ಜಗತ್ತಿನಲ್ಲೇ ಮುಟ್ಟಾದ ಮೊದಲ ಗಂಡಸು ಇವನು! ಈತ ಪಟ್ಟ ಕಷ್ಟ, ನರಕಗಳೂ ಯಾರಿಗೂ ಬೇಡ!

ಹೆಣ್ಣು ಮಕ್ಕಳಲ್ಲಿ ಋತುಚಕ್ರದ ಕ್ರಿಯೆ ಸಹಜವಾಗಿರುವುದು. ಅದು ಪ್ರಕೃತಿ ಸಹಜ. ಆ ಸಮಯದಲ್ಲಿ ಪಾಪ ಹೆಣ್ಣು ಜೀವಗಳ ಪರಿಸ್ಥಿತಿ ತುಂಬಾ ನೋವು, ಸಂಕಟಗಳನ್ನು ಅನುಭವಿಸುತ್ತಾರೆ. ಗಂಡಸಿಗೆ ಇದರ ಯಾವುದೇ ಪರಿವೇ ಇರುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಹುಟ್ಟಿದ ಮೇಲೆ ಋತುಚಕ್ರವನ್ನು ಅನುಭವಿಸಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈತನಿಗೆ ಮುಟ್ಟಾಗಲು ಕಾರಣವಾದರೂ ಏನು ಗೊತ್ತಾ!

ಕೊಯಮತ್ತೂರು ಮೂಲದವರಾದ ಅರುಣಾಚಲಂ ಮುರುಗಾನಂದಂ ಎಂಬ ವ್ಯಕ್ತಿಯು ಮುಟ್ಟಾದ ಮೊದಲ ಗಂಡಸರಾಗಿದ್ದಾರೆ. ಅವರು ತಮ್ಮ 39ನೇ ವಯಸ್ಸಿನಲ್ಲಿ ಶಾಂತಿಯನ್ನು ಮದುವೆಯಾದರು. ಅವರ ಹೆಂಡತಿ ಮುಟ್ಟಾದಾಗ ಬಳಸಲು ಹಳೆಯ ಚಿಂದಿ ಬಟ್ಟೆ ಹಾಗೂ ಪೇಪರ್ ಬಳಸುತ್ತಿದ್ದನ್ನು ಕಂಡು ಬಂದು ತೀರಾ ಆಘಾತಗೊಂಡರು. ಅಲ್ಲದೆ ಬಹಳಷ್ಟು ಮಹಿಳೆಯರು ಕೂಡ ಪ್ಯಾಡು ಕೊಳ್ಳಲು 4 ರೂಪಾಯಿ ಖರ್ಚು ಮಾಡಬೇಕೆಂದ ಹೀಗೆಯೇ ಮಾಡುತ್ತಾರೆಂದು ತಿಳಿದು ಬಂದಿತು. ಇದಕ್ಕೆ ಶಾಶ್ವತ ಪರಿಹಾರವನ್ನು ನೀಡಬೇಕೆಂಬ ದೃಷ್ಟಿಯಿಂದ ಹಾಗೂ ಹೆಣ್ಮಕ್ಕಳಿಗೆ ಶುಭ್ರವಾದ ಕಡಿಮೆ ಬೆಲೆಯಲ್ಲಿ ಸಿಗುವ ಪರ್ಯಾಯ ಮಾರ್ಗವನ್ನು ಹುಡುಕಲೇಬೇಕೆಂಬ ಹಲವಾರು ರೀತಿಯಾದಂತಹ ಪ್ರಯತ್ನಗಳನ್ನು ಮಾಡಲು ಆರಂಭಿಸುತ್ತಾರೆ.

ಅಲ್ಲಿಂದ ಅವರು ಪ್ಯಾಡು ಮಾಡುವ ಪ್ರಯೋಗ ಶುರುವಾಗುತ್ತದೆ. ಆರಂಭದಲ್ಲಿ ಹತ್ತಿ ಬಳಸಿ ಪ್ಯಾಡು ತಯಾರಿಸಿದರು. ಅದನ್ನು ಅವರ ಹೆಂಡತಿ ಮತ್ತು ಅಕ್ಕತಂಗಿಯರಿಗೆ ನೀಡಿದಾಗ, ಸರಿಯಿಲ್ಲವೆಂದು ನಿರಾಕರಿಸಿದರು. ಮತ್ತೆ ಅದನ್ನು ಉತ್ತಮಗೊಳಿಸಲು ಬದಲಿಸುತ್ತಾ ಹೋದರು. ಬದಲಾದಂತೆ ಅದು ಸರಿಯಿಲ್ಲ ಎಂಬ ಪ್ರತಿಕ್ರಿಯೆಯೇ ಪ್ರತಿಸಲ ಬಂತು.

