪಟ್ಟಿಯಲ್ಲಿರುವ 109 ದೇಶಗಳ ಪೈಕಿ ಐದು ಕಳಪೆ ಪಾಸ್‌ಪೋರ್ಟ್‌ಗಳಲ್ಲಿ ಪಾಕಿಸ್ತಾನಿ ಪಾಸ್‌ಪೋರ್ಟ್ ಸ್ಥಾನ ಪಡೆದಿದೆ. ಸಿರಿಯಾ, ಇರಾಕ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತಹ ದುರ್ಬಲ ರಾಷ್ಟ್ರಗಳ ಪಾಸ್‌ಪೋರ್ಟ್‌ಗಳ ಶ್ರೇಯಾಂಕದ ಸನಿಹದಲ್ಲಿದೆ.

ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ ಜೊತೆಯಾಗಿ ಎರಡನೇ ಸ್ಥಾನವನ್ನು ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸಿದ್ದು ಬಳಿಕ ಜರ್ಮನಿ ಮತ್ತು ಸ್ಪೇನ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ಇವೆ. ಅಮೇರಿಕಾ 22 ನೇ ಸ್ಥಾನದಲ್ಲಿದ್ದು, ಇದರ ಜೊತೆಗೆ ಸ್ವಿಟ್ಜರ್ಲೆಂಡ್, ನ್ಯೂಜಿಲೆಂಡ್ ಮತ್ತು ನಾರ್ವೆ ಇದ್ದು, ಚೀನಾ ಮತ್ತು ಬೊಲಿವಿಯಾ 59 ರ ಸ್ಥಾನವನ್ನು ಹಂಚಿಕೊಂಡಿವೆ.

ಈ ದೇಶಗಳು ತಮ್ಮ ಪಾಸ್‌ಪೋರ್ಟ್‌ಗಳಲ್ಲಿ 80 ಗಮ್ಯಸ್ಥಾನ ವೀಸಾ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ರಷ್ಯಾ 37 ನೇ ಸ್ಥಾನದಲ್ಲಿದ್ದು, ಇದು 118 ಸ್ಥಳಗಳಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.

ಲಂಡನ್ ಮೂಲದ ಸಂಸ್ಥೆಯು ಬಿಡುಗಡೆ ಮಾಡಿದ ತ್ರೈಮಾಸಿಕ ವರದಿಯ ಅನುಸಾರ, ಭಾರತವು ಪಾಕಿಸ್ತಾನಕ್ಕಿಂತ ಉತ್ತಮವಾಗಿದ್ದು 85 ನೇ ಸ್ಥಾನದಲ್ಲಿದೆ. ಭಾರತವು 59 ಸ್ಥಳಗಳಿಗೆ ವೀಸಾ ಮುಕ್ತ ಅವಕಾಶ ಕಲ್ಪಿಸಿದೆ. ಜಪಾನ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿದ್ದು, ಇದು 193 ಜಾಗತಿಕ ತಾಣಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಅನುಮತಿ ನೀಡುತ್ತದೆ. ಇದು ಸತತ ಐದನೇ ವರ್ಷದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಪಟ್ಟಿಯಲ್ಲಿ ಪರಿಗಣಿಸಲಾದ 227 ಪ್ರಯಾಣದ ಸ್ಥಳಗಳಲ್ಲಿ, ಕೇವಲ 35 ಗಮ್ಯಸ್ಥಾನಗಳು ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ-ಮುಕ್ತ ಅಥವಾ ವೀಸಾ-ಆನ್-ಆಗಮನ ಪ್ರವೇಶವನ್ನು ಅನುಮತಿ ನೀಡುತ್ತವೆ. ಅದರ ಬಳಿಕ, ಸಿರಿಯಾ (25 ಗಮ್ಯಸ್ಥಾನಗಳು), ಇರಾಕ್ (29 ಗಮ್ಯಸ್ಥಾನಗಳು), ಮತ್ತು ಅಫ್ಘಾನಿಸ್ತಾನ (27 ಗಮ್ಯಸ್ಥಾನಗಳು) ಸ್ಥಾನ ಪಡೆದುಕೊಂಡಿದೆ.

Leave A Reply

Your email address will not be published.