ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮಠಾದೀಶರಿಗೂ ಟಿಕೆಟ್! ಇವರೇ ನೋಡಿ ಚುನಾವಣಾ ಅಖಾಡಕ್ಕಿಳಿಯುವ ಮಠಾಧಿಪತಿಗಳು!!
ಬಿಜೆಪಿಗೆ ಚುನಾವಣಾ ಬ್ರಹ್ಮಾಸ್ತ್ರ ಎಂದರೆ ಅದು ಪ್ರಧಾನಿ ಮೋದಿಯವರು. ಯಾವುದೇ ಚುನಾವಣೆ ಬರಲಿ, ಮೋದಿ ಮೋದಿ ಎಂದು ಹೇಳಿಯೇ ಚುನಾವಣೆ ಗೆಲ್ಲಲು ಯತ್ನಿಸುತ್ತಾರೆ. ಅದಾಗ್ಯೂ ಈ ನಡುವೆ ಕರ್ನಾಟಕ ಚುನಾವಣೆಯಲ್ಲಿ ತಮ್ಮ ಬತ್ತಳಿಕೆಗೆ ಮಠಾದೀಶರ ಅಸ್ತ್ರವನ್ನು ಸೇರಿಸಲು ಬಿಜೆಪಿಗರು ಮುಂದಾಗಿದ್ದಾರೆ. ಹೌದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಠಾದೀಶರಿಗೂ ಟಿಕೆಟ್ ಕೊಡಲು ಬಿಜೆಪಿ ಚಿಂತನೆ ನಡೆಸಿದೆ. ಹಾಗಾದರೆ ಯಾವ ಮಠಾದೀಶರಿಗೆಲ್ಲಾ ಟಿಕೆಟ್ ಸಿಗಬಹುದು? ನೀವೇ ನೋಡಿ.
2019ರ ಲೋಕಸಭೆ ಚುನಾವಣೆ ವೇಳೆಯೇ ರಾಜ್ಯದಲ್ಲಿ ನೂತನ ಪ್ರಯೋಗಕ್ಕೆ ಬಿಜೆಪಿ ಮುಂದಾಗಿತ್ತು. ಚಿತ್ರದುರ್ಗ ಜಿಲ್ಲೆಯ ಮಠಾಧೀಶರೊಬ್ಬರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿತ್ತು. ಆದ್ರೆ ಹೈಕಮಾಂಡ್ ಪ್ಲ್ಯಾನ್‍ಗೆ ಕಡೇ ಕ್ಷಣದಲ್ಲಿ ಆ ಮಠಾಧೀಶರು ಒಪ್ಪದೇ ಎಲ್ಲ ಉಲ್ಟಾ ಆಯ್ತು. ಸದ್ಯ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಈ ಪ್ಲಾನ್ ಅನ್ನು ಇಂಪ್ಲಿಮೆಂಟ್ ಮಾಡಲು ತಯಾರಿ ನಡೆಸುತ್ತಿದ್ದಾರೆ.
ರಾಜ್ಯದ ನಾಲ್ಕು ಭಾಗಗಳಲ್ಲಿ ನಾಲ್ಕು ಸಮುದಾಯಗಳನ್ನೇ ಟಾರ್ಗೆಟ್ ಮಾಡಿಕೊಂಡು ನಾಲ್ಕು ಕ್ಷೇತ್ರಗಳಲ್ಲಿ ಮಠಾಧೀಶರಿಗೆ ಬಿಜೆಪಿ ಟಿಕೆಟ್ ಕಾಯ್ದಿರಿಸುವ ಕುರಿತು ಪ್ರಸ್ತಾಪ ನಡೆದಿದೆ ಎನ್ನಲಾಗಿದೆ. ಹಳೇ ಮೈಸೂರು ಭಾಗ, ಮಧ್ಯಕರ್ನಾಟಕ ಭಾಗದಲ್ಲಿ ತಲಾ ಎರಡು ಕ್ಷೇತ್ರಗಳಲ್ಲಿ ಮಠಾಧೀಶರಿಗೆ ಮೀಸಲಿಡುವ ಚರ್ಚೆ ನಡೆದಿದ್ರೆ, ಮುಂಬೈ, ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಲ್ಲಿ ಮೀಸಲಿಡುವ ಬಗೆಯೂ ಚರ್ಚೆ ಆಗಿದೆ. ಇನ್ನುಳಿದಂತೆ ಕರಾವಳಿ ಭಾಗದಲ್ಲಿ ಹಿಂದುತ್ವ ಅಜೆಂಡಾ ಬಲವಾಗಿರುವ ಕಾರಣ ಅಲ್ಲಿ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಸಲ ಬಿಜೆಪಿ ಹೈಕಮಾಂಡ್ ಮಠಾಧೀಶರಿಗೆ ಟಿಕೆಟ್ ಕೊಟ್ಟೇ ಕೊಡಬೇಕು ಎಂಬ ಹಠಕ್ಕೆ ಬೀಳುತ್ತಾ? ಫೆಬ್ರವರಿ ಮೊದಲ ವಾರದ ಎಲೆಕ್ಷನ್ ಸರ್ವೇ ಆಧರಿಸಿ ತೀರ್ಮಾನ ತೆಗೆದುಕೊಳ್ಳುತ್ತಾ? ಎಂಬ ಕುತೂಹಲ ರಾಜ್ಯ ಬಿಜೆಪಿಯಲ್ಲಿ ಮನೆ ಮಾಡಿದೆ. ಇನ್ನೊಂದೆಡೆ ಬಿಜೆಪಿ ಲೆಕ್ಕಚಾರಕ್ಕೆ ಮಠಾಧೀಶರು ಕೈಗೆ ಸಿಗ್ತಾರಾ? ಲೋಕಸಭೆ ಚುನಾವಣೆಯಲ್ಲಿ ಆದಂತೆ ಕೈ ಕೊಡ್ತಾರಾ? ಎಂಬುದನ್ನ ಕಾದುನೋಡಬೇಕಿದೆ.
ಒಟ್ಟಿನಲ್ಲಿ ಇದು ಹಿಂದುತ್ವದ ಲೆಕ್ಕಚಾರ. ಯೋಗಿ ಆದಿತ್ಯನಾಥ್ ಮಾದರಿಯನ್ನು ಅನುಸರಿಸಲು ಕರ್ನಾಟಕ ಸದ್ಯ ವೇದಿಕೆಯಾಗಿದೆ. ಇದು ಬಿಜೆಪಿಯ ಎಲೆಕ್ಷನ್ ನಯಾ ತಂತ್ರ. ಅಸ್ತ್ರಗಳ ಮೇಲೆ ಅಸ್ತ್ರ. ತಂತ್ರಗಳ ಮೇಲೆ ತಂತ್ರ..! ಇದು ಬಿಜೆಪಿ ಹೈಕಮಾಂಡ್ ಮಾಸ್ಟರ್ ಗೇಮ್. ಮೋದಿ ಬ್ರಹ್ಮಾಸ್ತ್ರದ ನಡುವೆಯೂ ಮಠಾಧೀಶರ ಅಸ್ತ್ರವೂ ಸಿದ್ಧಪಡಿಸಲು ಬಿಜೆಪಿ ಪ್ಲ್ಯಾನ್ ಮಾಡಿದೆ.