ಮುರುಗಾನಂದಂ ಅವರು ಹೊಸಹೊಸ ವಿನ್ಯಾಸದದಲ್ಲಿ, ವಸ್ತುಗಳಲ್ಲಿ ಪ್ಯಾಡುಗಳನ್ನೇನೋ ಮಾಡುತ್ತ ಹೋದರು. ಆದರೆ ಪಾಪ ಅವರ ಹೆಂಡತಿ, ಸೋದರಿಯರು ತಮ್ಮ ಪರೀಕ್ಷೆ ಫಲಿತಾಂಶ ತಿಳಿಸಲು ಒಂದು ತಿಂಗಳು ಕಾಯಬೇಕಿತ್ತು. ಕೊನೆಕೊನೆಗೆ ಮನೆಯ ಹೆಣ್ಮಕ್ಕಳೆ ಊರಿ ಇವರ ವಸ್ತುಗಳಿಗೆ ಪರೀಕ್ಷಕರಾಗಿ ಆಗಿ ಬೇಸತ್ತು ಅವರ ತಲೆ ಕೆಟ್ಟಿದೆಯೆಂದು ನಿರ್ಧರಿಸಿದರು.

ಊರಿನ ಬೇರೆ ಹೆಂಗಸರಿಗೆ ತಮ್ಮ ಹೊಸಹೊಸ ವಿನ್ಯಾಸದ ಪ್ಯಾಡುಗಳನ್ನು ಕೊಟ್ಟು ಹೇಗಿವೆಯೆಂದು ಕೇಳತೊಡಗಿದರು. ಅವರು ಒಂದಷ್ಟು ದಿನ ಮಾಹಿತಿ ಕೊಟ್ಟರೂ ಮುಟ್ಟಿನ ಸೂಕ್ಷ್ಮಗಳನ್ನು ಒಂದು ಗಂಡಸಿನ ಜೊತೆ ಚರ್ಚಿಸಲು ಹಿಂಜರಿದರು. ಮೆಡಿಕಲ್ ಕಾಲೇಜಿನ ಹುಡುಗಿಯರಿಗೆ ಉಚಿತವಾಗಿ ಕೊಟ್ಟು, ಬಳಸಿದ ಪ್ಯಾಡ್‌ಗಳನ್ನು ನಂತರ ಮರಳಿ ಕೊಡಬೇಕೆಂದು ಕೇಳಿದರು. ಅದೂ ಕೂಡ ಕಷ್ಟವಾಯಿತು. ಅಲ್ಲದೆ ಹೆಣ್ಣು ಮಕ್ಕಳು ಮುಂದೆ ಬರಲಿಲ್ಲ.

ಕೊನೆಗೆ ಎಲ್ಲರೊಂದಿಗೂ ಕೇಳಿ ಕೇಳಿ, ಇದರಿಂದ ನಿರಾಶರಾದ ಮುರುಗನಂದಂ ಅವರು ಕೊನೆ ತಾವೇ ಪರೀಕ್ಷಿಸಲು ಮುಂದಾದರು. ಹೌದು ಕೋಳಿ ಮತ್ತು ಮೇಕೆಯ ರಕ್ತವನ್ನು ತುಂಬಿದ ಚೀಲಕ್ಕೆ ಸೋರುವ ಟ್ಯೂಬು ಫಿಕ್ಸ್ ಮಾಡಿ ಅದನ್ನು ಕಟ್ಟಿಕೊಂಡು ರಕ್ತಸ್ರಾವವನ್ನು ತಮ್ಮ ಪ್ಯಾಡು ಹೇಗೆ ತಡೆಯುವುದೆಂದು ಅರಿಯಲು ತಾವೇ ಸ್ವತಃ ಯತ್ನಿಸಿದರು. ಇದರಿಂದ ಪ್ಯಾಡ್ ಮೇಲೆ ರಕ್ತ ಸೋರಿದಾಗ ಅದು ಹೀರಿಕೊಳ್ಳುತ್ತದೆ ಎಂಬುದನ್ನು ಗಮನಿಸುತ್ತಾರೆ. ಇದು ಜನರಿಗೆ ತಿಳಿದು ನಗೆಪಾಟಲಿಗೀಡಾದರು. ಅವರ ಕುಟುಂಬದವರು, ಜಾತಿಯವರು ಅವರನ್ನು ದೂರವಿಟ್ಟರು. ಕೊನೆಗೆ ಹೆಂಡತಿ ಶಾಂತಿ ಮನೆ ಬಿಟ್ಟು ಹೋದರು.

