ನರವಿಜ್ಞಾನಿಗಳಿಂದ ಶಾಕಿಂಗ್ ನ್ಯೂಸ್ ಬಹಿರಂಗ | ಕೊರೆಯುವ ಚಳಿ ಬ್ರೈನ್ ಸ್ಟ್ರೋಕ್‌ಗೆ ಕಾರಣವಾದೀತು ಹುಷಾರು!

Share the Article

ಈಗಿನ ಚಳಿಗಾಲದಲ್ಲಿ ಒಂಚೂರು ಚಳಿಗೆ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಯಾಕಂದ್ರೆ ನಮ್ಮ ದೇಹಕ್ಕೆ ತಡೆದುಕೊಳ್ಳಲು ಆಗದಷ್ಟು ವಿಪರೀತ ಚಳಿ ಉಂಟಾಗುತ್ತಿದೆ. ಇದರ ನಡುವೆ ನರವಿಜ್ಞಾನಿಗಳು ಬಿಗ್ ಶಾಕಿಂಗ್ ನ್ಯೂಸ್ ಒಂದನ್ನು ತಿಳಿಸಿದ್ದಾರೆ.

ಹೌದು. ಕೊರೆಯುವ ಚಳಿಗೆ ಮೆದುಳಿನ ಪಾರ್ಶ್ವವಾಯು ಮತ್ತು ಮೆದುಳಿನ ರಕ್ತಸ್ರಾವದ ಅಪಾಯ ಹೆಚ್ಚಾಗುತ್ತಿದೆ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ. ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ನರವಿಜ್ಞಾನಿ ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ನರವಿಜ್ಞಾನಿ ಅವರು ಚಳಿಗಾಲದಲ್ಲಿ ಅಧಿಕ ರಕ್ತದೊತ್ತ ಮತ್ತು ಕೆಲವೊಮ್ಮೆ ಬ್ರೈನ್ ಸ್ಟ್ರೋಕ್‌ಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಲ್ಲಿ ಮೆದುಳಿನ ಸ್ಟ್ರೋಕ್ ಅಪಾಯವು ಹೆಚ್ಚಾಗುತ್ತದೆ. ತೀವ್ರವಾದ ಶೀತ ವಾತಾವರಣದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ. ಚಳಿ ವಾತಾವರಣದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರೊಂದಿಗೆ ಚಳಿಗಾಲದಲ್ಲಿ ಬೆವರುವಿಕೆಯ ಕೊರತೆಯಿಂದಾಗಿ, ದೇಹದಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ’ ಎಂದು ಅವರು ಹೇಳಿದರು.

‘ಸೂರ್ಯನ ಶಾಖ ಕಡಿಮೆಯಿದ್ದರೆ ಅದು ಮೆದುಳಿನ ಸ್ಟ್ರೋಕ್ ಅಪಾಯವನ್ನು ಉಂಟುಮಾಡಬಹುದು. ಆದ್ದರಿಂದ, ತಾಪಮಾನವು ಅತ್ಯಂತ ಕಡಿಮೆ ಇರುವ ಸ್ಥಳಗಳಲ್ಲಿ ಹೆಚ್ಚುವರಿ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ’ ಎಂದು ಡಾ ಸಿಎಸ್ ಅಗರ್ವಾಲ್ ಹೇಳಿದ್ದಾರೆ.

Leave A Reply