Thaikkudam Bridge Show: ಸಂಗೀತ ಪ್ರಿಯರಿಗೆ ರಸದೌತಣ : ಬೆಂಗಳೂರಲ್ಲೇ ನಡೆಯಲಿದೆ ಥೈಕ್ಕುಡಂ ಬ್ರಿಡ್ಜ್ ಸಂಗೀತ ಸಂಜೆ

ಸಂಗೀತ ಅಭಿಮಾನಿಗಳಿಗೆ ಇದೊಂದು ಉತ್ತಮ ಅವಕಾಶ ಆಗಿದೆ. ಹೌದು ನೀವೂ ಕಾಂತಾರ ಅಭಿಮಾನಿಗಳಗಿದ್ದರೇ ಈ ವಿಷಯ ತಿಳಿದುಕೊಳ್ಳಲೇ ಬೇಕು.

ಸದ್ಯ ಕಾಂತಾರ ಅಭಿಮಾನಿಗಳೇ, ಬೆಂಗಳೂರಲ್ಲೇ ನಡೆಯಲಿದೆ ಥೈಕ್ಕುಡಂ ಬ್ರಿಡ್ಜ್ ಸಂಗೀತ ಸಂಜೆ
ಇದೇ ಥೈಕ್ಕುಡಂ ಬ್ರಿಡ್ಜ್ ಟೀಮ್​ನ ಸಂಗೀತ ಸಂಜೆ ಕಾರ್ಯಕ್ರಮವೊಂದು ಬೆಂಗಳೂರಿನಲ್ಲಿ ನಡೆಯಲಿದೆ. ಇತ್ತೀಚಿಗಷ್ಟೇ ಭಾರೀ ಜನಮೆಚ್ಚುಗೆ ಗಳಿಸಿದ ಕನ್ನಡದ ಸಿನಿಮಾ ಕಾಂತಾರದ ವರಾಹ ರೂಪಂ ಹಾಡಿಗೆ ಕೃತಿಚೌರ್ಯದ ಆರೋಪ ಎದುರಾಗಿತ್ತು. ಈ ಆರೋಪ ಮಾಡಿದ್ದು ಥೈಕ್ಕುಡಂ ಬ್ರಿಡ್ಜ್.

ಇದೀಗ ಥೈಕ್ಕುಡಂ ಬ್ರಿಡ್ಜ್ ವಿರುದ್ಧ ಕಾಂತಾರ ಅಭಿಮಾನಿಗಳು ಭಾರೀ ಸಿಟ್ಟಿಗೆದ್ದಿದ್ದರು. ಕೊನೆಗೆ ಥೈಕ್ಕುಡಂ ಬ್ರಿಡ್ಜ್ vs ಕಾಂತಾರ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಇದೇ ಥೈಕ್ಕುಡಂ ಬ್ರಿಡ್ಜ್ ಟೀಮ್​ನ ಸಂಗೀತ ಸಂಜೆ ಕಾರ್ಯಕ್ರಮವೊಂದು ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರಸ್ತುತ ಜನವರಿ 26 ಮತ್ತು 27 ರಂದು ಕೊತನೂರ್‌ನ ವಿಂಗ್ಸ್ ಅರೆನಾಸ್ ಮತ್ತು ನೆಕ್ಸಸ್ ಕೋರಮಂಗಲ ಮಾಲ್‌ನಲ್ಲಿ ಕೇರಳ ಮೂಲದ ಜನಪ್ರಿಯ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್‌ನ ಎರಡು ಬೃಹತ್ ಕಾರ್ಯಕ್ರಮಗಳು ನಡೆಯಲಿವೆ. ಈ ಎರಡೂ ಪ್ರದರ್ಶನಗಳು ಸಂಜೆ 6 ಗಂಟೆಗೆ ಪ್ರಾರಂಭವಾಗಲಿವೆ. ಈ ಸಂಗೀತ ಸಂಜೆಯ ಟಿಕೆಟ್​ಗಳು ₹1,268 ರಿಂದ ಆರಂಭವಾಗಲಿವೆ. ಎಲ್ಲಾ ವಯೋಮಾನದವರಿಗೆ ಈ ಈವೆಂಟ್​ಗಳು ಪ್ರವೇಶ ಮುಕ್ತವಾಗಿದೆ ಎಂದು ತಿಳಿಸಲಾಗಿದೆ.

ಸದ್ಯ ಈ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್‌ನ ಎರಡು ಬೃಹತ್ ಕಾರ್ಯಕ್ರಮಗಳನ್ನು ನೀವು ಆನಂದಿಸಬಹುದಾಗಿದೆ.

Leave A Reply

Your email address will not be published.