ಕೊನೆಗೆ ಮುರುಗಾನಂದಂ ಅವರು ಏಕಾಂಗಿಯಾಗಿ ಉಳಿಯುತ್ತಾರೆ. ಆದರು ಹಿಡಿದ ಛಲವನ್ನು ಬಿಡುವುದಿಲ್ಲ. ಪ್ಯಾಡುಗಳು ನಂತರವೂ ಆಕಾರ ಉಳಿಸಿಕೊಳ್ಳಲು ಏನು ಮಾಡಬೇಕು? ಹೆಚ್ಚು ರಕ್ತ ಹೀರಿಕೊಂಡರೂ ಅವು ಮುದ್ದೆಯಾಗದಿರಲು ಸಾಧ್ಯವಿದೆ? ಎಂಬ ಬಗ್ಗೆ ತಲೆಕೆಡಿಸಿಕೊಂಡರು

ಕೊನೆ ಅವರ ಎಲ್ಲಾ ಪ್ರಯೋಗಗಳಿಗೆ ಉತ್ತರ ದೊರೆಯಿತು. ಆದರೆ ಅದಕ್ಕಾಗಿ 2 ವರ್ಷಗಳು ಅವರಿಗೆ ಬೇಕಾಯಿತು. ಹೌದು ಪ್ಯಾಡುಗಳು ತಮ್ಮ ಶೇಪು ಉಳಿಸಿಕೊಳ್ಳುವಂತೆ ಕಂಪನಿಗಳು ಪೈನ್‌ವುಡ್ ತಿರುಳನ್ನು ಬಳಸುತ್ತವೆಂದು ಕೊನೆಯ ಹಂತದಲ್ಲಿ ಅವರಿಗೆ ತಿಳಿಯಿತು. ವಿವಿಧ ಕಚ್ಚಾವಸ್ತುಗಳಿಂದ ಆಕಾರ ಕಳೆದುಕೊಳ್ಳದಂತೆ ಪ್ಯಾಡುಗಳನ್ನು ತಯಾರಿಸಲು ೩.೫ ಕೋಟಿ ರೂ ವೆಚ್ಚದ ಮಶೀನು ವಿದೇಶದಿಂದ ಬರಬೇಕಿತ್ತು. ಇದರಿಂದ ಪ್ಯಾಡಿನ ಬೆಲೆ ಹೆಚ್ಚಾಗುವ ಆತಂಕ ಮನೆಮಾಡಿತು.

ಆದರೆ ಅರುಣಾಚಲಂ ಅವರು ಲಭ್ಯವಿರುವ ಉಪಕರಣಗಳಿಂದ ೬೫,೦೦೦ ರೂಪಾಯಿ ವೆಚ್ಚದಲ್ಲಿ ತಾವೇ ಮಶೀನು ತಯಾರಿಸಿದರು! ಮುಂಬಯಿಯ ವ್ಯಾಪಾರಿಯೊಬ್ಬನ ಬಳಿ ಪೈನ್‌ವುಡ್ ತಿರುಳು ಕೊಂಡು, ಅದರ ನಾರು ತೆಗೆದು, ಸಣ್ಣ ಪುಡಿ ಮಾಡಿ, ಒತ್ತಿ, ಶುದ್ಧಗೊಳಿಸಿ, ಪ್ಯಾಡುಗಳ ತಯಾರಿಸಿಯೇ ಬಿಟ್ಟರು. ಐಐಟಿ ಮದ್ರಾಸಿನಲ್ಲಿ ಅದನ್ನು ತೋರಿಸಿ ಸಲಹೆ ಪಡೆದು ವಿನ್ಯಾಸ ಕೊಂಚ ಬದಲಿಸಿದರು. ನಂತರ ಕಡಿಮೆ ದರದಲ್ಲಿ ಎಲ್ಲಾ ಮಹಿಳೆಯರಿಗೂ ಕೈಗೆಟುಕುವ ದರದಲ್ಲಿ ಪ್ಯಾಡ್ ದೊರೆಯುವಂತೆ ಮಾಡಿದರು.

ಒಟ್ಟಿನಲ್ಲಿ ಅರುಣಾಚಲಂ ಮುರುಗಾನಂ ಅವರು ತಾವು ಪಣ ತೊಟ್ಟಿದ್ದನ್ನು ಸಾಧಿಸಿ ಹೆಣ್ಣು ಮಕ್ಕಳ ನೋವುಗಳಿಗೆ, ಸಂಕಟಗಳಿಗೆ ನೆರವಾದರು. ಮನೆಯ ಹೆಂಗಸರ ಮುಟ್ಟಿನ ಕುರಿತು ಮಾತನಾಡದ, ಏನೂ ಗೊತ್ತಿಲ್ಲದ, ಹಿಂಜರಿಕೆ ಅಸಡ್ಡೆ ತೋರುವ ಪುರುಷರ ನಡುವೆ ಇಂತಹ ವ್ಯಕ್ತಿ ತಾನೇ ಸ್ವತಃ ಅದನ್ನು ಪ್ರಯೋಗಿಸಿ ನೋಡಿ, ಸ್ವತಃ ಆ ಹಿಂಸೆಯನ್ನು ಅನುಭವಿಸಿ ಹೆಣ್ಣು ಮಕ್ಕಳಿಗೆ ನೆರವಾದರು ಎಂದರೆ ಅದು ಶ್ಲಾಘನೀಯ.

Leave A Reply

Your email address will not be published.